ಮಾಜಿ ಸಿಎಂಗಳ ಪುತ್ರರ ದೋಣಿ ವಿಹಾರ: ವಿಜಯೇಂದ್ರ ನಾವಿಕ, ಡಾ ಯತೀಂದ್ರ ಪಯಣಿಗ

ರಾಜಕೀಯ ವಿಚಾರ ಬಂದಾಗ ಒಂದು ಪಕ್ಷದ ನಾಯಕರು ಇನ್ನೊಂದು ಪಕ್ಷದ ನಾಯಕರನ್ನು ಬೈಯುವುದು, ದೂಷಿಸುವುದು, ಆರೋಪಿಸುವುದು ಸಾಮಾನ್ಯ. ಕೆಲವೊಮ್ಮೆ ಅದು ಮಿತಿಮೀರುತ್ತದೆ ಕೂಡ. 
ಸುತ್ತೂರಿನಲ್ಲಿ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಆರಂಭವಾಗಿರುವ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ವಸ್ತುಪ್ರದರ್ಶನ, ಕೃಷಿಮೇಳ, ಸಿರಿಧಾನ್ಯ, ಸಾಂಸ್ಕೃತಿಕ ಮೇಳದ ಉದ್ಘಾಟನೆ
ಸುತ್ತೂರಿನಲ್ಲಿ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಆರಂಭವಾಗಿರುವ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ವಸ್ತುಪ್ರದರ್ಶನ, ಕೃಷಿಮೇಳ, ಸಿರಿಧಾನ್ಯ, ಸಾಂಸ್ಕೃತಿಕ ಮೇಳದ ಉದ್ಘಾಟನೆ

ಸುತ್ತೂರು(ಮೈಸೂರು): ರಾಜಕೀಯ ವಿಚಾರ ಬಂದಾಗ ಒಂದು ಪಕ್ಷದ ನಾಯಕರು ಇನ್ನೊಂದು ಪಕ್ಷದ ನಾಯಕರನ್ನು ಬೈಯುವುದು, ದೂಷಿಸುವುದು, ಆರೋಪಿಸುವುದು ಸಾಮಾನ್ಯ. ಕೆಲವೊಮ್ಮೆ ಅದು ಮಿತಿಮೀರುತ್ತದೆ ಕೂಡ. 

ರಾಜಕೀಯ ಬದಿಗಿಟ್ಟು ಹಲವು ಬಾರಿ ರಾಜಕೀಯ ನಾಯಕರು ಒಟ್ಟಿಗೆ ಇರುವುದು ಮಾತನಾಡುವುದು, ಬಾಂಧವ್ಯ ಹೊಂದಿರುವುದನ್ನು ನೋಡುತ್ತೇವೆ.ನಿನ್ನೆ ಮೈಸೂರು ಜಿಲ್ಲೆಯ ಸುತ್ತೂರಿನಲ್ಲಿ ಮಾಜಿ ಸಿಎಂಗಳ ಮಕ್ಕಳು ಒಂದಾಗಿದ್ದಾರೆ. ರಾಜಕೀಯ ವಿಚಾರ ಬಂದಾಗ ಕಾಂಗ್ರೆಸ್-ಬಜೆಪಿ ಬದ್ಧ ವೈರಿಗಳು. ಈ ಪಕ್ಷಗಳ ನಾಯಕರು ಒಬ್ಬರಿಗೊಬ್ಬರು ವೇದಿಕೆಗಳಲ್ಲಿ, ಸಾರ್ವಜನಿಕ ಭಾಷಣಗಳಲ್ಲಿ, ಮಾಧ್ಯಮಗಳ ಮುಂದೆ ಸಾಕಷ್ಟು ಟೀಕೆ ಮಾಡುತ್ತಾ, ಒಬ್ಬರಿಗೊಬ್ಬರು ಬೈಯುತ್ತಿರುತ್ತಾರೆ.

ನಿನ್ನೆ ಸಾಯಂಕಾಲ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನಲ್ಲಿರುವ ಸುತ್ತೂರಿನಲ್ಲಿ(Suttur) ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಮತ್ತು ಬಿ ಎಸ್ ಯಡಿಯೂರಪ್ಪನವರ ಮಕ್ಕಳಾದ ಡಾ ಯತೀಂದ್ರ ಸಿದ್ದರಾಮಯ್ಯ ಮತ್ತು ವಿಜಯೇಂದ್ರ ಒಟ್ಟಿಗೆ ದೋಣಿ ವಿಹಾರ ನಡೆಸಿದ್ದಾರೆ. ವಿಜಯೇಂದ್ರ ನಾವಿಕನ ಸೀಟಿನಲ್ಲಿ ಕುಳಿತರೆ ಯತೀಂದ್ರ ಪಯಣಿಗನಾಗಿ ದೋಣಿ ವಿಹಾರ ನಡೆಸಿದ್ದು ಅಲ್ಲಿನ ಸೌಂದರ್ಯವನ್ನು ಆಸ್ವಾದಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com