ಫೆಬ್ರವರಿ ಎರಡನೆ ವಾರದಲ್ಲಿ ರಾಜ್ಯ ಬಜೆಟ್ ಮಂಡನೆ- ಸಿಎಂ ಬೊಮ್ಮಾಯಿ

 ಫೆಬ್ರವರಿ ಎರಡನೇ ವಾರದಲ್ಲಿ ರಾಜ್ಯ ಬಜೆಟ್ ಮಂಡನೆಯಾಗಲಿದೆ ಎಂದು ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ
Updated on

ದಾವಣಗೆರೆ: ಫೆಬ್ರವರಿ ಎರಡನೇ ವಾರದಲ್ಲಿ ರಾಜ್ಯ ಬಜೆಟ್ ಮಂಡನೆಯಾಗಲಿದೆ ಎಂದು ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ದಾವಣಗೆರೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್ ತಯಾರಿ ಸಂಬಂಧ ಸರಣಿ ಸಭೆಗಳನ್ನು ನಡೆಸಲಾಗುತ್ತಿದೆ.‌ಡಿಸೆಂಬರ್ ಅಂತ್ಯದವರೆಗೂ ರಾಜ್ಯದ ತೆರಿಗೆ ಸಂಗ್ರಹ ಗುರಿ ಮೀರಿ ಆಗಿದೆ ಎಂದರು.

ತೆರಿಗೆ ಸಂಗ್ರಹಕ್ಕೆ ಅನುಗುಣವಾಗಿ ಬಜೆಟ್ ತಯಾರಿ ಕೂಡ ನಡೆದಿದೆ. ಈ ಸಂಬಂಧ ಬೇರೆ ಬೇರೆ ಇಲಾಕೆಗಳೊಂದಿಗೆ ಸಂಕ್ರಾಂತಿ ನಂತರ  ಸಭೆಗಳನ್ನು ನಡೆಸಲಾಗುವುದು. ಇದಾದ ನಂತರ ಫೆಭ್ರವರಿ ಎರಡನೇ ವಾರದಲ್ಲಿ ಜನಪರವಾದ ಬಜೆಟ್ ಮಂಡಿಸಲಾಗುವುದು ಎಂದರು. 

ರಾಜ್ಯದಲ್ಲಿ 25 ಮಿನಿ ಟೆಕ್ಸ ಟೈಲ್‌ ಪಾರ್ಕ್ ಗಳನ್ನು ಆರಂಭಿಸುವ ಚಿಂತನೆ ಇದೆ. ರಾಜ್ಯದಲ್ಲಿ ಹತ್ತಿ ಉತ್ಪಾದನೆ ಹೆಚ್ಚಾಗಿದೆ ಆದರೆ ಅದರ ಉತ್ಪನ್ನಗಳ ತಯಾರಿಕೆಯ ಕಡಿಮೆ ಇದೆ ಈ ಹಿನ್ನೆಲೆಯಲ್ಲಿ ರಾಜ್ಯದಲ್ಕಿ 25 ಟೆಕ್ಸ್ ಟೈಲ್ ಪಾರ್ಕ್ ಗಳನ್ನು ಆರಂಭಿಸುವ ಉದ್ದೇಶವಿದ್ದು, ಈ ಬಾರಿಯ ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಲಾಗುವುದು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com