ವಿದೇಶಗಳಲ್ಲಿರುವ ಕನ್ನಡಿಗರ ಬಗ್ಗೆ ವಿಪತ್ತು ನಿರ್ವಹಣಾ ಕಚೇರಿಯಲ್ಲಿ ದಾಖಲೆಗಳೇ ಇಲ್ಲ: ರಕ್ಷಣೆ ಕಾರ್ಯಾಚರಣೆ ಸಮಯದಲ್ಲಿ ಸಮಸ್ಯೆ!

ಇತ್ತೀಚೆಗೆ ಯುದ್ಧ ಪೀಡಿತ ಸೂಡಾನ್ ನಿಂದ ಕನ್ನಡಿಗರನ್ನು ರಕ್ಷಿಸಿ ತಾಯ್ನಾಡಿಗೆ ಅವರನ್ನು ಕರೆದುಕೊಂಡು ಬರುವುದು ಸರ್ಕಾರಕ್ಕೆ ಸವಾಲಾಗಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಇತ್ತೀಚೆಗೆ ಯುದ್ಧ ಪೀಡಿತ ಸೂಡಾನ್ ನಿಂದ ಕನ್ನಡಿಗರನ್ನು ರಕ್ಷಿಸಿ ತಾಯ್ನಾಡಿಗೆ ಅವರನ್ನು ಕರೆದುಕೊಂಡು ಬರುವುದು ಸರ್ಕಾರಕ್ಕೆ ಸವಾಲಾಗಿತ್ತು.

ಯುದ್ಧಪೀಡಿತ ಸ್ಥಳದಲ್ಲಿ ಸಿಲುಕಿಕೊಂಡ ಜನರು ನೀಡಿದ ಮಾಹಿತಿಯನ್ನು ಅಧಿಕಾರಿಗಳು ಅವಲಂಬಿಸಬೇಕಾಯಿತು, ಜನರು ಸಂಬಂಧಪಟ್ಟ ಕಚೇರಿಗಳಿಗೆ ಬಹಳ ಭಯದಿಂದ ಕರೆಗಳನ್ನು ಮಾಡುತ್ತಿದ್ದರು. ಕರ್ನಾಟಕದ ಜನರು ಸಾಗರೋತ್ತರದಲ್ಲಿ ತಂಗಿರುವ ಬಗ್ಗೆ ಅಧಿಕಾರಿಗಳು ಸಿದ್ಧ ಅಂಕಿಅಂಶಗಳನ್ನು(Database) ಮಾಹಿತಿಗಳನ್ನು ಹೊಂದಿದ್ದರೆ ಇಂತಹ ಕಠಿಣ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ. ಅಂತಹ ಸಮಯದಲ್ಲಿ ನಿರ್ಣಾಯಕ ಸಮಯವನ್ನು ಉಳಿಸಬಹುದಿತ್ತು ಎಂದು ತಜ್ಞರು ಮತ್ತು ಮಾಜಿ ಅಧಿಕಾರಿಗಳು ಒಪ್ಪಿಕೊಳ್ಳುತ್ತಾರೆ. 

ಯಾವ ರಾಜ್ಯವು ಅಂಕಿಅಂಶಗಳನ್ನು ಹೊಂದಿದೆ ಮತ್ತು ಯಾವ ರಾಜ್ಯಗಳು ಹೊಂದಿಲ್ಲ ಎಂದು ತಿಳಿಯುವುದು ಮುಖ್ಯವಲ್ಲ. ಕರ್ನಾಟಕದಲ್ಲಿ ವಿಪತ್ತು ನಿರ್ವಹಣಾ ಕಚೇರಿಯಲ್ಲಿ ಈ ವ್ಯವಸ್ಥೆಯಿಲ್ಲ ಎಂಬುದು ಇಲ್ಲಿ ಸಮಸ್ಯೆಯಾಗಿದೆ. 

