ಬೆಂಗಳೂರಿನಲ್ಲಿ ವಯೋವೃದ್ಧ ಮಹಿಳೆಯರ ಮೇಲೆ ಸೊಸೆಯರಿಂದ ಹೆಚ್ಚು ದೌರ್ಜನ್ಯ: ವರದಿ

ಪ್ರತಿ ವರ್ಷ ಜೂನ್ 15 ರಂದು ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ. ವಯೋವೃದ್ಧರ ಮೇಲಿನ ದೌರ್ಜನ್ಯದ ಬಗ್ಗೆ ಜನರ ಗಮನ ಸೆಳೆಯುವುದು, ಅವರಲ್ಲಿ ಅರಿವು ಮೂಡಿಸುವುದು ಮತ್ತು ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳುವುದು ಈ ದಿನವನ್ನು ಆಚರಿಸುವ ಉದ್ದೇಶವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಪ್ರತಿ ವರ್ಷ ಜೂನ್ 15 ರಂದು ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ. ವಯೋವೃದ್ಧರ ಮೇಲಿನ ದೌರ್ಜನ್ಯದ ಬಗ್ಗೆ ಜನರ ಗಮನ ಸೆಳೆಯುವುದು, ಅವರಲ್ಲಿ ಅರಿವು ಮೂಡಿಸುವುದು ಮತ್ತು ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳುವುದು ಈ ದಿನವನ್ನು ಆಚರಿಸುವ ಉದ್ದೇಶವಾಗಿದೆ.

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ವಯಸ್ಸಾದ ಪೋಷಕರನ್ನು ಸರಿಯಾಗಿ ನಡೆಸಿಕೊಳ್ಳದೇ, ವೃದ್ಧಾಶ್ರಮಕ್ಕೆ ಕಳುಹಿಸುವ ಪ್ರಕ್ರಿಯೆ ಹೆಚ್ಚುತ್ತಿದೆ.

ವಿಶ್ವದ 6 ಹಿರಿಯರಲ್ಲಿ ಒಬ್ಬ ವಯೋವೃದ್ಧರು ನಿಂದನೆಗೊಳಗಾಗುತ್ತಾರೆ. ಇದು ದುರಂತ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ. ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಕಡಿಮೆಯಾಗುವ ಬದಲು ಹೆಚ್ಚಾಗುತ್ತವೆ ಎಂದು ಅಂದಾಜಿಸಲಾಗಿದೆ.

ವೃದ್ಧ ಮಹಿಳೆಯರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಶೇ 16ರಷ್ಟು ವೃದ್ಧ ಮಹಿಳೆಯರು, ಮಕ್ಕಳು ಮತ್ತು ಸೊಸೆಯಂದಿರು ಹಾಗೂ ಸಂಬಂಧಿಕರಿಂದ ನಿಂದನೆಗೆ ಒಳಾಗುತ್ತಿದ್ದಾರೆ ಎಂದು ‘ಹೆಲ್ಪ್‌ಏಜ್‌ ಇಂಡಿಯಾ ಸಂಸ್ಥೆ ವರದಿ ತಿಳಿಸಿದೆ.

60ರಿಂದ 90 ವಯೋಮಾನದ 7,911 ಮಹಿಳೆಯರ ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಸಲಾಗಿದೆ. ಕರ್ನಾಟಕ ಸೇರಿದಂತೆ 20 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸಮೀಕ್ಷೆ ಕೈಗೊಳ್ಳಲಾಗಿದೆ. ಕರ್ನಾಟಕದಲ್ಲಿ ಬೆಂಗಳೂರು ಸೇರಿದಂತೆ 578 ವೃದ್ಧ ಮಹಿಳೆಯರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.

ವೃದ್ಧ ಮಹಿಳೆಯರು ಮಕ್ಕಳಿಂದ ಶೇ 40ರಷ್ಟು ಮತ್ತು ಸೊಸೆಯಿಂದ ಶೇ 27ರಷ್ಟು ಹಾಗೂ ಸಂಬಂಧಿಕರಿಂದ ಶೇ 31ರಷ್ಟು ನಿಂದನೆಗೆ ಒಳಗಾಗುತ್ತಿದ್ದಾರೆ. ಆದರೆ, ಭಯದಿಂದಾಗಿ ಬಹುತೇಕ ಮಹಿಳೆಯರು ಪೊಲೀಸರಿಗೆ ದೂರು ಸಲ್ಲಿಸುತ್ತಿಲ್ಲ ಎಂದು ವರದಿ ತಿಳಿಸಿದೆ.

