ಡಾ ವಸುಂಧರಾ ಭೂಪತಿ ಸೇರಿ ಹಲವು ಸಾಹಿತಿ, ಹೋರಾಟಗಾರರಿಗೆ ಜೀವ ಬೆದರಿಕೆ ಪತ್ರ: ಎಫ್ಐಆರ್ ದಾಖಲಿಸಿದ ವೈದ್ಯೆ

ಬರಹಗಾರ್ತಿ ಹಾಗೂ ಆಯುರ್ವೇದ ವೈದ್ಯೆ ಡಾ ವಸುಂಧರಾ ಭೂಪತಿ ಸೇರಿದಂತೆ ಹಲವು ಸಾಹಿತಿಗಳು, ಹೋರಾಟಗಾರರಿಗೆ ಜೀವ ಬೆದರಿಕೆ ಬಂದಿದ್ದು ಈ ಸಂಬಂಧ ಬಸವೇಶ್ವರ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. 
ಡಾ ವಸುಂಧರಾ ಭೂಪತಿ
ಡಾ ವಸುಂಧರಾ ಭೂಪತಿ

ಬೆಂಗಳೂರು: ಬರಹಗಾರ್ತಿ ಹಾಗೂ ಆಯುರ್ವೇದ ವೈದ್ಯೆ ಡಾ ವಸುಂಧರಾ ಭೂಪತಿ ಸೇರಿದಂತೆ ಹಲವು ಸಾಹಿತಿಗಳು, ಹೋರಾಟಗಾರರಿಗೆ ಜೀವ ಬೆದರಿಕೆ ಬಂದಿದ್ದು ಈ ಸಂಬಂಧ ಬಸವೇಶ್ವರ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. 

ಡಾ ವಸುಂಧರಾ ಭೂಪತಿ ಅವರಿಗೆ ಮೇ 29ರಂದು ಬೆದರಿಕೆ ಪತ್ರ ಬಂದಿದ್ದು ಅದರಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಪಟ್ಟಣದ ಅಂಚೆ ಕಚೇರಿ ಮುದ್ರೆ ಹಾಕಲಾಗಿದೆ. ರಾಜ್ಯದ ಪ್ರಗತಿಪರ ಮತ್ತು ಜಾತ್ಯತೀತ ಬುದ್ಧಿಜೀವಿಗಳೊಂದಿಗೆ ಗುರುತಿಸಿಕೊಳ್ಳಬೇಡಿ ಎಂದು ಹೆಸರಿಸದ ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ. ಈ ಕ್ರಮವನ್ನು ಮುಂದುವರಿಸಿದರೆ ನಿಮ್ಮ ಜೀವಕ್ಕೆ ಬೆಲೆ ತೆರುತ್ತೀರಿ ಎಂದು ಸಹ ಪತ್ರದಲ್ಲಿ ಭೂಪತಿ ಅವರಿಗೆ ಬೆದರಿಕೆ ಹಾಕಲಾಗಿದೆ.

ನಾನು ವೃತ್ತಿಯಲ್ಲಿ ವೈದ್ಯೆಯಾಗಿದ್ದು ಹಲವು ಸಾಹಿತ್ಯ ಕೃತಿಗಳನ್ನು ರಚಿಸಿದ್ದೇನೆ. ಮಹಿಳಾ ಪರ ಹಾಗೂ ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಹಿಂದೆಯೂ ಹಲವು ಬಾರಿ ನನಗೆ ಬೆದರಿಕೆ ಪತ್ರಗಳು ಬಂದಿದ್ದು ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಿ ಎಂದು ವಸುಂಧರಾ ಭೂಪತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಸಂಸ್ಕೃತಿ ಚಿಂತಕ ಡಾ ಬಂಜಗೆರೆ ಜಯಪ್ರಕಾಶ್ ಅವರಿಗೂ ಬೆದರಿಕೆ ಪತ್ರ ಬಂದಿದ್ದು ಅವರು ಸಹ ದೂರು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com