ಬೆಂಗಳೂರು: ಮೊದಲ ಪತ್ನಿ ಕಣ್ತಪ್ಪಿಸಿ 2ನೇ ಪತ್ನಿಗೆ ಸೀಮಂತ, ಮನೆಗೆ ಬಂದ ಮೊದಲ ಹೆಂಡತಿ ಮತ್ತಾಕೆಯ ತಾಯಿ ಮೇಲೆ ಹಲ್ಲೆ!
ಬೆಂಗಳೂರು: ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಎರಡನೇ ಮದುವೆಯಾಗಿದ್ದ ಗಂಡನಿಗೆ ತಕ್ಕ ಪಾಠ ಕಲಿಸಲು ಬಂದಿದ್ದ ಮಹಿಳೆಯನ್ನೇ ಪತಿಯ ಕುಟುಂಬಸ್ಥರು ಹಿಗ್ಗಾಮಗ್ಗಾ ಥಳಿಸಿರುವ ಘಟನೆ ಬೆಂಗಳೂರಿನ ಚಂದ್ರ ಲೇಔಟ್ನಲ್ಲಿ ನಡೆದಿದೆ.
ಘಟನೆಯಲ್ಲಿ ಮೊದಲ ಪತ್ನಿ ಹಾಗೂ ಆಕೆಯ ತಾಯಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಈ ಸಂಬಂಧ ವಿಡಿಯೋ ಹಾಗೂ ಫೋಟೋಗಳು ಸಖತ್ ವೈರಲ್ ಆಗುತ್ತಿದೆ. ಸದ್ಯ ಘಟನೆಯಲ್ಲಿ ಗಾಯಗೊಂಡಿರುವ ಇಬ್ಬರು ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಚಂದ್ರ ಲೇಔಟ್ ನಿವಾಸಿಯಾಗಿದ್ದ ತೇಜಸ್ ಹಾಗೂ ಚೈತ್ರಾ 2018ರಲ್ಲಿ ಮದುವೆಯಾಗಿದ್ದರು. ಆದರೆ ಮದುವೆಯಾದ ಬಳಿಕ ತೇಜಸ್ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರಂತೆ. ಇದನ್ನು ಪ್ರಶ್ನೆ ಮಾಡಿದ್ದಕಂತೆ ಪತ್ನಿ ಮೇಲೆ ಹಲ್ಲೆ ಮಾಡಿದ್ದರಂತೆ. ಇದರಿಂದ ಚೈತ್ರಾ ಪತಿಯನ್ನು ಬಿಟ್ಟು ತೆರಳಿದ್ದರಂತೆ. ಈ ನಡುವೆ ಇಬ್ಬರ ವಿಚ್ಛೇದನ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ.
ಇತ್ತ ತೇಜಸ್ ಮೊದಲ ಪತ್ನಿಯಿಂದ ದೂರ ಆದ ಮೇಲೆ ಎರಡನೇ ಮದುವೆಯಾಗಿದ್ದನಂತೆ. ಅಲ್ಲದೆ ಇಂದು ಎರಡನೇ ಪತ್ನಿಗೆ ತೇಜಸ್ ಮನೆಯಲ್ಲಿ ಸೀಮಂತ ಕಾರ್ಯಕ್ರಮ ಏರ್ಪಡಿಸಿದ್ದರಂತೆ ಈ ಕುರಿತು ಮಾಹಿತಿ ಪಡೆದುಕೊಂಡಿದ್ದ ಮೊದಲ ಪತ್ನಿ, ತನಗೆ ವಿಚ್ಛೇದನ ನೀಡದೆ ಎರಡನೇ ಮದುವೆಯಾದ ಬಗ್ಗೆ ಪ್ರಶ್ನೆ ಮಾಡಲು ಮಹಿಳಾ ಸಂಘಟನೆ ಸದಸ್ಯರೊಂದಿಗೆ ಮನೆಯ ಬಳಿ ತೆರಳಿದ್ದರಂತೆ. ತೇಜಸ್ ಮನೆಗೆ ತೆರಳಿ ಪ್ರಶ್ನೆ ಮಾಡುತ್ತಿದ್ದಂತೆ ಆತನ ಮನೆಯವರು ಚೈತ್ರಾ ಹಾಗೂ ಆಕೆಯ ತಾಯಿ ಮೇಲೆ ಹಲ್ಲೆ ಮಾಡಿದ್ದಾರೆ.
