16 ವರ್ಷ, 70 ಲಕ್ಷ ರೋಗಿಗಳಿಗೆ ಚಿಕಿತ್ಸೆ: ಉತ್ತಮ ಗುಣಮಟ್ಟಕ್ಕೆ ಜಯದೇವ ಆಸ್ಪತ್ರೆ- ಡಾ. ಸಿ.ಎನ್ ಮಂಜುನಾಥ್ ಸಾಧನೆ!

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ  ನಿರ್ದೇಶಕರಾಗಿರುವ ಡಾ.ಸಿಎನ್ ಮಂಜುನಾಥ್ ಅವರ ಸೇವಾವಧಿಯನ್ನು ಮುಂದಿನ 6 ತಿಂಗಳವರೆಗೆ ಮುಂದುವರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಡಾ.ಸಿ ಎನ್ ಮಂಜುನಾಥ್
ಡಾ.ಸಿ ಎನ್ ಮಂಜುನಾಥ್
Updated on

ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿರುವ ಡಾ.ಸಿ ಎನ್ ಮಂಜುನಾಥ್ ಅವರ ಸೇವಾವಧಿಯನ್ನು ಮುಂದಿನ 6 ತಿಂಗಳವರೆಗೆ ಮುಂದುವರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕಳೆದ 16 ವರ್ಷಗಳಿಂದ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಮಂಜುನಾಥ್, 70 ಲಕ್ಷಕ್ಕೂ ಹೆಚ್ಚು ಹೊರರೋಗಿಗಳಿಗೆ  ಚಿಕಿತ್ಸೆ ನೀಡಿದ್ದಾರೆ. 8 ಲಕ್ಷ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿದೆ, ಅದರಲ್ಲಿ 60,000 ಶಸ್ತ್ರಚಿಕಿತ್ಸೆಯನ್ನು ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಅವರ ಅವಧಿಯಲ್ಲಿ ಸ್ವತಃ ನಿರ್ವಹಿಸಿದ್ದಾರೆ. ಮಂಜುನಾಥ್ ಅವರು ಜುಲೈ 19 ರಂದು ಜಯದೇವ ಆಸ್ಪತ್ರೆಯಲ್ಲಿ 16 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದರು.

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಮಂಜುನಾಥ್ ಅವರ ಅವಧಿಯನ್ನು ಆರು ತಿಂಗಳು ವಿಸ್ತರಿಸಲಾಗಿದೆ. ಆದರೆ, ಇದೇ ಕೊನೆಯ ಬಾರಿಗೆ ಅವರ ಅವಧಿ ವಿಸ್ತರಣೆಯಾಗಲಿದೆ. “ಈ ಅಧಿಕಾರಾವಧಿಯ ನಂತರ ನಾನು ಖಂಡಿತವಾಗಿಯೂ ಜಯದೇವನಲ್ಲಿ ಕೆಲಸ ಮಾಡುವುದನ್ನು ಮುಂದುವರಿಸುವುದಿಲ್ಲ, ಆದಾಗ್ಯೂ, ನಾನು ಕ್ಲಿನಿಕಲ್ ನಲ್ಲಿ ಕಲಿಯುವ ಆಸಕ್ತಿ ಇರುವವರಿಗೆ ಬೋದನೆ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.

ಕಾರ್ಡಿಯೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾದ ಅಡಿಯಲ್ಲಿ ಜಯದೇವ ಆಸ್ಪತ್ರೆಯು 2022 ರಲ್ಲಿ ಅತ್ಯಧಿಕ ಹೃದಯ ಚಿಕಿತ್ಸೆಗಳಿಗಾಗಿ ಉನ್ನತ ಸ್ಥಾನ ಗಳಿಸಿದೆ. ಅವರ ಮುಂದಾಳತ್ವದಲ್ಲಿ, ಆಸ್ಪತ್ರೆಯು 16 ವರ್ಷಗಳಲ್ಲಿ 300 ಹಾಸಿಗೆಯಿಂದ 2,000 ಹಾಸಿಗೆಗಳ ಆಸ್ಪತ್ರೆಗೆ ವಿಸ್ತರಣೆಯಾಗಿದೆ.

"ಮೊದಲು ಚಿಕಿತ್ಸೆ, ನಂತರ ಪಾವತಿ" ಎಂಬ ಅವರ ಧ್ಯೇಯವಾಕ್ಯವಾಗಿದೆ, ಹಣಕಾಸಿನ ಅಡಚಣೆಗಳಿಂದ ಯಾವುದೇ ರೋಗಿಯು ಚಿಕಿತ್ಸೆಯಿಂದ ವಂಚಿತರಾಗಬಾರದು ಎಂಬುದು ಅವರ ಉದ್ದೇಶ. ಅವರು ಸರ್ಕಾರಿ ವ್ಯವಸ್ಥೆಯಲ್ಲಿ ಕಾರ್ಪೊರೇಟ್ ಸಂಸ್ಕೃತಿಯನ್ನು ಅಳವಡಿಸಿಕೊಂಡರು, ಆಸ್ಪತ್ರೆಯ ಗುಣಮಟ್ಟವನ್ನು ಸುಧಾರಿಸಿದರು, ಇದನ್ನು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಬೆಂಗಳೂರು ಮತ್ತು USA ಯ ಯೇಲ್ ವಿಶ್ವವಿದ್ಯಾಲಯದಂತಹ ಬಹು ಸಂಸ್ಥೆಗಳು ಪ್ರಶಂಸಿದವು. 2018 ರಲ್ಲಿ ಆಸ್ಪತ್ರೆಗಳು ಮತ್ತು ಆರೋಗ್ಯ ಪೂರೈಕೆದಾರರ ರಾಷ್ಟ್ರೀಯ ಮಾನ್ಯತೆ (NABH) ಅಡಿಯಲ್ಲಿ ಮಾನ್ಯತೆ ಪಡೆದಿದೆ.

ಡಾ ಮಂಜುನಾಥ್ ಅವರಿಂದ ಮೈಸೂರು, ಬೆಂಗಳೂರು ಮತ್ತು ಕಲಬುರಗಿಯಲ್ಲಿ ಅನೇಕ ಆಸ್ಪತ್ರೆಗಳನ್ನು ಆರಂಭವಾಗಿವೆ. ರಾಜ್ಯದ್ಯಂತ ಕೈಗೆಟುಕುವ ಹೃದಯ ಚಿಕಿತ್ಸೆ ಸುಧಾರಿಸಿದೆ. 2021 ರಲ್ಲಿ ಕಲಬುರಗಿಯಲ್ಲಿ ಪ್ರಾರಂಭವಾದ 371 ಹಾಸಿಗೆಗಳ ಯೋಜನೆ  8-10 ತಿಂಗಳುಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಸುಮಾರು 70 ವರ್ಷಗಳಿಂದ ಹೃದ್ರೋಗ ಚಿಕಿತ್ಸೆಯಿಂದ ವಂಚಿತವಾಗಿದ್ದ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಿಗೆ ಇದು ಲಭ್ಯವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com