ರಾಹುಲ್ ಗಾಂಧಿ ಕುರಿತ ವೀಡಿಯೋ: ಅಮಿತ್ ಮಾಲವೀಯ ವಿರುದ್ಧದ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧದ ಅವಹೇಳನಕಾರಿ ವೀಡಿಯೋ ಹಂಚಿಕೊಂಡಿದ್ದ ಅಮಿತ್ ಮಾಲವೀಯ ವಿರುದ್ಧದ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ. 
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧದ ಅವಹೇಳನಕಾರಿ ವೀಡಿಯೋ ಹಂಚಿಕೊಂಡಿದ್ದ ಅಮಿತ್ ಮಾಲವೀಯ ವಿರುದ್ಧದ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ. 

ಅಮಿತ್ ಮಾಲವಿಯ ಬಿಜೆಪಿಯ ಸಾಮಾಜಿಕ ಜಾಲತಾಣ ವಿಭಾಗದ ರಾಷ್ಟ್ರೀಯ ಮುಖ್ಯಸ್ಥರಾಗಿದ್ದಾರೆ. ತಮ್ಮ ವಿರುದ್ಧ ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಕೋರಿ ಹೈಕೋರ್ಟ್ ಗೆ ಮಾಲವೀಯ ಮನವಿ ಸಲ್ಲಿಸಿದ್ದರು. 

ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಪೀಠ ತನಿಖೆಗೆ ಮಧ್ಯಂತರ ತಡೆ ನೀಡಿದ್ದು, ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿ ಪ್ರಕರಣವನ್ನು ಮುಂದೂಡಲಾಗಿದೆ. ವಿಚಾರಣೆ ವೇಳೆ ಸಂಸದ ತೇಜಸ್ವಿ ಸೂರ್ಯ ಅರ್ಜಿದಾರರ ಪರವಾಗಿ ಹಾಜರಾಗಿ, ಸೆಕ್ಷನ್ 505 (2) ಹಾಗೂ 153A ಅಡಿಯಲ್ಲಿ ಶಿಕ್ಷಿಸುವಂತಹ ಯಾವುದೇ ಅಪರಾಧಗಳೂ ಆ ವೀಡಿಯೋದಲ್ಲಿಲ್ಲ ಎಂದು ವಾದಿಸಿದರು. 

"ಅರ್ಜಿದಾರರ ಕ್ರಿಯೆ, ಆಪಾದಿಸಿದ ಅಪರಾಧಕ್ಕೆ ಹೇಗೆ ಕಾರಣವಾಗಿವೆ ಎಂಬುದನ್ನು ತೋರಿಸಲು ದೂರಿನಲ್ಲಿ ಯಾವುದೇ ಅಂಶಗಳು ಇಲ್ಲ. ದೋಷಾರೋಪಣೆ ಮಾಡಲಾದ ಎಫ್‌ಐಆರ್ ಅನ್ನು ಈ ಆಧಾರದ ಮೇಲೆ ರದ್ದುಗೊಳಿಸಬಹುದಾಗಿದೆ,” ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com