ಎಸ್ಮಾ ಜಾರಿ ಮಾಡಿದರೂ ಹೆದರುವುದಿಲ್ಲ, ಜೈಲಿಗೆ ಕಳುಹಿಸಿದರೂ ಜಗ್ಗುವುದಿಲ್ಲ, ಮುಷ್ಕರ ನಡೆಸಿಯೇ ಸಿದ್ಧ: ಸರ್ಕಾರಿ ನೌಕರರ ಸಂಘ ಅಧ್ಯಕ್ಷ

7ನೇ ವೇತನ ಆಯೋಗ (7th Pay Commission report) ವರದಿ ಜಾರಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು (Karnataka state Govt employees) ನಾಳೆ ಮಾರ್ಚ್ 1ರಿಂದ ಅನಿರ್ದಿಷ್ಟಾವಧಿಯವರೆಗೆ ಮುಷ್ಕರಕ್ಕೆ ಮುಂದಾಗಿದ್ದಾರೆ. 
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಕ್ಷರಿ
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಕ್ಷರಿ
Updated on

ಬೆಂಗಳೂರು: 7ನೇ ವೇತನ ಆಯೋಗ (7th Pay Commission report) ವರದಿ ಜಾರಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು (Karnataka state Govt employees) ನಾಳೆ ಮಾರ್ಚ್ 1ರಿಂದ ಅನಿರ್ದಿಷ್ಟಾವಧಿಯವರೆಗೆ ಮುಷ್ಕರಕ್ಕೆ ಮುಂದಾಗಿದ್ದಾರೆ. 

ನಾಳೆಯಿಂದ ಎಲ್ಲಾ ಸರ್ಕಾರಿ ಸೇವೆಗಳಲ್ಲಿ ವ್ಯತ್ಯಯವಾಗಲಿದೆ. ಈ ಬಗ್ಗೆ ಇಂದು ಸುದ್ದಿಗೊಷ್ಠಿಯಲ್ಲಿ ಮಾತನಾಡಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ಬಜೆಟ್​ನಲ್ಲಿ 7ನೇ ವೇತನ ಆಯೋಗ ಬಗ್ಗೆ ಪ್ರಸ್ತಾಪ ಮಾಡಿಲ್ಲ. ನಾಳೆಯಿಂದ ಸಾಮೂಹಿಕವಾಗಿ ಸರ್ಕಾರಿ ನೌಕರರು ಮುಷ್ಕರಕ್ಕೆ ಇಳಿಯಲಿದ್ದೇವೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ ಎಲ್ಲಾ ಸರ್ಕಾರಿ ಸೇವೆಗಳು ಏಕಕಾಲದಲ್ಲಿ ಬಂದ್ ಆಗುತ್ತವೆ. ಸರ್ಕಾರ ಯಾವುದೇ ಕ್ರಮ ಕೈಗೊಂಡರೂ ನಾವು ಸ್ವಾಗತಿಸುತ್ತೇವೆ. ಯಾವುದೇ ಸಂಧಾನಕ್ಕೆ ನಾವು ಬಗ್ಗುವುದಿಲ್ಲ. 10 ಲಕ್ಷ ಸರ್ಕಾರಿ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ, ಜೈಲಿಗೆ ಹೋಗಲೂ ಸಿದ್ಧರಿದ್ದೇವೆ. ಎಸ್ಮಾ ಜಾರಿ ಮಾಡಿದ ಸರ್ಕಾರಗಳು ಮತ್ತೆ ಅಧಿಕಾರಕ್ಕೆ ಬಂದಿಲ್ಲ. 7ನೇ ವೇತನ ಆಯೋಗ ವರದಿ ಜಾರಿಯಾದರೆ ಮಾತ್ರ ಮುಷ್ಕರ ಹಿಂದಕ್ಕೆ ಪಡೆಯಲಾಗುವುದು ಎಂದು ಸ್ಪಷ್ಟಪಡಿಸಿದರು.

