'ಸಕಾಲ' ಯೋಜನೆ ಬಗ್ಗೆ ಆಸಕ್ತಿ ವಹಿಸುವಂತೆ ಸರ್ಕಾರಕ್ಕೆ ಎಸ್.ಸುರೇಶ್ ಕುಮಾರ್ ಒತ್ತಾಯ

ನಾಗರಿಕ ಸೇವೆಗಳನ್ನು ಪರಿಣಾಮಕಾರಿಯಾಗಿ ಕಾಲಮಿತಿಯಲ್ಲಿ ಒದಗಿಸುವ  'ಸಕಾಲ' ಯೋಜನೆ ಬಗ್ಗೆ ಸರ್ಕಾರ ವಿಶೇಷ ಅಸ್ಥೆ ವಹಿಸಬೇಕೆಂದು ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಒತ್ತಾಯಿಸಿದ್ದಾರೆ.
ಎಸ್. ಸುರೇಶ್ ಕುಮಾರ್
ಎಸ್. ಸುರೇಶ್ ಕುಮಾರ್

ಬೆಂಗಳೂರು: ನಾಗರಿಕ ಸೇವೆಗಳನ್ನು ಪರಿಣಾಮಕಾರಿಯಾಗಿ ಕಾಲಮಿತಿಯಲ್ಲಿ ಒದಗಿಸುವ  'ಸಕಾಲ' ಯೋಜನೆ ಬಗ್ಗೆ ಸರ್ಕಾರ ವಿಶೇಷ ಅಸ್ಥೆ ವಹಿಸಬೇಕೆಂದು ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಒತ್ತಾಯಿಸಿದ್ದಾರೆ.

ಈ ಸಂಬಂಧ ಸರ್ಕಾರಕ್ಕೆ ಅವರು ಪತ್ರ ಬರೆದಿದ್ದು, ಇಂದು ನಾಳೆ ಇನ್ನಿಲ್ಲ; ಹೇಳಿದ ಸಮಯ ತಪ್ಪೊಲ್ಲ ಎನ್ನುವ ಉಪ ಶೀರ್ಷಿಕೆಯಲ್ಲಿಯೇ ಯೋಜನೆ ಉದ್ದೇಶ ವ್ಯಕ್ತವಾಗಿದ್ದು, ಕೋಟ್ಯಂತರ ನಾಗರಿಕರು ಇದರ ಪ್ರಯೋಜನ ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇದೇ ಸಕಾಲ ಕಾರ್ಯಕ್ರಮದ ಮತ್ತೊಂದು ಮಹತ್ವದ ಕವಲು ಯೋಜನೆ ''ಜನಸೇವಕ' ಮೂಲಕ ಜನರ ಮನೆ ಬಾಗಿಲಿಗೆ ನಾಗರಿಕ ಸೇವೆಗಳನ್ನು ಕೊಂಡೊಯ್ಯುವ ನಿರೀಕ್ಷೆ ಹೊಂದಿದ್ದು, ಇದರಿಂದಲೂ ಬೆಂಗಳೂರಿನ ಲಕ್ಷಾಂತರ ಹಿರಿಯ ನಾಗರಿಕರು ಪ್ರಯೋಜನ ಪಡೆದಿದ್ದಾರೆ. ಸರ್ಕಾರ ಈ ಎರಡು ಯೋಜನೆಗಳ ಕುರಿತು ವಿಶೇಷ ಗಮನಹರಿಸಬೇಕೆಂದು ಅವರು ಕೋರಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com