ಗೃಹ ಜ್ಯೋತಿ
ಗೃಹ ಜ್ಯೋತಿ

'ಗೃಹಜ್ಯೋತಿ' ಯೋಜನೆಗೆ ನೋಂದಣಿ: ಇಂದಿನಿಂದ ಅರ್ಜಿ ಸಲ್ಲಿಕೆ; ಗ್ರಾಹಕರ ಗೊಂದಲಕ್ಕೆ ಸರ್ಕಾರದ ಸ್ಪಷ್ಟೀಕರಣ ಏನು?

ಕಾಂಗ್ರೆಸ್ ಸರ್ಕಾರದ  ಮಹತ್ವಾಕಾಂಕ್ಷೆಯ ಗೃಹ ಜ್ಯೋತಿ ಯೋಜನೆಗೆ ಗ್ರಾಹಕರಿಂದ ಅರ್ಜಿ ಸ್ವೀಕಾರ ಇಂದು ಆರಂಭವಾಗಿದೆ. 
Published on

ಬೆಂಗಳೂರು: ಕಾಂಗ್ರೆಸ್ ಸರ್ಕಾರದ  ಮಹತ್ವಾಕಾಂಕ್ಷೆಯ ಗೃಹ ಜ್ಯೋತಿ ಯೋಜನೆಗೆ ಗ್ರಾಹಕರಿಂದ ಅರ್ಜಿ ಸ್ವೀಕಾರ ಇಂದು ಆರಂಭವಾಗಿದೆ.

ಗೃಹ ಜ್ಯೋತಿ(Gruha Jyothi)ಯೋಜನೆಗೆ ಅರ್ಜಿ ಸಲ್ಲಿಕೆ ಹಿನ್ನಲೆ ಇಂದು ಭಾನುವಾರ ಜೂನ್ 18ರಂದು ಕೂಡ ಬೆಸ್ಕಾಂ ಕಚೇರಿ ಹಾಗೂ ನಾಡ ಕಚೇರಿಗಳಲ್ಲಿ ಕಾರ್ಯನಿರ್ವಹಿಸಲು ಸರ್ಕಾರ ಸೂಚನೆ ನೀಡಿದೆ. ಇಂದು ಬೆಳಿಗ್ಗೆ 11 ಗಂಟೆಯಿಂದ ಅರ್ಜಿ ಸಲ್ಲಿಸಲು ಸೂಚನೆ ನೀಡಲಾಗಿದೆ. 

ಅರ್ಜಿ ಸಲ್ಲಿಕೆ ಹೇಗೆ?: ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಸೇವಾ ಸಿಂಧು ವೆಬ್‌ಸೈಟ್‌ ಬಳಸಿ ಮೊಬೈಲ್, ಕಂಪ್ಯೂಟರ್, ಲ್ಯಾಪ್​ಟಾಪ್​ನಲ್ಲೂ ಅರ್ಜಿ ಸಲ್ಲಿಸಬಹುದು. ಅಷ್ಟೇ ಅಲ್ಲ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ನಾಡ ಕಚೇರಿ, ಗ್ರಾ.ಪಂಚಾಯ್ತಿ ಕಚೇರಿ, ವಿದ್ಯುತ್​ ಕಚೇರಿಯಲ್ಲೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. 

ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಆರ್​ಆರ್ ನಂಬರ್, ಮೊಬೈಲ್ ಸಂಖ್ಯೆ ಅವಶ್ಯಕತೆ ಇದೆ. ಇನ್ನು ಬಾಡಿಗೆದಾರರಾಗಿದ್ದರೆ, ಮನೆ ಬಾಡಿಗೆ ಕರಾರು ಪತ್ರ ನೀಡಿ ಅರ್ಜಿ ಸಲ್ಲಿಸಬಹುದು. ಸಮಸ್ಯೆ ಇದ್ದರೆ ಹೆಚ್ಚಿನ ಮಾಹಿತಿಗಾಗಿ 1912 ಸಹಾಯವಾಣಿ ಸಂಖ್ಯೆಗೆ ಕಾಲ್‌ ಮಾಡಿ ಮಾಹಿತಿ ಪಡೆಯಬಹುದು.

ಗೊಂದಲಕ್ಕೆ ತೆರೆ: ಅಪಾರ್ಮೆಂಟ್ ನಿವಾಸಿಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಸೌಲಭ್ಯ ಸಿಗುತ್ತದೆಯೋ ಇಲ್ಲವೋ ಎಂಬ ಗೊಂದಲವಿತ್ತು. ಅಲ್ಲದೇ ಇನ್ನೂ ಅನೇಕ ಗೊಂದಲಗಳು ವಿದ್ಯುತ್ ಬಳಕೆ ಗ್ರಾಹಕರಲ್ಲಿ ಇದ್ದವು. ಆ ಗೊಂದಲಗಳಿಗೆ ರಾಜ್ಯ ಸರ್ಕಾರ ಸ್ಪಷ್ಠೀಕರಣ ನೀಡಿದೆ. 

