ಧಾರವಾಡ-ಬೆಂಗಳೂರು ವಂದೇ ಭಾರತ್ ನಲ್ಲಿ ಈಗ ಕನ್ನಡ ಇನ್ಫೋಟೈನ್ಮೆಂಟ್ ಲಭ್ಯ!

ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನಲ್ಲಿ ಕನ್ನಡದ ಭಾಷೆಯಲ್ಲಿ ಮನರಂಜನೆ-ಮಾಹಿತಿ ಇಲ್ಲವೆಂಬ ಆಕ್ಷೇಪ ಕೇಳಿಬಂದ ಬೆನ್ನಲ್ಲೇ ರೈಲ್ವೆ ಈ ಸಮಸ್ಯೆಯನ್ನು ಬಗೆಹರಿಸಿದೆ.
ವಂದೇ ಭಾರತ್ ಎಕ್ಸ್ ಪ್ರೆಸ್
ವಂದೇ ಭಾರತ್ ಎಕ್ಸ್ ಪ್ರೆಸ್

ಬೆಂಗಳೂರು: ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನಲ್ಲಿ ಕನ್ನಡದ ಭಾಷೆಯಲ್ಲಿ ಮನರಂಜನೆ-ಮಾಹಿತಿ ಇಲ್ಲವೆಂಬ ಆಕ್ಷೇಪ ಕೇಳಿಬಂದ ಬೆನ್ನಲ್ಲೇ ರೈಲ್ವೆ ಈ ಸಮಸ್ಯೆಯನ್ನು ಬಗೆಹರಿಸಿದೆ.

ಪರಿಣಾಮ ಈಗ ಈ ಮಾರ್ಗದ ಅತ್ಯಂತ ದುಬಾರಿ ಎಕ್ಸ್ ಪ್ರೆಸ್ ನಲ್ಲಿ ಕನ್ನಡ ಇನ್ಫೋಟೈನ್ಮೆಂಟ್ ಲಭ್ಯವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಯಾಣಿಕ ಕೃಷ್ಣಪ್ಪ, ಕನ್ನಡ ಇನ್ಫೋಟೈನ್ಮೆಂಟ್ ನ್ನು ಪರಿಚಯಿಸಿರುವುದು ಅತ್ಯಂತ ಒಳ್ಳೆಯ ನಡೆ ಹಾಗೂ ಇದರಿಂದಾಗಿ ನಾವು ಪ್ರಯಾಣವನ್ನು ಆನಂದಿಸುವಂತಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಸಿಪಿಆರ್ ಒ ಎಸ್ ಡಬ್ಲ್ಯುಆರ್ ಅನೀಶ್ ಹೆಗ್ಡೆ, ಸಾರ್ವಜನಿಕರ ಬೇಡಿಕೆಯ ಪ್ರಕಾರ ನಾವು ಕನ್ನಡ ಇನ್ಫೋಟೈನ್ಮೆಂಟ್ ನ್ನು ವಂದೇ ಭಾರತ್ ಎಕ್ಸ್ ಪ್ರೆಸ್ ನಲ್ಲಿ ಪರಿಚಯಿಸಿದ್ದೇವೆ, ಪ್ರತಿಕ್ರಿಯೆ ಅತ್ಯುತ್ತಮವಾಗಿದೆ ಎಂದು ಹೇಳಿದ್ದಾರೆ.

ಚೆನ್ನೈ-ಮೈಸೂರು ವಂದೇ ಭಾರತ ಎಕ್ಸ್ ಪ್ರೆಸ್ ನಲ್ಲಿ ಈಗಾಗಲೇ ಕನ್ನಡ ಇನ್ಫೊಟೈನ್ಮೆಂಟ್ ಇದೆ. ರೈಲ್ವೆ ಅಭಿಮಾನಿಗಳು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನಲ್ಲಿ ಮನರಂಜನೆಗೆ ಮನವಿ ಮಾಡಿದ್ದರು. ವಂದೇ ಭಾರತ್ ರೈಲಿನಲ್ಲಿ ಕನ್ನಡ ಸಿನಿಮಾ, ಶೋ, ಹಾಡುಗಳಂತಹ ಮನರಂಜನೆ ಇಲ್ಲದೇ ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದನ್ನು ಜು.೦3 ರಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com