'ಮೋದಿ ಪ್ರಧಾನಿ ಆದ ಕಾರಣದಿಂದಲೇ ನನಗೆ ಪ್ರಶಸ್ತಿ ಬಂತು, ಮೋದಿಯಂತಹ ಪ್ರಧಾನಿಯನ್ನು ಹಿಂದೆಂದೂ ಕಂಡಿಲ್ಲ, : ಎಸ್ ಎಲ್ ಭೈರಪ್ಪ

ಕೇಂದ್ರ ಸರ್ಕಾರ 2023ನೇ ಸಾಲಿನ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯನ್ನು ನಿನ್ನೆ ಪ್ರಕಟಿಸಿದ್ದು, ನಾಡಿನ ಹಿರಿಯ ಸಾಹಿತಿ, ಸರಸ್ವತಿ ಸಮ್ಮಾನ್ ಎಸ್.ಎಲ್. ಭೈರಪ್ಪ ಅವರಿಗೆ ಪದ್ಮಭೂಷಣ ಗೌರವ ಲಭಿಸಿದೆ. 
ಸಾಹಿತಿ ಎಸ್ ಎಲ್ ಭೈರಪ್ಪ
ಸಾಹಿತಿ ಎಸ್ ಎಲ್ ಭೈರಪ್ಪ

ಮೈಸೂರು: ಕೇಂದ್ರ ಸರ್ಕಾರ 2023ನೇ ಸಾಲಿನ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯನ್ನು ನಿನ್ನೆ ಪ್ರಕಟಿಸಿದ್ದು, ನಾಡಿನ ಹಿರಿಯ ಸಾಹಿತಿ, ಸರಸ್ವತಿ ಸಮ್ಮಾನ್ ಎಸ್.ಎಲ್. ಭೈರಪ್ಪ(S L Byrappa) ಅವರಿಗೆ ಪದ್ಮಭೂಷಣ ಗೌರವ ಲಭಿಸಿದೆ. 

ಇದು ಸಹಜವಾಗಿ ಭೈರಪ್ಪನವರ ಸಾಹಿತ್ಯವನ್ನು ಪ್ರೀತಿಸುವವರಿಗೆ ಅತ್ಯಂತ ಖುಷಿ ಕೊಟ್ಟಿದೆ. ಅನೇಕರು ಅವರ ನಿವಾಸಕ್ಕೆ ತೆರಳಿ ಶುಭ ಕೋರುತ್ತಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಅವರನ್ನು ಮಾತನಾಡಿಸಿದಾಗ, ಮೋದಿ ಪ್ರಧಾನಿ(PM Narendra Modi) ಆದ ಕಾರಣದಿಂದಲೇ ನನಗೆ ಪ್ರಶಸ್ತಿ ಬಂತು.ಮೋದಿ ಪ್ರಧಾನಿ ಆಗದಿದ್ದರೇ ನನಗೆ ಪ್ರಶಸ್ತಿ ಬರ್ತಿರಲಿಲ್ಲ.ಲೇಖಕ ಸತ್ತೇ ಸಾಯುತ್ತಾನೆ, ಆದ್ರೆ, ಅವನ ಪುಸ್ತಕ ಎಂದೂ ಜೀವಂತ ಅಂತ, ಮೋದಿಯವರಂತಹ ಪ್ರಧಾನ ಮಂತ್ರಿಗಳನ್ನು ನಾನು ಹಿಂದೆಂದೂ ನೋಡಿರಲಿಲ್ಲ, 2029ರವರೆಗೂ ಅವರೇ ಪ್ರಧಾನಿಯಾಗಿರಲಿ ಎಂದು ಮನಸಾರೆ ಹೊಗಳಿದ್ದಾರೆ. 

ಎಷ್ಟು ದಿನ ಪುಸ್ತಕ ಇರುತ್ತೋ ಅಲ್ಲಿವರೆಗೆ ಲೇಖಕ ಸದಾ ಜೀವಂತ. ನನ್ನ ಬರೆದ ಕೃತಿಗಳಿಗೆ ಅಂತಹ ಶಕ್ತಿ ಇದ್ದರೆ ನನಗೆ ಸಂತೋಷ. ನನ್ನ ಕಾದಂಬರಿಗಳ ಮೂಲವೇ ಭಾರತದ ಸಂಸ್ಕೃತಿ ಎಂದುರು. 

ಗಣ ರಾಜ್ಯ ಮೊದಲಿಂದಲೂ ಇತ್ತು, ಈ ಸಂಸ್ಕೃತಿ ಏಕರೂಪದಲ್ಲಿ ಬೆಳೆದಿದೆ.ಎಷ್ಟೋ ದೇಶದಲ್ಲಿ ಸ್ವಾತಂತ್ರ್ಯ ಬಂದಿದೆ. ಆದರೆ ಸ್ವಾತಂತ್ರ್ಯ ಉಳಿದುಕೊಂಡಿಲ್ಲ. ನಮ್ಮಲ್ಲಿ ಸಂವಿಧಾನ ಇದೆ, ಈ ದೇಶವನ್ನು ಸಂವಿಧಾನ ಕಾಪಾಡುತ್ತದೆ ಎಂದು ತಿಳಿಸಿದರು.

ನನಗೆ ಮೈಸೂರು ಸ್ಪೂರ್ತಿ: ಹೈ ಸ್ಕೂಲ್ ಓದೋಕೆ ಮೈಸೂರಿಗೆ ಬಂದೆ. ಮೈಸೂರು ಭಾವನಾತ್ಮಕವಾಗಿ ನಂಗೆ ಸಾಕಷ್ಟು ತೃಪ್ತಿ ಕೊಟ್ಟ ಊರು. 12 ವರ್ಷ ನಾನು ಉತ್ತರ ಭಾರತದಲ್ಲಿದ್ದು ಬಂದೆ. ನನ್ನ ಅನೇಕ ಕಾದಂಬರಿಗಳು ಹುಟ್ಟಿದ್ದು ಇಲ್ಲೆ. ಎಷ್ಟೋ ಬರವಣಿಗೆಗಳಿಗೆ ಮೈಸೂರು ಸ್ಪೂರ್ತಿಯಾಗಿದೆ . ಮೈಸೂರು ಜನ ತುಂಬಾ ಪ್ರೀತಿ ಕೊಟ್ಟಿದ್ದಾರೆ. ಸದಾ ಮೈಸೂರು ಜನರಿಗೆ ಋಣಿ ಅಂತ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com