ತೆರಿಗೆ ಹೆಚ್ಚಳ ಮಾಡಬೇಡಿ: ಸಿಎಂ ಸಿದ್ದರಾಮಯ್ಯಗೆ ಮಾಜಿ ಸಿಎಂ ಬೊಮ್ಮಾಯಿ ಸಲಹೆ

ನೂತನ ಕಾಂಗ್ರೆಸ್ ಸರ್ಕಾರದ ಚೊಚ್ಚಲ ಬಜೆಟ್‌ನಲ್ಲಿ ಬಂಡವಾಳ ಹೂಡಿಕೆಗೆ ಮೀಸಲಿಡುವುದನ್ನು ಕಡಿಮೆ ಮಾಡದಂತೆ ತೆರಿಗೆ ಹೆಚ್ಚಿಸಿ ಜನರಿಗೆ ಹೊರೆ ಮಾಡದಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದಾರೆ. 
ಸದನದಲ್ಲಿ ಮಾಜಿ ಸಿಎಂ ಬೊಮ್ಮಾಯಿ
ಸದನದಲ್ಲಿ ಮಾಜಿ ಸಿಎಂ ಬೊಮ್ಮಾಯಿ
Updated on

ಬೆಂಗಳೂರು: ನೂತನ ಕಾಂಗ್ರೆಸ್ ಸರ್ಕಾರದ ಚೊಚ್ಚಲ ಬಜೆಟ್‌ನಲ್ಲಿ ಬಂಡವಾಳ ಹೂಡಿಕೆಗೆ ಮೀಸಲಿಡುವುದನ್ನು ಕಡಿಮೆ ಮಾಡದಂತೆ ತೆರಿಗೆ ಹೆಚ್ಚಿಸಿ ಜನರಿಗೆ ಹೊರೆ ಮಾಡದಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದಾರೆ. 

ನಿನ್ನೆ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರವು ಜನರ ಮೇಲೆ ಹೆಚ್ಚಿನ ತೆರಿಗೆಯನ್ನು ವಿಧಿಸದೆ ಮತ್ತು ಹೆಚ್ಚಿನ ಸಾಲವನ್ನು ಸಂಗ್ರಹಿಸದೆ ಐದು ಖಾತರಿಗಳನ್ನು ಜಾರಿಗೊಳಿಸಬೇಕು, ಇಲ್ಲದಿದ್ದರೆ ಅವು ಜನವಿರೋಧಿ ಖಾತರಿಗಳಾಗುತ್ತವೆ ಎಂದು ಹೇಳಿದರು. 

ಕೋವಿಡ್ ಸಾಂಕ್ರಾಮಿಕ ರೋಗದ ನಂತರ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ ಎಂದು ಹೇಳುತ್ತಾರೆ. ನಾವು ಉತ್ತಮ ಆದಾಯವನ್ನು ಪಡೆದಿದ್ದರಿಂದ ಕಳೆದ ಫೆಬ್ರವರಿಯಲ್ಲಿ ಹೆಚ್ಚುವರಿ ಬಜೆಟ್ ಮಂಡಿಸಿದ್ದೆ. ಆದ್ದರಿಂದ ಖಾತರಿಗಳನ್ನು ಅನುಷ್ಠಾನಗೊಳಿಸುವ ನೆಪದಲ್ಲಿ ತೆರಿಗೆ ಹೆಚ್ಚಳವನ್ನು ವಿಧಿಸಬಾರದು. ಖಾತರಿಗಳಿಲ್ಲದೆ ಅರ್ಧದಷ್ಟು ಆರ್ಥಿಕ ವರ್ಷ ಮುಗಿದಿರುವುದರಿಂದ, ಸರ್ಕಾರ ಈಗಾಗಲೇ ಕೆಲವು ಷರತ್ತುಗಳನ್ನು ಅನ್ವಯಿಸಿರುವುದರಿಂದ ಅವುಗಳನ್ನು 25,000 ಕೋಟಿ ರೂಪಾಯಿಗಳ ಹಂಚಿಕೆಯೊಂದಿಗೆ ನಿರ್ವಹಿಸಬಹುದು ಎಂದು ಹೇಳಿದರು.

ಜಿಎಸ್‌ಟಿ ಸಂಗ್ರಹ ಹೆಚ್ಚಾಗಿದೆ. ಮಾರಾಟ ತೆರಿಗೆ, ವಾಣಿಜ್ಯ ತೆರಿಗೆ, ಅಬಕಾರಿ, ಮುದ್ರಾಂಕ ಮತ್ತು ಮೋಟಾರು ವಾಹನಗಳ ತೆರಿಗೆ ಸೇರಿದಂತೆ ತೆರಿಗೆಗಳು ಹೆಚ್ಚಿವೆ. ಸರ್ಕಾರವು ಹೆಚ್ಚಿನ ಸಾಲವನ್ನು ಪಡೆಯುವ ಅಗತ್ಯವಿಲ್ಲ ಎಂದು ಹೇಳಿದರು. ಕರ್ನಾಟಕದ ಒಟ್ಟು ರಾಜ್ಯ ದೇಶೀಯ ಉತ್ಪನ್ನವು ಶೇಕಡಾ 9ರಷ್ಟಿದ್ದರೆ, ದೇಶದ ಜಿಡಿಪಿ ಶೇಕಡಾ 7 ರಷ್ಟಿದೆ ಎಂದರು.

78,000 ಕೋಟಿ ರೂಪಾಯಿ ಸಾಲ ಪಡೆಯುವ ಅವಕಾಶವಿರುವ ಶೇ.2.7ರಷ್ಟು ವಿತ್ತೀಯ ಕೊರತೆಯೊಂದಿಗೆ ಹೆಚ್ಚುವರಿ ಬಜೆಟ್ ಮಂಡಿಸಿದ್ದೇನೆ. ನಮ್ಮ ಸರ್ಕಾರ ಮೀಸಲಿಟ್ಟ ಹಣವನ್ನು ಶಿಕ್ಷಣ, ಕೃಷಿ, ಸೇವಾ ಕ್ಷೇತ್ರಗಳಲ್ಲದೆ ಮೂಲಸೌಕರ್ಯ ಅಭಿವೃದ್ಧಿ, ನೀರಾವರಿ ಯೋಜನೆಗಳಿಗೆ ಬಳಸಿಕೊಳ್ಳಬಹುದು ಎಂದು ಇಂದು ಬಜೆಟ್ ಮಂಡಿಸುತ್ತಿರುವ ,ಸಿಎಂ ಸಿದ್ದರಾಮಯ್ಯನವರಿಗೆ ಸಲಹೆ ನೀಡಿದರು. 

ಖಾತೆಗಳ ಅನುಷ್ಠಾನಕ್ಕೆ 52,000 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ನೀವು ಹೇಳಿದ್ದೀರಿ. ಆದರೆ, ಎಲ್ಲವೂ ಷರತ್ತು ಆಗಿರುವುದರಿಂದ ಸುಮಾರು 20ರಿಂದ 25 ಸಾವಿರ ಕೋಟಿ ರೂಪಾಯಿಗಳಷ್ಟೇ ವೆಚ್ಚವಾಗಬೇಕು ಎಂದು ಸಿದ್ದರಾಮಯ್ಯಗೆ ಸೂಚಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com