ಶೌಚಾಲಯದಲ್ಲಿ ವಿಡಿಯೋ ಪ್ರಕರಣ: ಉಡುಪಿ ಕಾಲೇಜಿಗೆ ಖುಷ್ಬೂ ಭೇಟಿ

ಉಡುಪಿಯ ಪ್ಯಾರಾಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯೊಬ್ಬರ ವಿಡಿಯೋವನ್ನು ಆಕೆಯ ಸಹ ವಿದ್ಯಾರ್ಥಿಗಳು ರೆಕಾರ್ಡ್ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ಪರಿಶೀಲಿಸಲು ನಾನು ಉಡುಪಿಗೆ ತೆರಳುತ್ತಿದ್ದೇನೆ...
ಖುಷ್ಬೂ
ಖುಷ್ಬೂ

ಬೆಂಗಳೂರು: ಉಡುಪಿಯ ಪ್ಯಾರಾಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯೊಬ್ಬರ ವಿಡಿಯೋವನ್ನು ಆಕೆಯ ಸಹ ವಿದ್ಯಾರ್ಥಿಗಳು ರೆಕಾರ್ಡ್ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ಪರಿಶೀಲಿಸಲು ನಾನು ಉಡುಪಿಗೆ ತೆರಳುತ್ತಿದ್ದೇನೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಅವರು ಬುಧವಾರ ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಕಾಲೇಜಿನ ಮೂವರು ವಿದ್ಯಾರ್ಥಿನಿಯರಾದ ಶಬ್ನಾಜ್, ಅಲ್ಫಿಯಾ ಮತ್ತು ಅಲೀಮಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಈ ಘಟನೆಯು "ಅತ್ಯಂತ ದುಃಖಕರ" ಎಂದಿರುವ ಖುಷ್ಬೂ, "ಬಾಲಕಿಯರು ವಾಶ್‌ರೂಮ್‌ನಲ್ಲಿ ತಮ್ಮ ಸಹವರ್ತಿಗಳ ವಿಡಿಯೋ ಚಿತ್ರೀಕರಿಸಿದ ವಿಷಯವನ್ನು ಪರಿಶೀಲಿಸಲು ಉಡುಪಿಗೆ ಹೋಗುತ್ತಿದ್ದೇನೆ. ಮಕ್ಕಳು ಇಂತಹ ಚಟುವಟಿಕೆಗಳಲ್ಲಿ ತೊಡಗುವುದು ತುಂಬಾ ದುಃಖಕರ ವಿಚಾರ. ಮಹಿಳಾ ಆಯೋಗದ ಸದಸ್ಯೆಯಾಗಿ ಈ ವಿಷಯದ ಬಗ್ಗೆ ಪರಿಶೀಲಿಸುತ್ತೇನೆ ಮತ್ತು ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತೇನೆ. ಪೊಲೀಸರನ್ನೂ ಭೇಟಿ ಮಾಡುತ್ತೇನೆ. ಮಹಿಳೆಯರ ಘನತೆಯ ಜೊತೆ ಯಾರೂ ಆಟವಾಡಬಾರದು ಎಂದು ಟ್ವೀಟ್ ಮಾಡಿದ್ದಾರೆ.

ಉಡುಪಿ ಕಾಲೇಜಿನ ಈ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಹಿಂದೂ ಹುಡುಗಿಯರ ವಿಡಿಯೋ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಮೂವರು ಮುಸ್ಲಿಂ ವಿದ್ಯಾರ್ಥಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಭಾರತೀಯ ಜನತಾ ಪಕ್ಷ ಗುರುವಾರ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com