ಮತ್ತೊಂದು 'ಐಎಎಸ್ ದಂಪತಿ' ಕೈಯಲ್ಲಿ ಶಕ್ತಿ ಸೌಧ: ರಜನೀಶ್ ಗೋಯೆಲ್ ಪತ್ನಿ ಶಾಲಿನಿ ಸರ್ಕಾರದ ಮುಂದಿನ ಮುಖ್ಯಕಾರ್ಯದರ್ಶಿ?

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್‌ಎನ್ ಪ್ರಸಾದ್ ಜೂನ್‌ನಲ್ಲಿ ಮತ್ತು ಅವರ ಪತ್ನಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಆಗಸ್ಟ್‌ನಲ್ಲಿ ನಿವೃತ್ತಿಯಾಗಲಿದ್ದಾರೆ, ಇದರ ನಂತರ ಮತ್ತೊಂದು ಐಎಎಸ್ ಅಧಿಕಾರಿ ದಂಪತಿಗಳು ಮುಖ್ಯ ಹುದ್ದೆ ಅಲಂಕರಿಸುವ ನಿರೀಕ್ಷೆಯಲ್ಲಿದ್ದಾರೆ.
ರಜನೀಶ್ ಮತ್ತು ಶಾಲಿನಿ ರಜನೀಶ್
ರಜನೀಶ್ ಮತ್ತು ಶಾಲಿನಿ ರಜನೀಶ್

ಬೆಂಗಳೂರು: ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್‌ಎನ್ ಪ್ರಸಾದ್ ಜೂನ್‌ನಲ್ಲಿ ಮತ್ತು ಅವರ ಪತ್ನಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಆಗಸ್ಟ್‌ನಲ್ಲಿ ನಿವೃತ್ತಿಯಾಗಲಿದ್ದಾರೆ, ಇದರ ನಂತರ ಮತ್ತೊಂದು ಐಎಎಸ್ ಅಧಿಕಾರಿ ದಂಪತಿಗಳು ಮುಖ್ಯ ಹುದ್ದೆ ಅಲಂಕರಿಸುವ ನಿರೀಕ್ಷೆಯಲ್ಲಿದ್ದಾರೆ.

ಐಎಎಸ್ ಅಧಿಕಾರಿ ರಜನೀಶ್ ಗೋಯೆಲ್ ಮತ್ತು ಅವರ ಪತ್ನಿ ಶಾಲಿನಿ ರಜನೀಶ್ ಅವರು ಆಯ್ಕೆಯಾದರೆ, ಸುಮಾರು ನಾಲ್ಕು ವರ್ಷಗಳ ಕಾಲ ಉನ್ನತ ಹುದ್ದೆಯಲ್ಲಿರಲಿದ್ದಾರೆ.

ಎರಡು ದಶಕಗಳ ಹಿಂದೆ ಮುಖ್ಯ ಕಾರ್ಯದರ್ಶಿಯಾಗಿದ್ದ ಲೆಜೆಂಡರಿ ಬಿಪುಲ್ ಭಟ್ಟಾಚಾರ್ಯ ಮತ್ತು ತೆರೆಸಾ ಭಟ್ಟಾಚಾರ್ಯ ಅವರ ನಂತರ ಉನ್ನತ ಹುದ್ದೆಗೆ ನೇಮಕವಾಗಿದ್ದರು. ಅವರು ಕೂಡ ಹೆಚ್ಚಿನ ಸಮಯ ಕಾರ್ಯ ನಿರ್ವಹಿಸಿದ್ದರು. ಕಾರ್ಯವಿಧಾನದ ಪ್ರಕಾರ, ಮುಖ್ಯ ಕಾರ್ಯದರ್ಶಿಯನ್ನು ಉನ್ನತ ಮಟ್ಟದ ಅಧಿಕೃತ ಸೆಲೆಕ್ಷನ್ ಸಮಿತಿ ಆಯ್ಕೆ ಮಾಡುತ್ತದೆ, ಹೀಗಾಗಿ ರಜನೀಶ್ ಗೋಯೆಲ್ ಮತ್ತು ಶಾಲಿನಿ ರಜನೀಶ್ ಅವರು ಮೊದಲು ಆ ಅಡಚಣೆಯನ್ನು ದಾಟಬೇಕಾಗುತ್ತದೆ.