ಈ ಕುರಿತಂತೆ ಸ್ಪಷ್ಠೀಕರಣದ ನಡವಳಿಗಳನ್ನು ರಾಜ್ಯ ಸರ್ಕಾರ  ಹೊರಡಿಸಿದೆ. ಗೃಹ ಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ ಉಚಿತ ವಿದ್ಯುತ್ ಸೌಕರ್ಯ ಒದಗಿಸುವ ಸಂಬಂಧ ವಿದ್ಯುತ್ ಸರಬರಾಜು ಕಂಪನಿಗಳು ಕೋರಿರುವ ಅಂಶಗಳಿಗೆ ಸ್ಪಷ್ಟೀಕರಣ ನೀಡಿದೆ.

ಸರ್ಕಾರದ ಸ್ಪಷ್ಟೀಕರಣ: Multi Stored Apartment ಗಳಿಗೆ ಈ ಯೋಜನೆ ಅನ್ವಯಿಸುತ್ತದೆಯೆ ಎನ್ನುವಂತಹ ಅಂಶಗಳಿಗೆ ಸರ್ಕಾರವು ಯಾವ ಮನೆಗಳಿಗೆ ಪ್ರತ್ಯೇಕ ಮೀಟರ್ ಇದೆಯೋ ಹಾಗೂ ಮೀಟರ್ ರೀಡಿಂಗ್ ಮಾಡಲಾಗುತ್ತಿದೆಯೋ ಅಂತಹ ಎಲ್ಲಾ ಮನೆಗಳಿಗೆ ಈ ಯೋಜನೆ ಅನ್ವಯಿಸುತ್ತದೆ ಎಂದಿದೆ.

ಸರ್ಕಾರದ ಆದೇಶದ ನಂತರ ಹೊಸದಾಗಿ ಗೃಹಬಳಕೆಗಾಗಿ ವಿದ್ಯುತ್ ಸಂಪರ್ಕ ಪಡೆದ ಗ್ರಾಹಕರಿಗೆ, ಬಳಕೆದಾರರಿಗೆ ಗೃಹ ಜ್ಯೋತಿ ಯೋಜನೆ ಅನ್ವಯಿಸಲಿದೆ ಎಂಬ ಪ್ರಶ್ನೆ ಸರ್ಕಾರ ಉತ್ತರಿಸಿದೆ. ಹೊಸ ಸಂಪರ್ಕ ಪಡೆದ ಗ್ರಾಹಕರಿಗೆ ಬಳಕೆ ಎಷ್ಟು ಮಾಡಲಾಗಿದೆ ಎಂದು ಗೊತ್ತಿಲ್ಲದಿರುವುದರಿಂದ ಗೃಹ ಬಳಕೆದಾರರ ಸರಾಸರಿ ಬಳಕೆಯು ಮಾಸಿಕ 53 ಯೂನಿಟ್ ಗಳಾಗಿರುವುದರಿಂದ 53 ಯೂನಿಟ್ ಗಳನ್ನೆ ನಿರ್ಧರಿಸಿ, ಈ ಯೋಜನೆಯ ಸೌಲಭ್ಯವನ್ನು ವಿಸ್ತರಿಸುವಂತೆ ಸೂಚಿಸಿದೆ.

ಈ ಯೋಜನೆಯು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ವಿದ್ಯುತ್ ಬಳಕೆದಾರರಿಗೂ ಅನ್ವಯಿಸುವುದೇ ಎನ್ನುವಂತ ಪ್ರಶ್ನೆಗೂ ಉತ್ತರಿಸಿದ್ದು, ಗೃಹ ವಿದ್ಯುತ್ ಬಳಕೆದಾರರು ಬಾಡಿಗೆದಾರರಾಗಿದ್ದಲ್ಲಿ, ವಾಸದ ಮನೆಯ ವಿಳಾಸಕ್ಕೆ ಸಂಬಂಧಿಸಿದಂತೆ ಆಧಾರ್ ಸಂಖ್ಯೆಯನ್ನು ಸೇವಾ ಸಿಂಧು ಪೋರ್ಟಲ್ ನಲ್ಲಿ ಜೋಡಣೆ ಮಾಡಿ, ನೋಂದಾಯಿಸುವ ಮೂಲಕ ಸೌಲಭ್ಯವನ್ನು ಪಡೆಯುವಂತೆ ತಿಳಿಸಿದೆ.

.

ಗೃಹ ಬಳಕೆದಾರರು, ಫಲಾನುಭವಿಗಳು ಯಾವುದಾದರೂ ತಿಂಗಳಲ್ಲಿ ಮಾತ್ರ 200 ಯೂನಿಟ್ ಮಿತಿ ದಾಟಿದರೂ, ಸದರಿ ಯೋಜನೆಯಲ್ಲಿ ಮುಂದುವರೆಯುವರೆ ಎಂಬುದಕ್ಕೆ ಸರ್ಕಾರ ಸ್ಪಷ್ಟೀಕರಣ ನೀಡಿದ್ದು, 200 ಯೂನಿಟ್ ಗಳ ಬಳಕೆಯ ಮಿತಿಯನ್ನು ಯಾವುದಾದರೂ ತಿಂಗಳಲ್ಲಿ ಮೀರಿದಲ್ಲಿ, ಆ ತಿಂಗಳ ಪೂರ್ಣ ವಿದ್ಯುತ್ ಬಿಲ್ಲನ್ನು ಪಾವತಿಸಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com