ಹದಗೆಟ್ಟ ರಸ್ತೆಗೆ ಕೊಪ್ಪಳ ಸಾಕ್ಷಿ: ಒಂದು ವಾರದೊಳಗೆ ಆ್ಯಂಬುಲೆನ್ಸ್ ನಲ್ಲಿ ನಾಲ್ಕು ಹೆರಿಗೆ!

ಕೊಪ್ಪಳ ಜಿಲ್ಲೆಯಲ್ಲಿ ಒಂದು ವಾರದಲ್ಲಿ  ಆ್ಯಂಬುಲೆನ್ಸ್ ನಲ್ಲಿ ನಾಲ್ಕು ಗರ್ಭಿಣಿಯರಿಗೆ ಹೆರಿಗೆ ಆಗಿರುವ ಘಟನೆಗಳು ವರದಿಯಾಗಿವೆ, ಆರೋಗ್ಯ ಇಲಾಖೆಗೆ ಇದು ಸಾಮಾನ್ಯ ಎನಿಸಿದರೂ,  ಹದಗೆಟ್ಟ ರಸ್ತೆಗಳೇ ಇದಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.
ನವಜಾತ ಶಿಶುವಿನೊಂದಿಗೆ ತಾಯಿ
ನವಜಾತ ಶಿಶುವಿನೊಂದಿಗೆ ತಾಯಿ
Updated on

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಒಂದು ವಾರದಲ್ಲಿ ಆ್ಯಂಬುಲೆನ್ಸ್ ನಲ್ಲಿ ನಾಲ್ಕು ಗರ್ಭಿಣಿಯರಿಗೆ ಹೆರಿಗೆ ಆಗಿರುವ ಘಟನೆಗಳು ವರದಿಯಾಗಿವೆ, ಆರೋಗ್ಯ ಇಲಾಖೆಗೆ ಇದು ಸಾಮಾನ್ಯ ಎನಿಸಿದರೂ,  ಹದಗೆಟ್ಟ ರಸ್ತೆಗಳೇ ಇದಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.

ಗುಂಡಿಗಳಿಂದ ಕೂಡಿದ ರಸ್ತೆಗಳು ಇದಕ್ಕೆ ಕಾರಣ. ಕನಕಗಿರಿ ತಾಲೂಕಿನ ನಿರ್ಗುಟಗಿ ಹಾಗೂ ಚಿಕ್ಕಾಡಿ ಗ್ರಾಮಗಳ ರಸ್ತೆಗಳು ಹಲವು ತಿಂಗಳುಗಳಿಂದ ಹದಗೆಟ್ಟ ಸ್ಥಿತಿಯಲ್ಲಿವೆ. ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ರಸ್ತೆ ಸರಿಪಡಿಸಿಲ್ಲ ಕೊಪ್ಪಳದ ಹಲವಾರು ಗ್ರಾಮಸ್ಥರು ಆರೋಪಿಸಿದ್ದಾರೆ.

ಮಳೆಗಾಲ ಸಮೀಪಿಸುತ್ತಿದ್ದರೂ ಜಿಲ್ಲೆಯಾದ್ಯಂತ ಹದಗೆಟ್ಟಿರುವ ಹಲವಾರು ರಸ್ತೆಗಳು ದುರಸ್ತಿಯಾಗಿಲ್ಲ, ರಸ್ತೆಯ ಮಧ್ಯದಲ್ಲಿ ದೊಡ್ಡ ಹೊಂಡಗಳಿದ್ದು, ಮಳೆಗಾಲದಲ್ಲಿ ಪ್ರಯಾಣಿಕರಿಗೆ ಅನೇಕ ಸಮಸ್ಯೆಗಳು ಎದುರಾಗುತ್ತಿವೆ.  ಮಳೆಗಾಲ ಹತ್ತಿರವಾಗಿದ್ದರೂ, ರಸ್ತೆಗಳ ಸ್ಥಿತಿ ಬದಲಾಗಿಲ್ಲ,  ಹೀಗಾಗಿ ಕಳೆದ ವಾರದಲ್ಲಿ ಆಂಬ್ಯುಲೆನ್ಸ್‌ಗಳಲ್ಲಿ ನಾಲ್ಕು ಹೆರಿಗೆಗಳಾಗಿವೆ  ಎಂದು ಚಿಕ್ಕಾಡಿಯ ಗ್ರಾಮಸ್ಥರು ದೂರಿದರು. .