ರಾಜ್ಯದ ಅನೇಕರು ಉದ್ಯೋಗ, ಉನ್ನತ ವ್ಯಾಸಂಗ, ವ್ಯಾಪಾರ-ವ್ಯವಹಾರ, ವಿದೇಶ ಪ್ರವಾಸಕ್ಕೆಂದು ವಿದೇಶಗಳಿಗೆ ಹೋಗುತ್ತಾರೆ. ಕರ್ನಾಟಕದಿಂದ ಎಷ್ಟು ಮಂದಿ ಎಲ್ಲಿದ್ದಾರೆ ಮತ್ತು ಯಾವಾಗ ಇದ್ದಾರೆ ಎಂಬುದನ್ನು ತಿಳಿಯಲು ರಾಯಭಾರ ಕಚೇರಿಗಳು, ವಿದೇಶಾಂಗ ಸಚಿವಾಲಯ ಮತ್ತು ಇತರ ಏಜೆನ್ಸಿಗಳಿಂದ ಅಂಕಿಅಂಶಗಳನ್ನು ಸಂಗ್ರಹಿಸುವುದು ಕಠಿಣ ಕೆಲಸವಲ್ಲ. ಪ್ರತಿ ರಕ್ಷಣಾ ಕಾರ್ಯಾಚರಣೆಯ ಸವಾಲು ಎಂದರೆ ಸಿಕ್ಕಿಹಾಕಿಕೊಂಡವರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ದೀರ್ಘ ಗಂಟೆಗಳ ಕಾಲ ಕಳೆಯುವುದಾಗುತ್ತದೆ. ಆ ಸಮಯದಲ್ಲಿ ಅವರಿಗೆ ಭರವಸೆ ನೀಡಲು ಮತ್ತು ಅವರನ್ನು ಸ್ಥಳಾಂತರಿಸಲು ಕಾರ್ಯತಂತ್ರಗಳನ್ನು ರೂಪಿಸಲು ಬಳಸಿಕೊಳ್ಳಬಹುದು ಎಂದು ಪ್ರಾಧಿಕಾರದೊಂದಿಗೆ ಕೆಲಸ ಮಾಡಿದ ಮಾಜಿ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ವೈದ್ಯಕೀಯ ವೃತ್ತಿಯಲ್ಲಿ ಜನರಿಗೆ ಆರೋಗ್ಯ ಸೇವೆ ನೀಡಲು ಗೋಲ್ಡನ್ ಅವರ್ ಎಂಬುದಿರುತ್ತದೆ. ರಕ್ಷಣಾ ಕಾರ್ಯಾಚರಣೆಗಳಿಗೂ ಗೋಲ್ಡನ್ ಅವರ್ ಪರಿಕಲ್ಪನೆಯನ್ನು ಪರಿಚಯಿಸಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. 

ಈ ಹಂತದಲ್ಲಿ ವ್ಯಕ್ತಿಗಳ ಖಾಸಗಿತನವನ್ನು ಕಾಪಾಡಿಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ. ರಾಯಭಾರ ಕಚೇರಿಗಳು ಮತ್ತು ಟ್ರಾವೆಲ್ ಏಜೆಂಟ್‌ಗಳೊಂದಿಗೆ ವಿವರಗಳನ್ನು ಹಂಚಿಕೊಳ್ಳುತ್ತಿರುವಾಗ, ಅವುಗಳನ್ನು ಅಧಿಕಾರಿಗಳೊಂದಿಗೆ ಹಂಚಿಕೊಳ್ಳುವುದರಿಂದ ಸಮಸ್ಯೆಯೇನು, ವಿದೇಶಕ್ಕೆ ಹೋಗುವವರು ಕಡ್ಡಾಯವಾಗಿ ವಿಮೆ ಮಾಡಿಸಬೇಕು ಎಂದು ಅವರು ಹೇಳುತ್ತಾರೆ. 

ನಾಗರಿಕರು ತಮ್ಮ ವೈಯಕ್ತಿಕ ವಿವರಗಳನ್ನು ಸಾರ್ವಜನಿಕವಾಗಿ ಪಡೆಯುವ ಬಗ್ಗೆ ಚಿಂತಿತರಾಗುತ್ತಾರೆ. ಜನರು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋದಾಗ ಸಮಸ್ಯೆಗಳು ಉದ್ಭವಿಸುತ್ತವೆ. ಅಲ್ಲದೆ, ವಿವಿಧ ಏಜೆನ್ಸಿಗಳ ನಡುವೆ ಸಮನ್ವಯದ ಕೊರತೆ ದೊಡ್ಡ ಸಮಸ್ಯೆಯಾಗಿದೆ. 

ಸುಡಾನ್‌ನಲ್ಲಿ ಸಿಲುಕಿರುವವರನ್ನು ರಕ್ಷಿಸುವ ಸಂದರ್ಭದಲ್ಲಿ ನಾವು ಇದನ್ನು ನೋಡಿದ್ದೇವೆ. ಕೊನೆಯ ಕ್ಷಣದವರೆಗೂ ವಿದೇಶಾಂಗ ಸಚಿವಾಲಯ ಕನ್ನಡಿಗರ ವಿವರಗಳನ್ನು ಹಂಚಿಕೊಂಡಿರಲಿಲ್ಲ. ಎಲ್ಲಾ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಬೇಕು. ಸಾಮಾನ್ಯ ಡೇಟಾಬೇಸ್ ನ್ನು ರಚಿಸಬೇಕು, ಅದನ್ನು ಪ್ರತಿ ಹದಿನೈದು ದಿನಗಳಿಗೊಮ್ಮೆ ನವೀಕರಿಸಬೇಕು. ಇದರ ಬಗ್ಗೆ ಚರ್ಚಿಸಲಾಗಿದೆಯಾದರೂ ಯಾರೂ ಮುಂದಾಳತ್ವ ವಹಿಸಲು ಬಯಸುವುದಿಲ್ಲ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com