ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ವಸತಿ ಶಾಲೆಯಲ್ಲಿ ಅಪ್ರಾಪ್ತ ವಿದ್ಯಾರ್ಥಿನಿ ಮೃತಪಟ್ಟ ಪ್ರಕರಣದಲ್ಲಿ ಆ ವಸತಿ ಶಾಲೆಯ ಉಸ್ತುವಾರಿಯನ್ನು ಬಂಧಿಸಲಾಗಿದೆ.
ಜೂ.8 ರಂದು 13 ವರ್ಷದ ಬಾಲಕಿ ಸಾವನ್ನಪ್ಪಿದ್ದು ಆಕೆಯ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿತ್ತು. ಸಂತ್ರಸ್ತೆಯ ಇಬ್ಬರು ಸ್ನೇಹಿತರು ಹಾಗೂ ಸಹಪಾಠಿಗಳು, ಆಕೆಯ ಸಂಬಂಧಿಯೊಬ್ಬರು ನೀಡಿದ್ದ ಹೇಳಿಕೆ ಆಧಾರದಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದ್ದು ತನಿಖೆ ಪ್ರಗತಿಯಲ್ಲಿದೆ.
ಸಂತ್ರಸ್ತೆ ಸಾಗರದ ರೈತರ ಮಗಳಾಗಿದ್ದು, ಉತ್ತಮ ಶಿಕ್ಷಣ ಕೊಡಿಸುವ ಕನಸು ಹೊತ್ತಿದ್ದ ಪೋಷಕರು ಮಗುವನ್ನು ವಸತಿ ಶಾಲೆಗೆ ಸೇರಿಸಿದ್ದರು. ವಸತಿ ಶಾಲೆಗೆ ದಾಖಲಿಸಿದ್ದ 5 ದಿನಗಳ ಬಳಿಕ ಮಗು ತೀವ್ರ ಅನಾರೋಗ್ಯಕ್ಕೆ ತುತ್ತಾಗಿತ್ತು. ಬೆಳಿಗ್ಗೆ ಎದ್ದಿರಲಿಲ್ಲ. ತೀವ್ರ ವಾಂತಿ, ಬೇಧಿಯಿಂದ ಬಳಲುತ್ತಿದ್ದ ಆಕೆ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಳು. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಆಕೆ ಮೃತಪಟ್ಟಿದ್ದಳು.
ಘಟನೆಯ ನಂತರ ಆರೋಪಿ, ಬಾಲಕಿಗೆ ಕಾಲು ನೋವು ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ. ಸಂತ್ರಸ್ತೆಯ ಅವಳ ಕಾಲಿಗೆ ಜೆಲ್ ಮತ್ತು ಎಣ್ಣೆಯನ್ನು ಹಚ್ಚಿ ರಸಂ ಬಡಿಸಲಾಯಿತು. ಅದೇ ರಸಂ ನ್ನು ಆರೋಪಿ ಹಾಗೂ ಮಕ್ಕಳು ಸಹ ಸೇವಿಸಿದ್ದರು. ಬೆಳಗ್ಗೆ ಎಲ್ಲಾ ವಿದ್ಯಾರ್ಥಿಗಳು ನೀರು ಕುಡಿಯಲು ಬಂದಾಗ ಸಂತ್ರಸ್ತೆ ಮಾತ್ರ ಹಿಂತಿರುಗಿರಲಿಲ್ಲ. ಆಕೆಗೆ ವಾಂತಿ ಮತ್ತು ಸುಸ್ತು ಕಾಣಿಸಿಕೊಂಡಿತ್ತು ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿರುವುದಾಗಿ ಆರೋಪಿ ಹೇಳಿದ್ದಾರೆ.
ಇದು ಹೃದಯ ಸ್ತಂಭನದ ಪ್ರಕರಣ ಎಂದು ವೈದ್ಯರು ಶಂಕಿಸಿದ್ದಾರೆ ಮತ್ತು ಮರಣೋತ್ತರ ಪರೀಕ್ಷೆಯ ವರದಿಯು ಸಾವಿಗೆ ನಿಖರವಾದ ಕಾರಣವನ್ನು ಖಚಿತಪಡಿಸುತ್ತದೆ ಎಂದು ಆರೋಪಿ ತನ್ನನ್ನು ತಾನು ಸಮರ್ಥಿಸಿಕೊಂಡಿದ್ದಾರೆ.ಆದರೆ, ಹೊಸ ಹೇಳಿಕೆಗಳನ್ನು ಆಧರಿಸಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಶಾಲಾ ಮುಖ್ಯಸ್ಥನನ್ನು ಬಂಧಿಸಿದ್ದಾರೆ.
ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ವರದಿಗಾಗಿ ಕಾಯುತ್ತಿದ್ದಾರೆ. ತನಿಖೆ ನಡೆಯುತ್ತಿದೆ.
Advertisement