ಚುನಾವಣೆ ಗೆಲ್ಲಲು ಮುನಿರತ್ನ ಹನಿಟ್ರ್ಯಾಪ್‌; ಅದಕ್ಕೆಂದೆ ಸ್ಟುಡಿಯೋ ಇದೆ: ವಿಕಾಸ ಸೌಧ, ವಿಧಾನ ಸೌಧದಲ್ಲೆಲ್ಲಾ ಬರೀ ಆಂಟಿಗಳೇ!

ಮಾಜಿ ಸಚಿವ, ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕುರಿತು ಗಂಭೀರ ಆರೋಪ ಕೇಳಿಬಂದಿದೆ. ಮುನಿರತ್ನ ಬೆಂಬಲಿಗರಾಗಿದ್ದ ವೇಲು ನಾಯ್ಕರ್ ಎಂಬವರು ಗಂಭೀರ ಆರೋಪ ಮಾಡಿದ್ದಾರೆ.
ವೇಲು ನಾಯ್ಕರ್, ಮುನಿರತ್ನ
ವೇಲು ನಾಯ್ಕರ್, ಮುನಿರತ್ನ

ಬೆಂಗಳೂರು: ಮಾಜಿ ಸಚಿವ, ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕುರಿತು ಗಂಭೀರ ಆರೋಪ ಕೇಳಿಬಂದಿದೆ. ಮುನಿರತ್ನ ಬೆಂಬಲಿಗರಾಗಿದ್ದ ವೇಲು ನಾಯ್ಕರ್ ಎಂಬವರು ಗಂಭೀರ ಆರೋಪ ಮಾಡಿದ್ದಾರೆ.

ಸಚಿವರಾಗಿದ್ದಾಗ ಮುನಿರತ್ನ ಹನಿಟ್ರ್ಯಾಪ್ ಮಾಡಿಸುತ್ತಿದ್ದರು. ಹನಿಟ್ರ್ಯಾಪ್ ಮಾಡಲೆಂದೇ ಸ್ಟುಡಿಯೋ ಇಟ್ಟುಕೊಂಡಿದ್ದಾರೆ ಎಂದು ಅವರ ಬೆಂಬಲಿಗ, ಬಿಬಿಎಂಪಿ ಮಾಜಿ ಕಾರ್ಪೊರೇಟರ್ ವೇಲು ನಾಯ್ಕರ್ ಗಂಭೀರ ಆರೋಪ ಮಾಡಿದ್ದಾರೆ.

ಶಾಸಕ ಮುನಿರತ್ನ ಬೆಂಬಲಿಗರಾಗಿದ್ದ ವೇಲು ನಾಯ್ಕರ್  ಬಿಜೆಪಿ ತೊರೆದು ಕಾಂಗ್ರೆಸ್​ ಸೇರ್ಪಡೆಯಾದರು. ಈ ವೇಳೆ ಮಾತನಾಡಿದ ವೇಲು ನಾಯ್ಕರ್, ಹನಿಟ್ರ್ಯಾಪ್ ಮಾಡಲು ಹೆದರಿಸಲು, ಜೆ.ಪಿ.ಪಾರ್ಕ್‌, ಡಾಲರ್ಸ್‌ ಕಾಲೋನಿಯಲ್ಲಿ ಇದಕ್ಕಾಗಿ ಸ್ಟುಡಿಯೋ ಇಟ್ಟಿದ್ದಾರೆ. ಅವರು ಸಿನಿಮಾ ನಿರ್ಮಾಪಕರಲ್ಲವೇ. ಹೀಗಾಗಿ ಹನಿಟ್ರ್ಯಾಪ್ ಮಾಡಿಸಿ ಹೆದರಿಸುತ್ತಾರೆ ಎಂದರು.

ಮುನಿರತ್ನಗೆ ಚುನಾವಣೆ ಎದುರಿಸುವುದು ಹೇಗೆ ಎಂದು ಕೇಳಿದೆವು. ನಿಮ್ಮದು ಈಸ್ಟ್‌ಮನ್ ಕಲರ್ ಪಿಕ್ಚರ್‌ ಇದೆ ತೋರಿಸಲಾ? ಇಲ್ಲ ಕೆಲಸ ಮಾಡುತ್ತೀರಾ ಅಂತಾ ಮುನಿರತ್ನ ಹೆದರಿಸುತ್ತಿದ್ದರು. ಮುನಿರತ್ನ ನಿರ್ಮಾಪಕನಾಗಿ ಮಾಡಿದ ಮೊದಲ ಚಿತ್ರ ಆಂಟಿ ಪ್ರೀತ್ಸೆ. ಹೀಗಾಗಿ ಮುನಿರತ್ನ ಸಚಿವರಾದ ಮೇಲೂ ಬರೀ ಆಂಟಿಗಳೇ ಇರುತ್ತಿದ್ದರು. ವಿಕಾಸಸೌಧ, ವಿಧಾನಸೌಧ ಚೇಂಬರ್‌ನಲ್ಲೆಲ್ಲಾ ಬರೀ ಆಂಟಿಗಳೇ ಇರುತ್ತಿದ್ದರು ಎಂದು ಆರೋಪಿಸಿದರು.

ನಾವು ಮುನಿರತ್ನ ಅವರಿಗೆ ಚುನಾವಣೆ ಎದುರಿಸುವುದು ಹೇಗೆ ಎಂದು ಕೇಳಿದೆವು. ಅದಕ್ಕೆ ಮುನಿರತ್ನ, ನಿಮ್ಮಗಳದ್ದು ಈಸ್ಟ್‌ಮನ್ ಕಲರ್ ಪಿಚ್ಚರ್ ಇದೆ ತೋರಿಸ್ಲಾ ಇಲ್ಲ ಕೆಲಸ ಮಾಡ್ತೀರಾ ಎಂದು ಹೆದರಿಸುತ್ತಿದ್ದರು. ಹನಿಟ್ರ್ಯಾಪ್ ಮಾಡುವುದಕ್ಕೆಂದೇ ಮುನಿರತ್ನ ಸ್ಟುಡಿಯೋ ಇಟ್ಟುಕೊಂಡಿದ್ದಾರೆ. ಕರೆಸುವುದು, ಹನಿಟ್ರ್ಯಾಪ್ ಮಾಡುವುದು, ಅದನ್ನು ಇಟ್ಟುಕೊಂಡು ಹೆದರಿಸುವುದು ಮಾಡುತ್ತಾರೆ ಎಂದು ವೇಲು ಆರೋಪಿಸಿದರು. ಕಾಂಗ್ರೆಸ್‌ ಸೇರ್ಪಡೆ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ ಸುರೇಶ್, ಆರ್.ಆರ್ ನಗರದ ಪಕ್ಷದ ಅಭ್ಯರ್ಥಿ ಕುಸುಮಾ ಹನುಮಂತ ರಾಯಪ್ಪ ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com