ಐಎಸ್ಎನ್ ಪ್ರಸಾದ್ 'ಅನ್ ಸೀನ್ ಬ್ಯರೋಕ್ರಾಟ್ ಮೈಂಡ್' ಅಂದರೆ ಅವರ ಕೆಲಸ ತೆರೆಯ ಹಿಂದಿನದ್ದಾಗಿದೆ, ಅವರು ಜೂನ್ ತಿಂಗಳಿನಲ್ಲಿ ನಿವೃತ್ತಿಯಾಗಲಿದ್ದಾರೆ. ಅವರ ಪತ್ನಿ ವಂದಿತಾ ಶರ್ಮಾ ಎರಡು ತಿಂಗಳ ನಂತರ ಆಗಸ್ಟ್‌ನಲ್ಲಿ ನಿವೃತ್ತರಾಗಲಿದ್ದಾರೆ. ಸಿಎಂ ಕಚೇರಿಯಲ್ಲಿರುವ ನಿಯೋಜಿತವಾಗಿರುವ ರಜನೀಶ್ ಗೋಯೆಲ್ 11 ತಿಂಗಳ ಅಧಿಕಾರಾವಧಿಯಿದೆ. 1989 ನೇ ಬ್ಯಾಚ್ ಅಧಿಕಾರಿಯಾಗಿರುವ ಅವರ ಪತ್ನಿ ಶಾಲಿನಿ ರಜನೀಶ್ ಮೂರು ವರ್ಷಗಳ ಅಧಿಕಾರಾವಧಿಯನ್ನು ಹೊಂದಿರುತ್ತಾರೆ.

ಗೋಯಲ್ ದಂಪತಿಗಳು ಚಂಡೀಗಢದಿಂದ ಬಂದವರು ಮತ್ತು ರಜನೀಶ್ ಗೋಯೆಲ್ ಅವರ ತಂದೆ ಸ್ಥಳೀಯವಾಗಿ ಪ್ರಸಿದ್ಧ ಶಿಕ್ಷಣತಜ್ಞರಾಗಿದ್ದಾರೆ. ಐಎಸ್‌ಎನ್ ಪ್ರಸಾದ್ ಅವರು ಮಣಿಪುರ ಮೂಲದ ಕೇಡರ್ ಅಧಿಕಾರಿಯಾಗಿದ್ದು, ಕರ್ನಾಟಕ ಕೇಡರ್‌ನ ವಂದಿತಾ ಶರ್ಮಾ ಅವರನ್ನು ವಿವಾಹವಾದ ನಂತರ ಕೇಡರ್ ಬದಲಾವಣೆಯನ್ನು ನೀಡಲಾಯಿತು.

<strong>ಶಾಲಿನಿ ರಜನೀಶ್ ಮತ್ತು ರಜನೀಶ್</strong>
ಶಾಲಿನಿ ರಜನೀಶ್ ಮತ್ತು ರಜನೀಶ್

ಇದಕ್ಕೆ ವ್ಯತಿರಿಕ್ತವಾಗಿ, ರಜನೀಶ್ ಮತ್ತು ಶಾಲಿನಿ ರಜನೀಶ್ ಇಬ್ಬರೂ ಕರ್ನಾಟಕ ಕೇಡರ್‌ನಿಂದ ಬಂದವರು. ಇತ್ತೀಚೆಗೆ, ರಜನೀಶ್ ಅವರು ಮುಖ್ಯಮಂತ್ರಿ ಕಚೇರಿಯಲ್ಲಿ (CMO) ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆಡಳಿತದಲ್ಲಿರುವ ಸರ್ಕಾರ ಮತ್ತು ರಜನೀಶ್ ನಡುವೆ ಉತ್ತಮ ಬಾಂಧವ್ಯವಿದೆ ಎಂಬುದು ಇದರಿಂದ ತಿಳಿಯುತ್ತದೆ.

ರಜನೀಶ್ ಗೋಯೆಲ್ 1986-ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದು, ವಂದಿತಾ ಶರ್ಮಾ ಅವರಂತೆಯೇ ಸೇವಾ ಹಿರಿತನವನ್ನು ಹೊಂದಿದ್ದಾರೆ, ಆದರೆ ಅವರಿಗಿಂತ ಸುಮಾರು 11 ತಿಂಗಳು ಕಿರಿಯರಾಗಿದ್ದಾರೆ. ಏತನ್ಮಧ್ಯೆ, ಸರ್ಕಾರದಲ್ಲಿ ಆ ಹಿರಿತನದ ಇನ್ನೊಬ್ಬ ಅಧಿಕಾರಿ ಮತ್ತೊಬ್ಬರು ಇಲ್ಲದ ಕಾರಣ ಶಾಲಿನಿ ಅವರು ಉನ್ನತ ಹುದ್ದೆಗೆ ಆಯ್ಕೆಯಾಗುವ ನಿರೀಕ್ಷೆಯಿದೆ.

