ಮುಂದಿನ ಶೈಕ್ಷಣಿಕ ವರ್ಷದಿಂದ ಸ್ಕೂಲ್ ಬ್ಯಾಗ್ ಭಾರ ಇಳಿಕೆಗೆ ಕ್ರಮ: ಯಾವ ತರಗತಿ ಮಕ್ಕಳಿಗೆ ಎಷ್ಟು ತೂಕದ ಹೊರೆ?

ಶಾಲಾ ಮಕ್ಕಳಿಗೆ ಪುಸ್ತಕಗಳ ಬ್ಯಾಗ್ ಹೊರೆಯಾಗುತ್ತದೆ ಎಂಬುದು ಹಿಂದಿನಿಂದಲೂ ಇರುವ ಆರೋಪ. ಇದಕ್ಕಾಗಿ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆ ಮುಂದಾಗಿದೆ. 
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಬೆಂಗಳೂರು: ಶಾಲಾ ಮಕ್ಕಳಿಗೆ ಪುಸ್ತಕಗಳ ಬ್ಯಾಗ್ ಹೊರೆಯಾಗುತ್ತದೆ ಎಂಬುದು ಹಿಂದಿನಿಂದಲೂ ಇರುವ ಆರೋಪ. ಇದಕ್ಕಾಗಿ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆ ಮುಂದಾಗಿದೆ. 

ಮುಂದಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕದ ಶಾಲೆಗಳ ವಿದ್ಯಾರ್ಥಿಗಳು ಬ್ಯಾಗ್ ಗಳ ಹೊರೆ ಕಡಿಮೆಯಾಗಲಿದೆ. ಪೋಷಕರು ಮತ್ತು ಶಿಕ್ಷಣತಜ್ಞರು ಹಲವು ಬಾರಿ ಮನವಿ ಮಾಡಿಕೊಂಡ ನಂತರ, ರಾಜ್ಯ ಸರ್ಕಾರವು 2024-25 ನೇ ಶೈಕ್ಷಣಿಕ ವರ್ಷಕ್ಕೆ ಪಠ್ಯಪುಸ್ತಕಗಳ ಹೊರೆಯನ್ನು ಶೇಕಡಾ 50 ರಷ್ಟು ಕಡಿತಗೊಳಿಸುವ ಮೂಲಕ ಶಾಲಾ ಬ್ಯಾಗ್‌ಗಳ ತೂಕವನ್ನು ಕಡಿಮೆ ಮಾಡಲು ಕ್ರಮ ಕೈಗೊಂಡಿದೆ. 1 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಈಗ ಶೈಕ್ಷಣಿಕ ವರ್ಷದಲ್ಲಿ ಎರಡು ಬಾರಿ ಪಠ್ಯಪುಸ್ತಕಗಳನ್ನು ನೀಡಲಾಗುತ್ತದೆ, ಇದನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ (ಸಂಗ್ರಹಾತ್ಮಕ ಮೌಲ್ಯಮಾಪನ 1 ಮತ್ತು 2).

2019 ರಲ್ಲಿ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ಈ ವಿಷಯವನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಿತು, ಶಿಕ್ಷಣತಜ್ಞರು, ವೈದ್ಯರು, ಕಾನೂನು ಸಲಹೆಗಾರರು ಮತ್ತು ಮಕ್ಕಳ ವೈದ್ಯರಂತಹ ಸಂಬಂಧಪಟ್ಟವರನ್ನು ಗಣನೆಗೆ ತೆಗೆದುಕೊಂಡು ಗರಿಷ್ಠ ಅಧ್ಯಯನವನ್ನು ಕೈಗೊಂಡಿದ್ದಾರೆ. ವಿವಿಧ ತರಗತಿಗಳ ವಿದ್ಯಾರ್ಥಿಗಳಿಗೆ ಬ್ಯಾಗ್ ತೂಕದ ಮಿತಿಯನ್ನು ಇಷ್ಟು ಕೆಜಿಯವರೆಗೆ ಎಂದು ನಿರ್ಧರಿಸಲಾಗುತ್ತದೆ. ಸಮಿತಿಯು ಈ ವರ್ಷ ಅಕ್ಟೋಬರ್ 6 ರಂದು ಸಭೆ ನಡೆಸಿ ಅಕ್ಟೋಬರ್ 12 ರಂದು ವರದಿ ಸಲ್ಲಿಸಿದೆ. ಸರ್ಕಾರ ಕಳೆದ ವಾರ ಆದೇಶ ಹೊರಡಿಸಿದೆ. ಇಲಾಖೆಯು ಎರಡು ಪಠ್ಯಪುಸ್ತಕಗಳನ್ನು ಅನುಮತಿಸುವುದರೊಂದಿಗೆ, ವಿದ್ಯಾರ್ಥಿಗಳು ವರ್ಷದ ಮೊದಲಾರ್ಧದಲ್ಲಿ ಭಾಗ 1 ನ್ನು ಮತ್ತು ದ್ವಿತೀಯಾರ್ಧದಲ್ಲಿ ಎರಡನೆಯದನ್ನು ಬಳಸಬೇಕಾಗುತ್ತದೆ.

