ಸಂಜೆ ವೇಳೆ ಮೈಸೂರು ಅರಮನೆಗೆ ಪ್ರವೇಶ ನೀಡಲು ಚಿಂತನೆ; ಜನವರಿ 26 ರಿಂದ ‘ಬ್ರಾಂಡ್ ಮೈಸೂರು ಫೆಸ್ಟ್’!

ದಸರಾ ಸಂಭ್ರಮವನ್ನು ಮೀರಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಹೊಸ ಲಾಂಛನದೊಂದಿಗೆ ಬ್ರಾಂಡ್ ಮೈಸೂರು ಉತ್ತೇಜಿಸುವ ಸಲುವಾಗಿ ರಾಜ್ಯ ಸರ್ಕಾರವು ಸಂಜೆ ವೇಳೆ ಪ್ರವಾಸಿಗರಿಗೆ ಮೈಸೂರು ಅರಮನೆಯನ್ನು ತೆರೆಯಲು ಯೋಜಿಸಿದೆ.
ಮೈಸೂರು ಅರಮನೆ
ಮೈಸೂರು ಅರಮನೆ

ಮೈಸೂರು: ದಸರಾ ಸಂಭ್ರಮವನ್ನು ಮೀರಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಹೊಸ ಲಾಂಛನದೊಂದಿಗೆ ಬ್ರಾಂಡ್ ಮೈಸೂರು ಉತ್ತೇಜಿಸುವ ಸಲುವಾಗಿ ರಾಜ್ಯ ಸರ್ಕಾರವು ಸಂಜೆ ವೇಳೆ ಪ್ರವಾಸಿಗರಿಗೆ ಮೈಸೂರು ಅರಮನೆಯನ್ನು ತೆರೆಯಲು ಯೋಜಿಸಿದೆ.

ಬಕಿಂಗ್ ಹ್ಯಾಮ್ ಅರಮನೆಯು ಸಂಜೆಯ ವೇಳೆಗೆ ಜನರನ್ನು ಹೆಚ್ಚು ಆಕರ್ಷಿಸುತ್ತಿದೆ. ಹೀಗಾಗಿ ಜನರು ನಿರ್ದಿಷ್ಟ ದಿನಗಳು ಮತ್ತು ಸಮಯಗಳಲ್ಲಿ ನಡೆಯುವ ಗಾರ್ಡ್ ಸಮಾರಂಭವನ್ನು ವೀಕ್ಷಿಸಲು ಇಷ್ಟಪಡುತ್ತಾರೆ ಎಂದು ತಿಳಿದ ಜಿಲ್ಲಾಡಳಿತ ಮತ್ತು ಅರಮನೆ ಮಂಡಳಿಯು ಮುಕ್ತಾಯ ಸಮಯವನ್ನು ಸಂಜೆ 6 ರ ಬದಲು ರಾತ್ರಿ 9 ರವರೆಗೆ ವಿಸ್ತರಿಸಲು ಚಿಂತಿಸುತ್ತಿದೆ.

ಮೈಸೂರು ಅರಮನೆಯು ಪ್ರಪಂಚದಾದ್ಯಂತದ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ ಹೀಗಾಗಿ, ಕರ್ನಾಟಕ ಸರ್ಕಾರವು ಪ್ರವಾಸೋದ್ಯಮಕ್ಕೆ ದೊಡ್ಡ ರೀತಿಯಲ್ಲಿ ಉತ್ತೇಜನ ನೀಡಲು ಬಯಸಿದೆ. ವರ್ಷದಲ್ಲಿ 26 ವಾರಾಂತ್ಯಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಜಿಸಿದೆ. ದಸರಾ ಮೆರವಣಿಗೆಯಲ್ಲಿ ಭಾಗವಹಿಸಲು ಅರಮನೆ ಮಂಡಳಿಯು ಪೊಲೀಸ್ ಬ್ಯಾಂಡ್ ಆಹ್ವಾನಿಸುತ್ತದೆ ಮತ್ತು ಅರಮನೆ ಸಿಬ್ಬಂದಿಗೆ 16 ಲಕ್ಷ ರೂಪಾಯಿ ವೆಚ್ಚದಲ್ಲಿ ಖರೀದಿಸಿ ರಾಜವಸ್ತ್ರವನ್ನು ಧರಿಸಲು ನೀಡಲಿದೆ.