ಮಹಿಳೆಯರು ವಯಸ್ಸಾದಂತೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ, ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಒದಗಿಸುವ ಮೂಲಕ ಗೌರವದಿಂದ ಕಾಣಬೇಕು. ಸರ್ಕಾರದ ಯೋಜನೆಗಳ ಬಗ್ಗೆಯೂ ಜಾಗೃತಿ ಮೂಡಿಸುವುದು ಅಗತ್ಯವಿದೆ ಎಂದು ವರದಿ ತಿಳಿಸಿದೆ.

ಸರ್ಕಾರದ ಕಲ್ಯಾಣ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲದವರು; ಶೇ 78ರಷ್ಟು  ಸಾಮಾಜಿಕ ತಾರತಮ್ಯಕ್ಕೆ ಒಳಗಾಗುವವರು; ಶೇ 64ರಷ್ಟು ಹಣಕಾಸಿನ ಕೊರತೆ ಎದುರಿಸುತ್ತಿರುವವರು; ಶೇ 53ರಷ್ಟು ಯಾವುದೇ ಆಸ್ತಿಗಳು ಇಲ್ಲದವರು; ಶೇ 66ರಷ್ಟು ಯಾವುದೇ ಉಳಿತಾಯ ಹೊಂದಿಲ್ಲದವರು; ಶೇ 75ರಷ್ಟು ಡಿಜಿಟಲ್‌ ಉಪಕರಣಗಳನ್ನು ಬಳಸಿಯೇ ಇಲ್ಲದವರು; ಶೇ 60ರಷ್ಟು ಸ್ಮಾರ್ಟ್‌ಫೋನ್‌ ಹೊಂದಿಲ್ಲದವರು; ಶೇ 59ರಷ್ಟು ಆರೋಗ್ಯ ವಿಮೆ ಹೊಂದಿಲ್ಲದವರು; ಶೇ 64ರಷ್ಟು ಪೂರ್ಣಾವಧಿ ಅಥವಾ ಅರೆಕಾಲಿಕ ಉದ್ಯೋಗದಲ್ಲಿರುವವರು ಶೇ 33ರಷ್ಟು ವೃದ್ಧ ಮಹಿಳೆಯರ ಸಮಸ್ಯೆಗಳಾಗಿವೆ.

ರಾಷ್ಟ್ರೀಯ ಮಾಹಿತಿಯ ಪ್ರಕಾರ, 81% ವಯಸ್ಸಾದ ಮಹಿಳೆಯರು ತಮ್ಮ ಕುಟುಂಬಗಳೊಂದಿಗೆ ವಾಸಿಸುತ್ತಿದ್ದಾರೆ, ಇದು ಉತ್ತಮ ಸಂಕೇತವಾಗಿದೆ. ದೌರ್ಜನ್ಯಕ್ಕೊಳಗಾದ ಮಹಿಳೆಯರಲ್ಲಿ, ಕೇವಲ 16% ರಷ್ಟು ಮಾತ್ರ ಅದನ್ನು ವರದಿ ಮಾಡಿದ್ದಾರೆ ಮತ್ತು 43% ರಷ್ಟು ದೈಹಿಕವಾಗಿ ಹಾನಿಯಾಗುವ ಭಯವಿದೆ ಎಂದು ತಿಳಿಸಿದ್ದಾರೆ.

ವಯಸ್ಸಾದ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ನಾವು ಜನರಲ್ಲಿ ಜಾಗೃತಿ ಮೂಡಿಸಬೇಕು ಮತ್ತು ಅವರ ಜೀವನದ ಗುಣಮಟ್ಟವನ್ನು ಸುಧಾರಿಸಲು ವೃದ್ಧ-ಸ್ನೇಹಿ ಕೆಲಸದ ವಾತಾವರಣವನ್ನು ಉತ್ತೇಜಿಸಬೇಕು. ಇದರಿಂದ ಅವರೂ ಗೌರವಯುತವಾಗಿ ಬದುಕಬಹುದು  ಎಂದು ಹೆಲ್ಪ್‌ಏಜ್ ಇಂಡಿಯಾದ ಸಲಹಾ ಮಂಡಳಿಯಲ್ಲಿರುವ ಮನೋವಿಜ್ಞಾನದ ಮಾಜಿ ಪ್ರೊಫೆಸರ್ ಮತ್ತು ಜೆರೊಂಟಾಲಜಿಸ್ಟ್ ಡಾ ಇಂದಿರಾ ಜೈ ಪ್ರಕಾಶ್  ಅಭಿಪ್ರಾಯ ಪಟ್ಟಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಮಂಜುಳಾ ಮಾತನಾಡಿ, ವಯೋವೃದ್ಧ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕಡಿಮೆ ಮಾಡಲು ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಲು ವರದಿ ಸಹಕಾರಿಯಾಗಲಿದೆ.  ವೃದ್ಧ ಮಹಿಳೆಯರಿಗೆ ಸರ್ಕಾರದ ಕಲ್ಯಾಣ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಗಳನ್ನು ಸರಳಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com