ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಟೋಲ್ ದರ ಶೇಕಡ 22ರಷ್ಟು ಹೆಚ್ಚಳ!

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಟೋಲ್ ದರ ಶೇಕಡ 22ರಷ್ಟು ಹೆಚ್ಚಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ. 
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ

ರಾಮನಗರ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಟೋಲ್ ದರ ಶೇಕಡ 22ರಷ್ಟು ಹೆಚ್ಚಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ. 

ಈ ಆದೇಶ ಜೂನ್ 1ರಿಂದಲೇ ಅನ್ವಯವಾಗುತ್ತಿದ್ದು ಫಾಸ್ಟ್ ಟ್ಯಾಗ್ ಹಿನ್ನೆಲೆಯಲ್ಲಿ ಟೋಲ್ ದರ ಹೆಚ್ಚಳ ಜನರ ಗಮನಕ್ಕೆ ಬಂದಿರಲಿಲ್ಲ. ಇನ್ನು ಈ ಹಿಂದೆ ಏಪ್ರಿಲ್ 1ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ದರವನ್ನು ಹೆಚ್ಚಿಸಿತ್ತು. ಇದನ್ನು ವಿರೋಧಿಸಿ ಜನರು ಪ್ರತಿಭಟನೆ ನಡೆಸಿದ್ದರಿಂದ ದರ ಹೆಚ್ಚಳ ಆದೇಶವನ್ನು ಹಿಂಪಡೆಯಲಾಗಿತ್ತು. 

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಧಿಸಿರುವ ಟೋಲ್‌ ದರ ಹೀಗಿದೆ
ಕಾರು, ವ್ಯಾನ್‌, ಜೀಪ್‌ಗಳ ಏಕಮುಖ ಸಂಚಾರಕ್ಕೆ 135 ರೂಪಾಯಿಯಿಂದ 165 ರೂಪಾಯಿಗೆ ಏರಿಕೆ ಮಾಡಲಾಗಿದೆ. ಅಂದರೆ, ಬರೋಬ್ಬರಿ 30 ರೂಪಾಯಿ ಹೆಚ್ಚಳ ಮಾಡಲಾಗಿದೆ. 

ಲಘು ವಾಹನಗಳು, ಮಿನಿ ಬಸ್‌ಗಳ ಏಕಮುಖ ಟೋಲ್‌ 220 ರೂಪಾಯಿಯಿಂದ 270 ರೂಪಾಯಿಗೆ ಏರಿಕೆ ಮಾಡಲಾಗಿದ್ದು 50 ರೂಪಾಯಿ ಹೆಚ್ಚಳ ಮಾಡಿದಂತೆ ಆಗಿದೆ.

ಇನ್ನು ಟ್ರಕ್‌, ಬಸ್, 2 ಆಕ್ಸೆಲ್‌ ವಾಹನಗಳ ಏಕಮುಖ ಸಂಚಾರಕ್ಕೆ 460 ರೂಪಾಯಿಯಿಂದ 565ಕ್ಕೆ ಏರಿಕೆ ಮಾಡಲಾಗಿದ್ದು, ಬರೋಬ್ಬರಿ 105 ರೂಪಾಯಿಯನ್ನು ಹೆಚ್ಚಳ ಮಾಡಲಾಗಿದೆ. 3 ಆಕ್ಸೆಲ್ ವಾಣಿಜ್ಯ ವಾಹನಗಳ ಏಕಮುಖ ಸಂಚಾರವನ್ನು 500ರಿಂದ 615 ರೂಪಾಯಿಗೆ ಏರಿಕೆ ಮಾಡಲಾಗಿದೆ. ಈ ಮೂಲಕ 115 ರೂಪಾಯಿ ಹೆಚ್ಚಳ ಮಾಡಿದಂತೆ ಆಗಿದೆ.

ಭಾರಿ ವಾಹನಗಳ ಏಕಮುಖ ಸಂಚಾರಕ್ಕೆ 720 ರೂಪಾಯಿಯಿಂದ 885 ರೂಪಾಯಿಗೆ ಹೆಚ್ಚಳ ಮಾಡಲಾಗಿದ್ದು ಈಗ 165 ರೂಪಾಯಿ ಹೆಚ್ಚಳ ಮಾಡಿದಂತೆ ಆಗಿದೆ. 7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್‌ ವಾಹನಗಳ ಏಕಮುಖ ಸಂಚಾರ ದರವು 880 ರೂಪಾಯಿಯಿಂದ 1,080 ರೂಪಾಯಿಗೆ ಏರಿಕೆ ಮಾಡಲಾಗಿದೆ. ಅಂದರೆ ಏಕಮುಖ ಸಂಚಾರಕ್ಕೆ 200 ರೂಪಾಯಿ ಹೆಚ್ಚಳ ಮಾಡಿದಂತೆ ಆಗಿದೆ. ಅದೇ ದ್ವಿಮುಖ ಸಂಚಾರಕ್ಕೆ ದುಪ್ಪಟ್ಟು ಆಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com