ಬಿಡಬ್ಲ್ಯೂ ಗುತ್ತಿಗೆದಾರ ಎಂದು ಹೇಳಿದ್ದಾರೆ. ಆದರೆ ಕೋರ್ಟ್ನಲ್ಲಿ ತನಗೆ ಕೆಲಸ ಇಲ್ಲ ಅಂತ ಹೇಳಿದ್ದಾನೆ. ಇಂತಹ ಅವನಿಗೆ ನನ್ನ ಸಹೋದರಿ ಕೊಟ್ಟು ಅವಳ ಜೀವನ ಹಾಳಾಯ್ತು. ತೇಜಸ್ಗೆ 2ನೇ ಮದುವೆಯಾಗಿದೆ. ಎರಡನೇ ಮದುವೆ 9 ತಿಂಗಳ ಹಿಂದೆಯಷ್ಟೇ ಆಗಿದೆ. ಈಗ ಆಕೆ ಗರ್ಭಿಣಿ ಅನ್ನೋದು ನಮಗೆ ಮೂರು ದಿನಗಳ ಹಿಂದೆ ಗೊತ್ತಾಗಿದೆ. ದೇವನಹಳ್ಳಿ ಕೋರ್ಟ್ನಲ್ಲಿ ತನಗೆ ಮದುವೆ ಬೇಡ ಎಂದು ಕೂಡ ಹೇಳಿಲ್ಲ. ತನಗೆ ಯಾವುದೇ ಮದುವೆ ಬೇಡ ಎಂದು ಹೇಳಿದ್ದ.
ಆದರೆ ಈಗ ಎರಡನೇ ಮದುವೆ ಆಗಿರೋದು ಬೆಳಕಿಗೆ ಬಂದಿದೆ. ಆ ಹುಡುಗನೊಂದಿಗೆ ಮದುವೆಯಾದ ಮೇಲೆ ಆತನಿಗೆ ಬೇರೆ ಸಂಬಂಧ ಇರೋದು ನಮಗೆ ತಿಳಿದಿತ್ತು. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ ಮಾಡಿದ್ದ. ಆಸ್ಪತ್ರೆ ದಾಖಲಿಸಿ ನಾವು ಚಿಕಿತ್ಸೆ ಕೊಡಿಸಿದ್ದೇವು, ಆಗಲೂ ಅವರ ಮನೆಯವರು ಬಂದಿರಲಿಲ್ಲ. ನನ್ನ ಸಹೋದರಿ ಮೇಲೆ ಹಲ್ಲೆ ಮಾಡಿದ ಬಗ್ಗೆ ಸಂಬಂಧ ಪ್ರಕರಣ ದಾಖಲು ಮಾಡಿದ್ದೇವು. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆದಿದೆ.
ಆದರೆ ನಾವು ವಿಚ್ಛೇದನಕ್ಕೂ ಅರ್ಜಿ ಸಲ್ಲಿಕೆ ಮಾಡರಿಲಿಲ್ಲ. ಹಲ್ಲೆ ಪ್ರಕರಣದ ವೇಳೆ ಸಂಬಂಧ ವಿಚಾರಣೆ ವೇಳೆ ನನಗೆ ವಿಚ್ಛೇದನ ಬೇಕು ಎಂದಿದ್ದ ಅಷ್ಟೇ ಎಂದು ಚೈತ್ರಾ ಸಹೋದರ ತಿಳಿಸಿದ್ದಾರೆ. ಚೈತ್ರಾ ಹಾಗೂ ಆಕೆಯ ತಾಯಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೆಡಿಕೋ-ಲೀಗಲ್ ಪ್ರಕರಣವನ್ನು ದಾಖಲಿಸಿದ ನಂತರ ಆಸ್ಪತ್ರೆಯು ಈ ವಿಷಯವನ್ನು ಪೋಲಿಸ್ಗೆ ವರದಿ ಮಾಡಿದೆ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