ಸಮಿತಿಯು ತನ್ನ ವರದಿಯಲ್ಲಿ 1 ಮತ್ತು 2 ನೇ ತರಗತಿಯ ವಿದ್ಯಾರ್ಥಿಗಳಿಗೆ ಬ್ಯಾಗ್ ತೂಕ 1.5 ಕೆಜಿಯಿಂದ 2 ಕೆಜಿ ಇರಬೇಕು ಎಂದು ತೀರ್ಮಾನಿಸಿದೆ. 3 ರಿಂದ 5 ನೇ ತರಗತಿಗೆ ವಿದ್ಯಾರ್ಥಿಗಳು 2 ಕೆಜಿಯಿಂದ 3 ಕೆಜಿ ವರೆಗೆ ಮತ್ತು 6 ರಿಂದ 8 ನೇ ತರಗತಿಗೆ 3 ಕೆಜಿಯಿಂದ 4 ಕೆಜಿಗೆ ಮಿತಿಗೊಳಿಸಿದೆ. 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸಮಿತಿಯು 4 ಕೆ.ಜಿ.ಯಿಂದ 5 ಕೆ.ಜಿ. ಶಾಲೆಗಳಲ್ಲಿ ಬ್ಯಾಗ್ ಲೋಡ್ ನ್ನು ಪರಿಶೀಲಿಸಬೇಕು ಮತ್ತು ಸರ್ಕಾರದ ಆದೇಶವನ್ನು ಅನುಸರಿಸಲಾಗುತ್ತಿದೆಯೇ ಎಂದು ನೋಡಲು ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲಿ ಕ್ಲಸ್ಟರ್‌ಗಳಲ್ಲಿ ಮೇಲ್ವಿಚಾರಣೆ ಮಾಡಬೇಕು ಎಂದು ಅದು ಹೇಳಿದೆ.

ಈ ಕ್ರಮವು ಮಕ್ಕಳ ಭುಜದ ದೈಹಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಹೆಚ್ಚುವರಿ ಓದುವ ಸಾಮಗ್ರಿಗಳನ್ನು ಒಳಗೊಂಡಿರುವ ಪಠ್ಯಪುಸ್ತಕಗಳನ್ನು ಪ್ರತ್ಯೇಕ ಪುಸ್ತಕಗಳಾಗಿ ಮುದ್ರಿಸಬೇಕು ಮತ್ತು ಶಾಲೆಗಳಲ್ಲಿ ಇಡಬೇಕು ಎಂಬ ಸಲಹೆಗಳೂ ಸೇರಿವೆ. 

ಸರ್ಕಾರವು ಈ ಸಲಹೆಗಳನ್ನು ಸ್ವೀಕರಿಸುವುದರೊಂದಿಗೆ, ಒಂದು ವರ್ಷದಲ್ಲಿ ಎರಡು ಪಠ್ಯಪುಸ್ತಕಗಳ ಮುದ್ರಣ ವೆಚ್ಚವು ಹೆಚ್ಚಾಗಲಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ (2023-2024), ಕರ್ನಾಟಕ ಪಠ್ಯಪುಸ್ತಕಗಳ ಸೊಸೈಟಿ (KTBS) 566 ಶೀರ್ಷಿಕೆಗಳನ್ನು ಒಳಗೊಂಡಿರುವ 6,39,83,899 ಪಠ್ಯಪುಸ್ತಕಗಳನ್ನು ಮುದ್ರಿಸಿದೆ. ವೆಚ್ಚ ಮಾಡಿದ್ದು 3,23,31,93,175 ರೂಪಾಯಿಗಳು. ವರ್ಷಕ್ಕೆ ಎರಡು ಪಠ್ಯಪುಸ್ತಕಗಳೊಂದಿಗೆ, ಕೆಟಿಬಿಎಸ್ 984 ಶೀರ್ಷಿಕೆಗಳನ್ನು ಮುದ್ರಿಸುತ್ತದೆ ಮತ್ತು ಇದು ಮುದ್ರಣ ವೆಚ್ಚ 10 ಕೋಟಿ ರೂಪಾಯಿ ಹೆಚ್ಚಾಗುವ ನಿರೀಕ್ಷೆಯಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com