ಪಂಚಭೂತಗಳಲ್ಲಿ ಸಿದ್ದೇಶ್ವರ ಶ್ರೀಗಳು ಲೀನ; ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಅಂತ್ಯಕ್ರಿಯೆ

ನೆನ್ನೆ ಇಹಲೋಕ ತ್ಯಜಿಸಿದ್ದ ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಅಂತ್ಯಕ್ರಿಯೆಯನ್ನು ಇಂದು ಆಶ್ರಮದ ಆವರಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ, ಶ್ರೀಗಳ ಇಚ್ಛೆಯಂತೆಯೇ ನೆರವೇರಿಸಲಾಯಿತು. 
ಪಂಚಭೂತಗಳಲ್ಲಿ ಸಿದ್ದೇಶ್ವರ ಶ್ರೀಗಳು ಲೀನ
ಪಂಚಭೂತಗಳಲ್ಲಿ ಸಿದ್ದೇಶ್ವರ ಶ್ರೀಗಳು ಲೀನ

ವಿಜಯಪುರ: ನೆನ್ನೆ ಇಹಲೋಕ ತ್ಯಜಿಸಿದ್ದ ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಅಂತ್ಯಕ್ರಿಯೆಯನ್ನು ಇಂದು ಆಶ್ರಮದ ಆವರಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ, ಶ್ರೀಗಳ ಇಚ್ಛೆಯಂತೆಯೇ ನೆರವೇರಿಸಲಾಯಿತು. 

ಅಂತಿಮ ದರ್ಶನ ಮುಕ್ತಾಯಗೊಂಡ ಬಳಿಕ ವಿಜಯಪುರದ ಸೈನಿಕ ಶಾಲೆಯಿಂದ ಆಶ್ರಮಕ್ಕೆ ಶ್ರೀಗಳವರ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ತರಲಾಯಿತು.  

ಆಶ್ರಮದ ಆವರಣದಲ್ಲಿ ನಿರ್ಮಿಸಿದ್ದ ವೇದಿಕೆಯ ಮೇಲೆ ಶ್ರೀಗಳವರ ಪಾರ್ಥಿವ ಶರೀರವನ್ನಿರಿಸಿ ಆಶ್ರಮದ ಆವರಣದಲ್ಲಿ ಹಲವು ಮಠಾಧೀಶರ ನೇತೃತ್ವದಲ್ಲಿ ಅಂತ್ಯ ಸಂಸ್ಕಾರ ನಡೆಯಿತು. 

ಶ್ರೀಗಳವರ ಇಚ್ಛೆಯಂತೆ ಸರಳವಾಗಿ ಅಂತ್ಯಕ್ರಿಯೆ ನಡೆದಿದ್ದು  ಸುತ್ತೂರು ಶ್ರೀ,  ಕನ್ಹೇರಿ ಶ್ರೀ ಬಸವಲಿಂಗ ಶ್ರೀಗಳವರಿಂದ ಸಿದ್ದೇಶ್ವರ ಸ್ವಾಮೀಜಿಗಳ ಚಿತೆಗೆ ಅಗ್ನಿಸ್ಪರ್ಶವಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ವಿವಿಧ ಮಠಾಧೀಶರು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಚಿವರು, ಶಾಸಕರು ಹಾಗು ಅಪಾರ ಭಕ್ತರು ಶ್ರೀಗಳವರಿಗೆ ಅಂತಿಮನ ನಮನ ಸಲ್ಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com