ಪ್ರವಾಸಿಗರು ಮೈಸೂರಿಗೆ ಒಂದು ದಿನದ ಪ್ರವಾಸಕ್ಕಾಗಿ ಭೇಟಿ ನೀಡುತ್ತಿದ್ದು, ಸಂಜೆ ವೇಳೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪರಿಚಯಿಸುವುದರಿಂದ ಆತಿಥ್ಯ ಉದ್ಯಮಕ್ಕೆ ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹೆಚ್ಚುವರಿ ಮೂರು ಗಂಟೆಗಳ ಕಾಲ ಅರಮನೆಯನ್ನು ತೆರೆಯಲು ಒಪ್ಪಿಗೆ ನೀಡಲು ಮನವಿ ಮಾಡಿದ್ದಾರೆ. ಪಾಳಿಯಲ್ಲಿ ಕೆಲಸ ಮಾಡಲು ಅವರಿಗೆ ಹೆಚ್ಚುವರಿ ಸಿಬ್ಬಂದಿ ಬೇಕಾಗಿರುವುದರಿಂದ, ಅರಮನೆ ಮಂಡಳಿಯು ವೆಚ್ಚಗಳನ್ನು ಪೂರೈಸಲು ಪ್ರವೇಶ ಟಿಕೆಟ್ ಶುಲ್ಕವನ್ನು ದ್ವಿಗುಣಗೊಳಿಸುವ ಸಾಧ್ಯತೆಯಿದೆ.

ಜಿಲ್ಲಾ ಪ್ರವಾಸೋದ್ಯಮ ಪರಿಷತ್ತಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಸಚಿವ ಹೆಚ್.ಸಿ.ಮಹದೇವಪ್ಪ, ಅರಮನೆ ಮಂಡಳಿಯು ಪ್ರವಾಸಿಗರನ್ನು ಆಕರ್ಷಿಸಲು ಕಾರ್ಯಕ್ರಮಗಳನ್ನು ಆಯೋಜಿಸಲು ಯೋಜಿಸಿದೆ. ಇದರಿಂದ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗವನ್ನು ಸೃಷ್ಟಿಸುವ ಮತ್ತು ಸ್ಥಳೀಯ ಆರ್ಥಿಕತೆಗೆ ಕೊಡುಗೆ ನೀಡುವ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತದೆ. ಪ್ರವಾಸೋದ್ಯಮ ಇಲಾಖೆಯು ಫೆಬ್ರವರಿಯಲ್ಲಿ ಟಿ ನರಸೀಪುರ ತಾಲೂಕಿನ ಸೋಮನಾಥಪುರ ಉತ್ಸವವನ್ನು ಆಯೋಜಿಸಲು ಪ್ಲಾನ್ ಮಾಡಿದೆ, ಪ್ರವಾಸಿಗರನ್ನು ಆಕರ್ಷಿಸಲು ಮಾಸಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಜಿಸಿದೆ.

ಜನವರಿ 26 ರಿಂದ ‘ಬ್ರಾಂಡ್ ಮೈಸೂರು ಫೆಸ್ಟ್’
ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಜನವರಿ 26 ರಿಂದ ‘ಬ್ರಾಂಡ್ ಮೈಸೂರು ಫೆಸ್ಟ್’ ಆಯೋಜಿಸಲು ಪ್ರವಾಸೋದ್ಯಮ ಇಲಾಖೆಯಿಂದ 50 ಲಕ್ಷ ರೂಪಾಯಿಗಳನ್ನು ಬಳಸಿಕೊಳ್ಳುವಂತೆ ಸಚಿವ ಎಚ್.ಸಿ.ಮಹದೇವಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬ್ರಾಂಡ್ ಮೈಸೂರು ಕಾರ್ಯಕ್ರಮಕ್ಕೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದ ಮಹದೇವಪ್ಪ, ಸ್ಥಳೀಯ ಕಲಾವಿದರ ಜೊತೆಗೆ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರನ್ನು ಆಹ್ವಾನಿಸಲು ಕಾರ್ಪೊರೇಟ್ ಮತ್ತು ಪ್ರಾಯೋಜಕರಿಗೆ ಸಲಹೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com