ಜಗತ್ತಿನ ಅತಿ ದೊಡ್ಡ ಭೂ ಮ್ಯಾಪಿಂಗ್ ಯೋಜನೆಗೆ ಬೆಂಗಳೂರಿನ ಡ್ರೋನ್ ತಂತ್ರಜ್ಞಾನ ಸ್ಟಾರ್ಟ್ ಅಪ್ ನೆರವು

ಬೆಂಗಳೂರು ಮೂಲದ ಡ್ರೋನ್ ತಂತ್ರಜ್ಞಾನ  ಸ್ಟಾರ್ಟ್ ಅಪ್, ಭೂ ನಕ್ಷೆಯ ಜಗತ್ತಿನ ಅತಿ ದೊಡ್ಡ ಯೋಜನೆಯ ಭಾಗವಾಗಿರಲಿದೆ. 
ಡ್ರೋನ್ ತಂತ್ರಜ್ಞಾನ
ಡ್ರೋನ್ ತಂತ್ರಜ್ಞಾನ
Updated on

ಬೆಂಗಳೂರು: ಬೆಂಗಳೂರು ಮೂಲದ ಡ್ರೋನ್ ತಂತ್ರಜ್ಞಾನ  ಸ್ಟಾರ್ಟ್ ಅಪ್, ಭೂ ನಕ್ಷೆಯ ಜಗತ್ತಿನ ಅತಿ ದೊಡ್ಡ ಯೋಜನೆಯ ಭಾಗವಾಗಿರಲಿದೆ. 
 
ಈ ಹಿಂದೆ ಆರವ್ ಅನ್ ಮ್ಯಾನ್ಡ್ ಸಿಸ್ಟಮ್ಸ್ ಎಂಬ ಸಂಸ್ಥೆಯಾಗಿದ್ದ ಏರಿಯೊ, ಈ ಯೋಜನೆಯ ಭಾಗವಾಗಿರಲಿದೆ. ಕರ್ನಾಟಕ ರಾಜ್ಯ ಸರ್ಕಾರದ ಮುಕ್ತ ಟೆಂಡರ್ ಪ್ರಕ್ರಿಯೆಯಲ್ಲಿ Allterra ಮತ್ತು NeoGeo, ಎರಡು ಜಿಯೋಸ್ಪೇಷಿಯಲ್ ಸಂಸ್ಥೆಗಳು ಲ್ಯಾಂಡ್ ಪಾರ್ಸೆಲ್ ಮ್ಯಾಪಿಂಗ್ ಗುತ್ತಿಗೆಯನ್ನು ಪಡೆದಿವೆ.

"ಇದು ಭಾರತ ಹಾಗೂ ಡ್ರೋನ್ ಕ್ಷೇತ್ರಕ್ಕೇ ಮಹತ್ವದ ಯೋಜನೆಯಾಗಿದೆ.  ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಭೂ ದಾಖಲೆಗಳ ಡಿಜಿಟಲೀಕರಣವನ್ನು ತ್ವರಿತವಾಗಿ ಮಾಡಲು ದೊಡ್ಡ ಪ್ರಮಾಣದ ಮ್ಯಾಪಿಂಗ್ ತುರ್ತು ಅಗತ್ಯವಾಗಿದೆ. ನಮ್ಮ ಡ್ರೋನ್ ವ್ಯವಸ್ಥೆಗಳ ಮೂಲಕ  ನಮ್ಮ ಪಾಲುದಾರರಿಗೆ ಅಪಾರ ಮೌಲ್ಯವನ್ನು ತಲುಪಿಸುವ ಗುರಿಯನ್ನು ನಾವು ಹೊಂದಿದ್ದೇವೆ ಮತ್ತು ಬಹು-ವಲಯ ಅಪ್ಲಿಕೇಶನ್‌ಗಳನ್ನು ಹೊಂದಿರುವ ಅಲ್ಟ್ರಾ-ಹೈ ರೆಸಲ್ಯೂಶನ್ ಡಿಜಿಟಲ್ ಸಮೀಕ್ಷೆ ನಕ್ಷೆಗಳನ್ನು ರಚಿಸಲು ರಾಜ್ಯ ಸರ್ಕಾರಕ್ಕೆ ನೆರವಾಗುವ ಗುರಿಯನ್ನು ಹೊಂದಿದ್ದೇವೆ ಎಂದು ಏರಿಯೊದ ಸಹ-ಸಂಸ್ಥಾಪಕ ಮತ್ತು ಸಿಇಒ ವಿಪಾಲ್ ಸಿಂಗ್ ಹೇಳಿದ್ದಾರೆ.

ಎರಡು ಸಂಸ್ಥೆಗಳು ಕರ್ನಾಟಕದ ಹತ್ತು ಜಿಲ್ಲೆಗಳನ್ನು ಒಳಗೊಂಡಿರುವ 86,000 ಚದರ ಕಿಮೀಗಳನ್ನು ಮ್ಯಾಪಿಂಗ್ ಮಾಡಲು ಏರಿಯೊದ ಸಹಾಯವನ್ನು ಪಡೆದಿವೆ.

ಗದಗ, ಕೊಪ್ಪಳ, ಚಾಮರಾಜನಗರ, ಚಿಕ್ಕಮಗಳೂರು, ವಿಜಯಪುರ, ಯಾದಗಿರಿ, ರಾಯಚೂರು, ಬೀದರ್, ಕಲಬುರಗಿ ಗಳಲ್ಲಿ ಮ್ಯಾಪಿಂಗ್ ಆಗಲಿದೆ. ಡ್ರೋನ್ ಕಂಪನಿ 60 ಸರ್ವೇ-ಗ್ರೇಡ್ ಪೋಸ್ಟ್-ಪ್ರೊಸೆಸ್ಡ್ ಕಿನೆಮ್ಯಾಟಿಕ್ (ಪಿಪಿಕೆ) ಡ್ರೋನ್‌ಗಳನ್ನು ನಿಯೋಜಿಸುತ್ತದೆ. ಇದು ದಿನಕ್ಕೆ ಸರಾಸರಿ 1.75 ಲಕ್ಷ ಎಕರೆ ಪ್ರದೇಶವನ್ನು ಮ್ಯಾಪಿಂಗ್ ಮಾಡುತ್ತದೆ. 2023 ರಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು 2024 ರ ಮಾರ್ಚ್ ನಲ್ಲಿ ಯೋಜನೆ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ. ಜಗತ್ತಿನಲ್ಲೇ ಇದು ಅತಿ ದೊಡ್ಡ ಮ್ಯಾಪಿಂಗ್ ಯೋಜನೆಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com