ಬೆಳ್ಳಂದೂರು ಕೆರೆ 2024 ಡಿಸೆಂಬರ್ ಒಳಗೆ ಕೊಳಚೆಯಿಂದ ಮುಕ್ತ: ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ

ನಗರದ ಅತಿದೊಡ್ಡ ಕೆರೆಗಳಲ್ಲಿ ಒಂದಾದ ಬೆಳ್ಳಂದೂರು ಕೆರೆಯ ಜೀರ್ಣೋದ್ಧಾರ ಕಾರ್ಯವು ಡಿಸೆಂಬರ್ 2024 ರೊಳಗೆ ಪೂರ್ಣಗೊಳ್ಳಲಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. 
ಅಧಿಕಾರಿಗಳೊಂದಿಗೆ ಸಚಿವ ಈಶ್ವರ್ ಖಂಡ್ರೆ ಚರ್ಚೆ
ಅಧಿಕಾರಿಗಳೊಂದಿಗೆ ಸಚಿವ ಈಶ್ವರ್ ಖಂಡ್ರೆ ಚರ್ಚೆ

ಬೆಂಗಳೂರು: ನಗರದ ಅತಿದೊಡ್ಡ ಕೆರೆಗಳಲ್ಲಿ ಒಂದಾದ ಬೆಳ್ಳಂದೂರು ಕೆರೆಯ ಜೀರ್ಣೋದ್ಧಾರ ಕಾರ್ಯವು ಡಿಸೆಂಬರ್ 2024 ರೊಳಗೆ ಪೂರ್ಣಗೊಳ್ಳಲಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. 

ಕೆರೆಗೆ ಕೊಳಚೆ ನೀರು ಹರಿದು ಹೋಗದಂತೆ ಅಗತ್ಯವಿರುವ 14 ಕೊಳಚೆ ನೀರು ಸಂಸ್ಕರಣಾ ಘಟಕಗಳ (STP) ಕಾಮಗಾರಿ ಭರದಿಂದ ಸಾಗಿದೆ ಎಂದು ಹೇಳಿದ್ದಾರೆ. ಕೆಲವು ಪ್ರಾಯೋಗಿಕ ಸಮಸ್ಯೆಗಳಿಂದಾಗಿ ಕೆರೆಯ ಪುನಶ್ಚೇತನ ಕಾರ್ಯವು ವಿಳಂಬವಾಯಿತು, ಮುಖ್ಯವಾಗಿ ಒಳಚರಂಡಿ ನೀರು ಒಳಹರಿವು ಕಾರ್ಯ ತಡವಾಗಿದೆ.

ತಜ್ಞರ ಪ್ರಕಾರ ಸುಮಾರು 550 ಕನಿಷ್ಠ ಲಿಕ್ವಿಡ್ ಡಿಸ್ಚಾರ್ಜ್ (MLD) ಕೊಳಚೆ ನೀರು ಆ ಕೆರೆಗೆ ಬರುತ್ತದೆ. ಎಸ್‌ಟಿಪಿಗಳು ಈ ಸಮಸ್ಯೆಗಳನ್ನು ಪರಿಹರಿಸುವ ನಿರೀಕ್ಷೆಯಿದೆ. ಐದು ಹಳೆಯ ಎಸ್‌ಟಿಪಿಗಳನ್ನು ಮೇಲ್ದರ್ಜೆಗೇರಿಸಿ ಒಂಬತ್ತು ಹೊಸ ಎಸ್‌ಟಿಪಿಗಳನ್ನು ಸ್ಥಾಪಿಸುವ ಕೆಲಸ ನಡೆಯುತ್ತಿದೆ. 2024ರ ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದರು.

2015 ಮತ್ತು 2017ರಲ್ಲಿ ಬೆಂಕಿಗೆ ಆಹುತಿಯಾದ ನಂತರ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಬೆಳ್ಳಂದೂರು ಕೆರೆಗೆ ಸಚಿವರು ಭೇಟಿ ನೀಡಿ, ಪರಿಸ್ಥಿತಿಯ ನವೀಕರಣವನ್ನು ಪಡೆದರು. ತಿರುವು ಮಾರ್ಗದಲ್ಲಿ ಕೋರಮಂಗಲದಿಂದ ಹಸಿ ಕೊಳಚೆ ನೀರು ಹರಿದು ಬರುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಶುದ್ಧೀಕರಣ ಕಾಮಗಾರಿ ವಿಳಂಬವಾಗುತ್ತಿರುವುದಕ್ಕೆ ಅಧಿಕಾರಿಗಳಿಂದ ಮಾಹಿತಿ ಪಡೆದರು. 

ಕೆಎಸ್‌ಪಿಸಿಬಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು: ನೀರು ಕಲುಷಿತವಾಗುತ್ತಿರುವ ಹಾಗೂ ಅಂತರ್ಗತ ಬೋರ್‌ವೆಲ್‌ಗಳು, ಕೆರೆಗಳು ಮತ್ತು ಟ್ಯಾಂಕ್‌ಗಳಿಗೆ ಅಕ್ರಮವಾಗಿ ತ್ಯಾಜ್ಯ ಹರಿಸುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಲು ವಿಫಲವಾಗಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು.

ರಾಯಚೂರಿನಲ್ಲಿ ಕಲುಷಿತ ನೀರು ಸೇವಿಸಿ 5 ತಿಂಗಳ ಹಿಂದೆ ಐವರು ಮೃತಪಟ್ಟಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದರೆ ದೇವದುರ್ಗ ತಾಲ್ಲೂಕಿನಲ್ಲಿ ಸಂಭವಿಸುತ್ತಿದ್ದ 6ನೇ ಸಾವನ್ನು ತಪ್ಪಿಸಬಹುದಾಗಿತ್ತು ಎಂದು ಸಚಿವರು ಹೇಳಿದರು.

ಬೀದರ್‌ನಲ್ಲಿ ಜಲಮೂಲಗಳನ್ನು ಕಲುಷಿತಗೊಳಿಸುತ್ತಿರುವ ಕೈಗಾರಿಕೆಗಳ ಬಗ್ಗೆ ಪ್ರಸ್ತಾಪಿಸಿದ ಅವರು, ಕಲುಷಿತ ನೀರು ಸೇವನೆಯಿಂದ ಜಾನುವಾರುಗಳು ಮೃತಪಟ್ಟ ವರದಿಗಳು ಬಂದಿವೆ. ಆದರೆ ಕೆಎಸ್‌ಪಿಸಿಬಿ ಯಾವುದೇ ಕ್ರಮ ಕೈಗೊಂಡಿಲ್ಲ. ಇದಲ್ಲದೆ, 490 ಕೈಗಾರಿಕೆಗಳಿಗೆ 198 ಕೋಟಿ ರೂಪಾಯಿಗಳ ದಂಡವನ್ನು ವಿಧಿಸಲಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com