ಮಳೆಗಾಲದಲ್ಲಿ ವಿಶೇಷವಾಗಿ ಅಣೆಕಟ್ಟು ನೀರು ಬಿಡುಗಡೆಯಾದಾಗ ಜಿಲ್ಲೆಯು ಪ್ರವಾಹಕ್ಕೆ ಸಾಕ್ಷಿಯಾಗುತ್ತದೆ. ಮಳೆಗಾಲದಲ್ಲಿ ಕಳಪೆ ಗುಣಮಟ್ಟದ ರಸ್ತೆಗಳಲ್ಲಿ ಪ್ರಯಾಣಿಸುವುದು ಅಪಾಯಕಾರಿ ಸಂಗತಿಯಾಗಿದೆ. ಆಡಳಿತವು ತಾತ್ಕಾಲಿಕ ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಏತನ್ಮಧ್ಯೆ, ಜಿಲ್ಲಾ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಆಂಬ್ಯುಲೆನ್ಸ್‌ಗಳ ಒಳಗೆ ನಡೆಯುವ ಅನೇಕ ಘಟನೆಗಳ ಹಿಂದಿನ ಕಾರಣ "ಕಳಪೆ ರಸ್ತೆ ಪರಿಸ್ಥಿತಿ" ಕಾರಣವನ್ನು  ನಿರಾಕರಿಸಿದ್ದಾರೆ.  ಅನೇಕ ಬಾರಿ ರೋಗಿಗಳು, ವಿಶೇಷವಾಗಿ ಗರ್ಭಿಣಿಯರು, ಸಕಾಲದಲ್ಲಿ ದಾಖಲಾಗುವ ಬದಲು ಕೊನೆಯ ಕ್ಷಣದಲ್ಲಿ ಆಂಬ್ಯುಲೆನ್ಸ್‌ಗೆ ಕರೆ ಮಾಡುತ್ತಾರೆ. ಕೆಲವೊಮ್ಮೆ ಬೇಗನೆ ಹೆರಿಗೆ ನೋವು ಉಂಟಾಗುತ್ತದೆ ಮತ್ತು ಕುಟುಂಬವು ಆಂಬ್ಯುಲೆನ್ಸ್‌ಗೆ ಕರೆ ಮಾಡುವುದನ್ನು ಬಿಟ್ಟು ಬೇರೆ ದಾರಿಯಿರುವದಿಲ್ಲ. ಆಂಬ್ಯುಲೆನ್ಸ್ ಸಿಬ್ಬಂದಿಗೆ ಅಂತಹ ಸಂದರ್ಭಗಳನ್ನು ನಿಭಾಯಿಸಲು ತರಬೇತಿ ನೀಡಲಾಗುತ್ತದೆ ಮತ್ತು ಆಂಬ್ಯುಲೆನ್ಸ್‌ಗಳಲ್ಲಿ ಹೆರಿಗೆ ಮಾಡುವುದು ಸಾಮಾನ್ಯವಾಗಿದೆ, ”ಎಂದು ಅಧಿಕಾರಿಯೊಬ್ಬರು ಹೇಳಿದರು.

"ತುರ್ತು ಸಂದರ್ಭಗಳಲ್ಲಿ, ಹಳ್ಳಿಗಳಲ್ಲಿನ ವಯಸ್ಸಾದ ಮಹಿಳೆಯರು ಸಹ ತಾಯಂದಿರನ್ನು ಕರೆದುಕೊಂಡು ಹೋಗುತ್ತಾರೆ. ಹೆರಿಗೆ ನೋವಿನ ಸಂದರ್ಭದಲ್ಲಿ ಅವರ ಉಪಸ್ಥಿತಿಯು ಸುಗಮ ಹೆರಿಗೆಗೆ ಸಹಕಾರಿಯಾಗುತ್ತದೆ" ಎಂದು ಅಧಿಕಾರಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com