ಮಗಳನ್ನು ಡಾಕ್ಟರ್ ಮಾಡುವ ಕನಸು: ಸೀಟು ಕೊಡಿಸುವುದಾಗಿ 16 ಲಕ್ಷ ರು. ದೋಖಾ; ಬೀದರ್ ನ ಬಡಪಾಯಿ ತಂದೆಯ ಅಳಲು

ಮಗಳನ್ನು ಡಾಕ್ಟರ್ ಮಾಡುವ ಕನಸು ಕಟ್ಟಿಕೊಂಡಿದ್ದ ಬಡಪಾಯಿ ತಂದೆಗೆ ಮೂವರು ವಂಚಿಸಿ ಹಣ ಲಪಾಟಿಯಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಗಳಿಗೆ ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿದ ಮೂವರು ಬೀದರ್ ಮೂಲದ ವ್ಯಕ್ತಿಗೆ ವಂಚಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಗಳನ್ನು ಡಾಕ್ಟರ್ ಮಾಡುವ ಕನಸು ಕಟ್ಟಿಕೊಂಡಿದ್ದ ಬಡಪಾಯಿ ತಂದೆಗೆ ಮೂವರು ವಂಚಿಸಿ ಹಣ ಲಪಾಟಿಯಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಗಳಿಗೆ ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿದ ಮೂವರು ಬೀದರ್ ಮೂಲದ ವ್ಯಕ್ತಿಗೆ ವಂಚಿಸಿದ್ದಾರೆ.

ಬೀದರ್ ನಿವಾಸಿ ಮೊಹಮ್ಮದ್ ಅಬ್ದುಲ್ ರಜಾಕ್ 16.23 ಲಕ್ಷ ರೂ ಹಣ ಕಳೆದುಕೊಂಡಿದ್ದು, ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ತಮ್ಮ ಮಗಳು ನೀಟ್ ಪರೀಕ್ಷೆಯಲ್ಲಿ 241 ಅಂಕ ಪಡೆದಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.

ತನ್ನ ಸಂಬಂಧಿಕರೊಬ್ಬರ ಮೂಲಕ  ಸನಾ ಇಸ್ಲಾಂ ಖಾನ್ ಎಂಬುವರ ಪರಿಚಯವಾಗಿದೆ. ಈ ವೇಳೆ ಆಕೆ ವಿಜಯಪುರದ ಅಲ್ ಅಮೀನ್ ವೈದ್ಯಕೀಯ ಕಾಲೇಜಿನಲ್ಲಿ ಮ್ಯಾನೇಜ್‌ಮೆಂಟ್ ಕೋಟಾದಡಿ ಸೀಟು ವ್ಯವಸ್ಥೆ ಮಾಡಬಹುದೆಂದು ಹೇಳಿಕೊಂಡಿದ್ದಾಳೆ, ಆದರೆ ಅದಕ್ಕಾಗಿ 16.23 ಲಕ್ಷ ರೂ. ಹಣ ನೀಡಬೇಕೆಂದು ತಿಳಿಸಿದ್ದಳು.

ಆಕೆಯ ಮಾತು ನಂಬಿದ ರಜಾಕ್ ಆಕೆಗೆ ಮುಂಗಡ ಹಣ ಪಾವತಿಸಿ, ವಸಂತನಗರದ ಅಲ್ ಅಮೀನ್ ಆಸ್ಪತ್ರೆಗೆ ಬಂದು ಆಕೆಯನ್ನು ಭೇಟಿಯಾಗಿದ್ದಾರೆ. ಜೊತೆಗೆ ತನ್ನ ಮಗಳ ವಿದ್ಯಾಭ್ಯಾಸದ ಪ್ರಮಾಣಪತ್ರಗಳನ್ನು ನೀಡಿದ್ದಾರೆ. ಆಸ್ಪತ್ರೆಯಲ್ಲಿ ಸನಾ ಮತ್ತು ಇನ್ನೊಬ್ಬ ಮಹಿಳೆ ಶಬಾನಾ ರನ್ನು ಭೇಟಿ ಮಾತುಕತೆ ನಡೆಸಿಕೊಂಡು ಬಂದಿದ್ದರು. ಅವರಿಬ್ಬರು ತಮ್ಮ ಮಗಳಿಗೆ ಸೀಟು ಸಿಗುತ್ತದೆ ಎಂದು ಭರವಸೆ ನೀಡಿದ್ದರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದಾದ ಕೆಲವು ದಿನಗಳ ನಂತರ ರಜಾಕ್, ಮೊಹಮ್ಮದ್ ಅರ್ಮಾನ್ ಎಂಬುವರ ಖಾತೆಗೆ ಹಣವನ್ನು ವರ್ಗಾಯಿಸಿದ್ದಾರೆ ಎಂದು ಪೊಲೀಸರು ಹೇಳಿದರು. ಹಣಕಾಸು ವಹಿವಾಟು ಜನವರಿ ಮತ್ತು ಮಾರ್ಚ್ ನಡುವೆ ನಡೆದಿದೆ. ಆರೋಪಿಗಳು ರಜಾಕ್ ಫೋನ್ ಕರೆಗಳಿಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದಾಗ ಅನುಮಾನಗೊಂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com