'ಗೃಹ ಲಕ್ಷ್ಮಿ' ಯೋಜನೆ ಉಳ್ಳವರಿಗಿಂತ ಸಮಾಜದ ದುರ್ಬಲ ವರ್ಗದವರನ್ನು ಹೆಚ್ಚು ತಲುಪುವುದು ಸೂಕ್ತ: ತಜ್ಞರ ಅಭಿಮತ

ಉತ್ತಮ ಆರ್ಥಿಕ ಹಿನ್ನೆಲೆ ಹೊಂದಿರುವ ಮಹಿಳೆಯರು ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಹೆಚ್ಚಿನ ಲಾಭ ಪಡೆದರೆ ಯೋಜನೆಯ ಉದ್ದೇಶ ವಿಫಲವಾಗುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 
ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ
ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ
Updated on

ಬೆಂಗಳೂರು: ಉತ್ತಮ ಆರ್ಥಿಕ ಹಿನ್ನೆಲೆ ಹೊಂದಿರುವ ಮಹಿಳೆಯರು ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಹೆಚ್ಚಿನ ಲಾಭ ಪಡೆದರೆ ಯೋಜನೆಯ ಉದ್ದೇಶ ವಿಫಲವಾಗುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಕಾಂಗ್ರೆಸ್ ಪಕ್ಷ ಚುನಾವಣೆಗೆ ಪೂರ್ವ ಘೋಷಿಸಿದ ಮತ್ತು ಸರ್ಕಾರವು ಅನುಮೋದಿಸಿದ ಐದು ಖಾತರಿಗಳಲ್ಲಿ ಗೃಹ ಲಕ್ಷ್ಮಿಯೂ ಒಂದಾಗಿದೆ. ವಿವಾಹಿತರು, ವಿಚ್ಛೇದಿತರು ಅಥವಾ ನಿರ್ಗತಿಕರಾಗಿರುವ 18 ವರ್ಷಕ್ಕಿಂತ ಮೇಲ್ಪಟ್ಟ ಕುಟುಂಬದ ಎಲ್ಲಾ ಯಜಮಾನಿಗೆ ಮಾಸಿಕ 2,000 ರೂ ಪ್ರೋತ್ಸಾಹಧನವನ್ನು ಸರ್ಕಾರ ನೀಡುವ ಯೋಜನೆಯಾಗಿದೆ. 

ಸಾಧನಾ ಮಹಿಳಾ ಸಂಘ ಮತ್ತು ಗೃಹ ಕಾರ್ಮಿಕರ ಹಕ್ಕುಗಳ ಒಕ್ಕೂಟ ಸೇರಿದಂತೆ ಅನೇಕ ಸಂಘಗಳೊಂದಿಗೆ ಕೆಲಸ ಮಾಡುತ್ತಿರುವ ಗೀತಾ ಮೆನನ್, ಈ ಯೋಜನೆಯು ಮಹಿಳಾ ಪರವಾಗಿದ್ದರೂ, ಸ್ಥಿರ ಆರ್ಥಿಕ ಹಿನ್ನೆಲೆಯಿಂದ ಬಂದವರಿಗೆ ಪ್ರೋತ್ಸಾಹವನ್ನು ನೀಡುವುದು ಸರ್ಕಾರದ ತಪ್ಪು ಕ್ರಮವಾಗಿದೆ. ಇಡೀ ಮಹಿಳಾ ಜನಸಂಖ್ಯೆಯು ಅರ್ಹರಾಗಿದ್ದರೆ, ಕಡಿಮೆ ಆದಾಯದ ಗುಂಪುಗಳ ಅನೇಕರು ವಂಚಿತರಾಗಬಹುದು ಎಂದು ಹೇಳುತ್ತಾರೆ. 

ಆರ್ಥಿಕ ಸ್ವತಂತ್ರ ಸಲಹೆಗಾರ್ತಿ ಜ್ಯೋತಿ ಬಿಜುಕುಮಾರ್, ಯಾವ ಮಹಿಳೆಯರನ್ನು 'ಮನೆಯ ಮುಖ್ಯಸ್ಥರು' ಎಂದು ಪರಿಗಣಿಸಬೇಕು ಎಂಬುದನ್ನು ಗುರುತಿಸುವ ಮಾನದಂಡವನ್ನು ಪ್ರಶ್ನಾರ್ಥಕವಾಗಿದೆ. ಸಾಮಾನ್ಯವಾಗಿ, ಎಲ್ಲಾ ಮನೆಗಳನ್ನು ಪುರುಷರೇ ನಿರ್ವಹಿಸುತ್ತಾರೆ ಎನ್ನುತ್ತಾರೆ. 

ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನದ ಮಾನದಂಡಗಳ ಬಗ್ಗೆ ಸ್ಪಷ್ಟತೆಯ ಕೊರತೆಯಿದೆ ಎಂದು ತಜ್ಞರು ಹೇಳಿದ್ದಾರೆ. ಅದನ್ನು ಪರಿಹರಿಸದಿದ್ದರೆ, ಯೋಜನೆಯು ಉತ್ತಮ ಉದ್ದೇಶದಿಂದ ಪ್ರಾರಂಭವಾಗಿ ವಿಫಲಗೊಂಡ ಮತ್ತೊಂದು ಯೋಜನೆಯಾಗಿ ಕೊನೆಗೊಳ್ಳುತ್ತದೆ. ಹೆಚ್ಚು ದುರ್ಬಲ ಗುಂಪುಗಳನ್ನು ತಲುಪಲು ವಿಫಲವಾಗುತ್ತದೆ ಎನ್ನುತ್ತಾರೆ. 

ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಜೂನ್ 15 ರಿಂದ ಜುಲೈ 15 ರವರೆಗೆ ತೆರೆದಿರುತ್ತದೆ. ಆಗಸ್ಟ್ 15ರಂದು ಯೋಜನೆ ಅಧಿಕೃತವಾಗಿ ಆರಂಭವಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com