ಬೆಂಗಳೂರು: 2021 ರಲ್ಲಿ ಬಿಡಬ್ಲ್ಯುಎಸ್ಎಸ್ ಬಿ ತಿದ್ದುಪಡಿ ಮಸೂದೆಯೊಂದನ್ನು ಅಂಗೀಕರಿಸಿ 60*40 ಹಾಗೂ ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದ ನಿವೇಶನಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿತ್ತು.
ಆದರೆ ಈವರೆಗೆ ಬೆಂಗಳೂರಿನಲ್ಲಿ ಕೇವಲ 1,93,186 ವಸತಿ, ವಾಣಿಜ್ಯ ಕಟ್ಟಡಗಳು ಮಾತ್ರವೇ ಈ ಮಳೆನೀರು ಕೊಯ್ಲು ಪದ್ದತಿಯನ್ನು ಅಳವಡಿಸಿಕೊಂಡಿವೆ. ಆರ್ ಡಬ್ಲ್ಯು ಹೆಚ್ ಗೆ ಇಷ್ಟು ನೀರಸ ಪ್ರತಿಕ್ರಿಯೆ ಸಿಗುತ್ತಿರುವುದಕ್ಕೆ ಪ್ರಮುಖ ಕಾರಣವೆಂದರೆ ಅದು ಆರ್ ಡಬ್ಲ್ಯು ಹೆಚ್ ಅಳವಡಿಸಿಕೊಂಡವರಿಗೆ ಇನ್ನೂ ಸಿಗದ ಸಬ್ಸಿಡಿ!
ಸರ್ಕಾರದಿಂದ ಸಬ್ಸಿಡಿ ಸಿಗದೇ ಇರುವ ಹಿನ್ನೆಲೆಯಲ್ಲಿ ಜನರು ಆರ್ ಡಬ್ಲ್ಯುಹೆಚ್ ನ್ನು ಅಳವಡಿಸಿಕೊಳ್ಳುವುದು ಹೆಚ್ಚಿನ ಹೊರೆ ಎಂದು ಭಾವಿಸುತ್ತಿದ್ದಾರೆ.
ಆರ್ ಡಬ್ಲ್ಯುಹೆಚ್ ವ್ಯವಸ್ಥೆಯ ಅಳವಡಿಕೆ ಕಡ್ಡಾಯವಾಗಿದ್ದರೂ ಹಲವರು ಈ ವ್ಯವಸ್ಥೆಯೆಡೆಗೆ ಅನಾಸಕ್ತಿ ತೋರುತ್ತಿರುವುದು ಡೇಟಾದಿಂದ ಬಹಿರಂಗವಾಗಿದೆ. ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳದ 39,146 ಕಚೇರಿಗಳು ಅಥವಾ ಮನೆಗಳ ಮಾಲಿಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಡಬ್ಲ್ಯುಎಸ್ಎಸ್ ಬಿ ಅಧಿಕಾರಿಗಳು ತಿಳಿಸಿದ್ದಾರೆ.
ನಗರದಲ್ಲಿನ ವಿವಿಧ RWH ಮಾಲೀಕರು ಹೌಸಿಂಗ್ ಸೊಸೈಟಿಗಳು ಮತ್ತು ಮಾಲೀಕರು ಭಾರಿ ದಂಡವನ್ನು ತಪ್ಪಿಸಲು ಅತ್ಯಂತ ಅಗ್ಗದ ಅವೈಜ್ಞಾನಿಕ ವ್ಯವಸ್ಥೆಗಳನ್ನು ಮಾತ್ರ ಸ್ಥಾಪಿಸಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.
ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಟೆರ್ರಾಗ್ರೀನ್ ನ ಮಾಲೀಕ ಅನೂಪ್ ವಾಯತ್, ಆರ್ ಡಬ್ಲ್ಯುಹೆಚ್ ಕುರಿತ ವಿಚಾರಣೆಗಳು ಜಾರಿಗೆ ಬರುವುದು ತೀರಾ ವಿರಳ ಎಂದು ಹೇಳಿದ್ದಾರೆ.
ಆರ್ ಡಬ್ಲ್ಯುಹೆಚ್ ನ್ನು ಅಳವಡಿಸಲು ಹೌಸಿಂಗ್ ಸೊಸೈಟಿಗಳು 5-10 ಲಕ್ಷ ರೂಪಾಯಿಗಳನ್ನು ಅಥವಾ ಸಣ್ಣ ಮನೆಗಳ ಮಾಲೀಕರು Rs30,000 ನ್ನು ಖರ್ಚು ಮಾಡಲು ಬಯಸುವುದಿಲ್ಲ ಏಕೆಂದರೆ ಅವರು ಇದನ್ನು ದೀರ್ಘಾವಧಿಯ ಹೂಡಿಕೆಯಾಗಿ ನೋಡುವುದಿಲ್ಲ ಆದರೆ ದೊಡ್ಡ ವೆಚ್ಚವಾಗಿ ಮಾತ್ರ ನೋಡುತ್ತಾರೆ ಎಂದು ಅನೂಪ್ ತಿಳಿಸಿದ್ದಾರೆ.
ಆರ್ ಡಬ್ಲ್ಯುಹೆಚ್ ನ್ನು ಅಳವಡಿಸದೇ ಇರುವುದಕ್ಕೆ ನಗರದಲ್ಲಿ 1,95,31,000 ರೂಪಾಯಿ ದಂಡವನ್ನು ಸಂಗ್ರಹಿಸಲಾಗಿದೆ. ಹೊಸ ಕಟ್ಟಡಗಳಿಗೆ ಆರ್ ಡಬ್ಲ್ಯುಹೆಚ ಅಳವಡಿಕೆ ಈಗಾಗಲೇ ನಿಯಮವಾಗಿದ್ದು ಹಳೆಯ ಕಟ್ಟಡಗಳತ್ತ ಹೆಚ್ಚಿನ ಗಮನ ಹರಿಸಲಾಗುತ್ತಿದೆ ಎಂದು ಬಿಡಬ್ಲ್ಯುಎಸ್ಎಸ್ ಬಿ ಇಂಜಿನಿಯರ್ ಸುರೇಶ್ ಹೇಳಿದ್ದಾರೆ.
Advertisement