ಕಳೆದ 1 ವರ್ಷದ ಸಿಎಂ ವೇತನ ಪರಿಷ್ಕರಣೆ ಭರವಸೆ ನೀಡಿದ್ದರು. ಆದರೆ ಈ ತನಕ ಸಿಎಂ ಭರವಸೆ ಈಡೇರಿಲ್ಲ. ವೇತನ‌ ಆಯೋಗ ಪರಿಶೀಲನೆ ಭರವಸೆ ನೀಡಿದೆ. ಆದರೆ ಎಲ್ಲವೂ ಚರ್ಚೆ ಹಂತದಲ್ಲಿ ಇದೆ. ನಾವು ಸರ್ಕಾರಕ್ಕೆ ಪ್ರತಿಭಟನೆ ಬಗ್ಗೆ ಗಮನಕ್ಕೆ ತಂದಿದ್ದೇವೆ. ಆದರೂ ಸರ್ಕಾರ ನಮ್ಮ ಬೇಡಿಕೆ ಬಗ್ಗೆ ಸರ್ಕಾರ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ. ನಾಳೆಯಿಂದ ರಾಜ್ಯದ ಎಲ್ಲ ಸರ್ಕಾರಿ ನೌಕರರು ಒಗಟ್ಟಾಗಿ ಅನಿರ್ಧಿಷ್ಟ ಅವಧಿ ಹೋರಾಟ ಮಾಡಬೇಕು. ಇದಕ್ಕೆ ಸರ್ಕಾರಿ ನೌಕರರೆಲ್ಲರೂ ಕೈಜೋಡಿಸಿ ಯಶಸ್ವಿಗೊಳಿಸಬೇಕು  ಎಂದು ಮನವಿ ಮಾಡಿದರು.

ಅಧ್ಯಕ್ಷರು ಹೇಳಿದ್ದೇನು?: ಸಾಮೂಹಿಕ ನಾಯಕತ್ವದಲ್ಲಿ ಇದನ್ನು ಮಾಡುತ್ತಿದ್ದೇವೆ. ನಾಳೆಯಿಂದ ರಾಜ್ಯದ ಎಲ್ಲಾ ಸರ್ಕಾರಿ ನೌಕರರು ಯಾವುದೇ ಗೊಂದಲ ಇಲ್ಲದೆ ಅನಿರ್ಧಾವಧಿ ಗೈರಾಗಲಿದ್ದೇವೆ. ಎಲ್ಲಾ ಸಂಘಗಳಿಂದ ಈ ಹೋರಾಟ ಮಾಡುತ್ತಿದ್ದೇವೆ. ಬಸವರಾಜ ಬೊಮ್ಮಾಯಿಯವರು ಏನು ಘೋಷಣೆ ಮಾಡಲಿಲ್ಲ. 2022 ರಲ್ಲಿ ವೇತನ ಆಯೋಗ ರಚನೆ ಮಾಡಬೇಕೆಂದು ಹೇಳುತ್ತಾರೆ. ಅದಾದ ಮೇಲೆ ವೇತನ ಆಯೋಗ ರಚನೆಯಾಗಲಿಲ್ಲ. 9 ತಿಂಗಳ ಬಳಿಕ ಆಯೋಗ ರಚನೆಯಾಗಿದೆ.

ಆದರೆ ಮಧ್ಯಂತರ ವರದಿ ತೆಗೆದುಕೊಂಡು ನಮಗೆ ವೇತನ ಇಂಪ್ಲಿಮೆಂಟ್ ಮಾಡಿ ಅಂತ ವಿನಂತಿ ಮಾಡಿದ್ವಿ. ಆಗಲೂ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದ್ದರು. ಆಗಲಿನಿಂದಲೂ ಬರೀ ಚರ್ಚೆಯಲ್ಲಿದೆ. ಬದಲಿಗೆ ಏನು ನಿರ್ಣಯಕ್ಕೆ ಬಂದಿಲ್ಲ. ಇಡೀ ದೇಶದಲ್ಲಿ ಕಡಿಮೆ ಕನಿಷ್ಟ ವೇತನ ಪಡೆಯುವವರು ಕರ್ನಾಟಕ ರಾಜ್ಯದವರು. ಬೇರೆ ರಾಜ್ಯಗಳಲ್ಲಿ ವೇತನ ಹೆಚ್ಚಾಗಿದೆ. ಇಂದು ಶೇಕಡಾ 39ರಷ್ಟು ಹುದ್ದೆ ಖಾಲಿ ಇದೆ. ಇಷ್ಟೆಲ್ಲ ಕೆಲಸ ಮಾಡಿ ಅಭಿವೃದ್ಧಿಯಲ್ಲಿ 5ನೇ ಸ್ಥಾನದಲ್ಲಿದ್ದೇವೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com