ಮಹಿಳೆಯರ "ಶಕ್ತಿ"ಗೆ ಮುರಿದುಬಿತ್ತು ಕೆಎಸ್ ಆರ್ ಟಿಸಿ ಬಸ್ ನ ಬಾಗಿಲು!

ಒಂದು ಪ್ರಕರಣದಲ್ಲಿ ಮಹಿಳೆಯರು ಉಚಿತ ಬಸ್ ಪ್ರಯಾಣಕ್ಕೆ ಅತಿ ಹೆಚ್ಚು ಸಂಖ್ಯೆಯಲ್ಲಿ ಧಾವಿಸಿ ಕೆಎಸ್ ಆರ್ ಟಿಸಿ ಬಸ್ ನ ಬಾಗಿಲು ಮುರಿದುಬಿದ್ದಿದೆ.
ಮುರಿದ ಬಸ್ ಬಾಗಿಲು
ಮುರಿದ ಬಸ್ ಬಾಗಿಲು
Updated on

ಕೊಳ್ಳೆಗಾಲ: ಮಹಿಳೆಯರಿಗೆ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡುವ ಶಕ್ತಿ ಯೋಜನೆ ಜಾರಿಗೆ ಬಂದು ಒಂದು ವಾರ ಕಳೆದಿದ್ದು, ಮಹಿಳೆಯರ ಸಂಖ್ಯೆ ಏರಿಕೆಯಾಗಿದ್ದರ ಪರಿಣಾಮ ನಿರ್ವಾಹಕರು ಉಳಿದವರಿಗೆ ಟಿಕೆಟ್ ನೀಡಲಿಕ್ಕೂ ಪರದಾಡಬೇಕಾದಂಥ ಘಟನೆಗಳೂ ವರದಿಯಾಗಿದೆ.
 
ಕೆಲವೆಡೆ ಸಂಭಾವ್ಯ ಅನಾಹುತಗಳು ತಪ್ಪಿವೆ. ಇಂಥದ್ದೇ ಒಂದು ಪ್ರಕರಣದಲ್ಲಿ ಮಹಿಳೆಯರು ಉಚಿತ ಬಸ್ ಪ್ರಯಾಣಕ್ಕೆ ಅತಿ ಹೆಚ್ಚು ಸಂಖ್ಯೆಯಲ್ಲಿ ಧಾವಿಸಿ ಕೆಎಸ್ ಆರ್ ಟಿಸಿ ಬಸ್ ನ ಬಾಗಿಲು ಮುರಿದುಬಿದ್ದಿದೆ.

ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ಈ ಘಟನೆ ವರದಿಯಾಗಿದೆ. ನಾಳೆ ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಮಹಿಳೆಯರು ತೋರಿದ ಶಕ್ತಿಗೆ ಬಸ್​ವೊಂದರ ಬಾಗಿಲು ಕಳಚಿ ಹೋಗಿದೆ. ಕೆಎಸ್ ಆರ್ ಟಿಸಿ ಬಸ್ ನ ಬಾಗಿಲು ಮುರಿದು ಅದನ್ನು ನಿರ್ವಾಹಕ ಕೈಲಿ ಹಿಡಿದಿರುವ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಪ್ರತಿದಿನ ಲಕ್ಷಾಂತರ ಮಹಿಳೆಯರು ಅಗತ್ಯ ದಾಖಲೆಗಳನ್ನ ತೋರಿಸಿ ಉಚಿತ ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದಾರೆ. ಈ ನಡುವೆ ಟಿಕೆಟ್ ಕಲೆಕ್ಷನ್ ಆಗಿಲ್ಲ ಎಂದು ಬೇಸತ್ತ ಚಾಲಕನೊಬನ್ಬ ಮಹಿಳೆಯರ ಮೇಲೆಯೇ ಬಸ್ ಹತ್ತಿಸಲು ಮುಂದಾಗಿದ್ದ ಪ್ರಸಂಗವೊಂದು ತುಮಕೂರು ಜಿಲ್ಲೆಯ ಕೊರಟಗೆರೆಯ ನಾಗೇನಹಳ್ಳಿ ಗೇಟ್ ಬಳಿ ನಡೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com