ಮತ್ತೊಬ್ಬ ಅಧಿಕಾರಿ ಅಜಯ್ ಸೇಠ್‌ಗೆ ಅವಕಾಶವಿದೆ. ಆದರೆ ಅವರು ಈಗಾಗಲೇ 'ಅಧಿಕಾರಶಾಹಿಗಳ ಸ್ವರ್ಗ'ವಾಗಿರುವ ದೆಹಲಿಯಲ್ಲಿ ಅಧಿಕಾರಿಯಾಗಿರುವುದರಿಂದ, ಅವರು ಬೆಂಗಳೂರಿಗೆ ಹಿಂತಿರುಗದೇ ಇರಬಹುದು, ಹಾಗಾಗಿ ಶಾಲಿನಿ ಅವರ ದಾರಿ ಕ್ಲಿಯರ್ ಆಗಿದೆ, ಮತ್ತೊಬ್ಬ ಅಧಿಕಾರಿ ಅತೀಕ್ ಅಹಮದ್ ಅವರಿಗೆ ಸೇವಾ ಹಿರಿತನ ಇಲ್ಲದಿರುವ ಸಾಧ್ಯತೆಯಿದೆ.

ಲೆಕ್ಕಾಚಾರದಲ್ಲಿರುವ ಇನ್ನೊಬ್ಬ ಅಧಿಕಾರಿ ವಿ ಮಂಜುಳಾ, ಆದರೆ ಅವರು ರಜನೀಶ್ ಗೋಯೆಲ್ ಅವರ ಸೇವೆಯಲ್ಲಿ ಜೂನಿಯರ್ ಆಗಿದ್ದಾರೆ. ರಾಕೇಶ್ ಸಿಂಗ್ ಸ್ಪರ್ಧಿಯಾಗಬಹುದು, ಆದರೆ ಅವರು ಮುಂದಿನ ವರ್ಷ ಮೇನಲ್ಲಿ ನಿವೃತ್ತರಾಗುತ್ತಾರೆ. ಆದರೆ ಕೆಲ ನಿಯಮದಂತೆ, ಒಬ್ಬ ಅಧಿಕಾರಿಯು ಮುಖ್ಯಮಂತ್ರಿಯೊಂದಿಗೆ ಉತ್ತಮ ಒಡನಾಟ ಹೊಂದಿದ್ದರೆ ಮುಖ್ಯ ಕಾರ್ಯದರ್ಶಿಯಾಗುವ ಅವಕಾಶವನ್ನು ಪಡೆಯುತ್ತಾರೆ.

ಉನ್ನತ ಹುದ್ದೆಗೆ ಬರಲು ಅವರು 22ನೇ ವಯಸ್ಸಿನಲ್ಲಿ ನಾಗರಿಕ ಪರೀಕ್ಷೆಗಳನ್ನು ಕ್ಲಿಯರ್ ಮಾಡಿರಬೇಕು. ರಜನೀಶ್ ಗೋಯೆಲ್ ಮತ್ತು ಶಾಲಿನಿ ರಜನೀಶ್ ಇಬ್ಬರು ಉತ್ತಮ ಅಧಿಕಾರಿಗಳು ಮತ್ತು ದಂಪತಿಯಾಗಿದ್ದಾರೆ. ಅವರು ಕೆಲಸಕ್ಕೆ ಹೆಚ್ಚು ಮಹತ್ವ ಕೊಡುವ ನಿಜವಾದ ಐಎಎಸ್ ಅಧಿಕಾರಿಗಳ ರೂಪದಲ್ಲಿದ್ದಾರೆ, ಮತ್ತು ನಾನು ಅವರನ್ನು ಗೌರವಿಸುತ್ತೇನೆ ಎಂದು ನಿವೃತ್ತ ಅಧಿಕಾರಿ ಕೆ.ಜೈರಾಜ್ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com