ರಾಹುಲ್ ಕರಾಚಿ-ಲಾಹೋರ್‌ಗೆ ಹೋಗಬಹುದೆಂದು ಭಾವಿಸಿದ್ದೆ: ಭಾರತ್ ಜೋಡೋ ಯಾತ್ರೆಗೆ ರಾಜನಾಥ್ ಸಿಂಗ್ ಟಾಂಗ್

ಭಾರತೀಯ ಸೇನೆಯ ಶೌರ್ಯದ ಬಗ್ಗೆ ಕಾಂಗ್ರೆಸ್ ಪ್ರಶ್ನೆಗಳನ್ನು ಎತ್ತುತ್ತಿದೆ ಎಂದು ಆರೋಪಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, 'ಭಾರತ್ ಜೋಡೋ ಯಾತ್ರೆ' ಭಾಗವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲಾಹೋರ್ ಅಥವಾ ಕರಾಚಿಗೆ ಹೋಗಬಹುದು...
ವಿಜಯ ಸಂಕಲ್ಪ ಯಾತ್ರೆ
ವಿಜಯ ಸಂಕಲ್ಪ ಯಾತ್ರೆ
Updated on

ನಂದಗಡ: ಭಾರತೀಯ ಸೇನೆಯ ಶೌರ್ಯದ ಬಗ್ಗೆ ಕಾಂಗ್ರೆಸ್ ಪ್ರಶ್ನೆಗಳನ್ನು ಎತ್ತುತ್ತಿದೆ ಎಂದು ಆರೋಪಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, 'ಭಾರತ್ ಜೋಡೋ ಯಾತ್ರೆ' ಭಾಗವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲಾಹೋರ್ ಅಥವಾ ಕರಾಚಿಗೆ ಹೋಗಬಹುದು ಎಂದುಕೊಂಡಿದ್ದೆ ಎಂದು ರಾಜನಾಥ್ ಸಿಂಗ್ ಲೇವಡಿ ಮಾಡಿದ್ದಾರೆ. 

ಕರ್ನಾಟಕದಲ್ಲಿ ಬಿಜೆಪಿಯ 'ವಿಜಯ ಸಂಕಲ್ಪ ಯಾತ್ರೆ'ಯ ಎರಡನೇ ಭಾಗಕ್ಕೆ ಚಾಲನೆ ನೀಡಿದ ಅವರು, ಮೇ ತಿಂಗಳೊಳಗೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಸರ್ಕಾರ ರಚಿಸಲು ಪಕ್ಷವನ್ನು ಬೆಂಬಲಿಸುವಂತೆ ಜನರಿಗೆ ಮನವಿ ಮಾಡಿದರು.

'ಯುವ ಕಾಂಗ್ರೆಸ್ ನಾಯಕನ ಬಗ್ಗೆ ನಿಮಗೆ ತಿಳಿದಿದೆಯೇ, ರಾಹುಲ್ ಗಾಂಧಿಯನ್ನು ವೈಭವೀಕರಿಸುವ ಸಲುವಾಗಿ ಭಾರತ್ ಜೋಡೋ ಯಾತ್ರೆಯನ್ನು ಮಾಡಲಾಗಿದೆ. 1947ರಲ್ಲಿ ವಿಭಜನೆಯ ಸಮಯದಲ್ಲಿ ಭಾರತ-ಪಾಕ್ ವಿಭಜನೆಯಾಯಿತು. ಹಾಗಾಗಿ ಭಾರತ್ ಜೋಡೋ ಯಾತ್ರೆಯಲ್ಲಿದ್ದ ರಾಹುಲ್ ಗಾಂಧಿ ಕರಾಚಿಗೋ ಅಥವಾ ಲಾಹೋರ್ ಗೋ ಹೋಗಬಹುದು ಎಂದುಕೊಂಡಿದ್ದೆ ಆದರೆ ಅವರು ಅಲ್ಲಿಗೆ ಹೋಗಲಿಲ್ಲ ಎಂದು ಸಿಂಗ್ ಕುಹುಕವಾಡಿದರು.

ಇಡೀ ಭಾರತವು ಒಗ್ಗೂಡಿರುವಾಗ ಗಾಂಧಿ ಯಾರನ್ನು ಒಗ್ಗೂಡಿಸಲು ಪ್ರಯತ್ನಿಸಿದರು ಎಂದು ಪ್ರಶ್ನಿಸಿದರು. ಜನರನ್ನು ಮೂರ್ಖರನ್ನಾಗಿಸಿ ಹೆಚ್ಚು ಕಾಲ ರಾಜಕೀಯ ಮಾಡಲು ಸಾಧ್ಯವಿಲ್ಲ. ವಿಶ್ವಾಸದಿಂದ ರಾಜಕಾರಣ ಮಾಡುವವರು ಮತ್ತು ಜನರೊಂದಿಗೆ ಸಂಪರ್ಕ ಇಟ್ಟುಕೊಂಡವರು ಮಾತ್ರ ಯಶಸ್ವಿಯಾಗಲು ಸಾಧ್ಯ. ಬಿಜೆಪಿಯಲ್ಲಿರುವವರು ಮಾತ್ರ ಅದನ್ನು ಮಾಡಲು ಸಾಧ್ಯ ಎಂದು ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ ಕಾಂಗ್ರೆಸ್ಸಿಗರು ಮೋದಿ ನಿಮ್ಮ ಸಮಾಧಿಯನ್ನು ಅಗೆಯಲಾಗುವುದು ಎಂಬ ಘೋಷಣೆಗಳನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ಸಿಗರು ಮೋದಿಯವರ ಸಮಾಧಿಯನ್ನು ಅಗೆಯುತ್ತಿಲ್ಲ, ಅಂತಹ ಘೋಷಣೆಗಳ ಮೂಲಕ ತಮ್ಮದೇ ಹಳ್ಳ ತೊಡಿಕೊಳ್ಳುತ್ತಿದ್ದಾರೆ. ನಮ್ಮ ಕಾಂಗ್ರೆಸ್ ಸ್ನೇಹಿತರು ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ಎಷ್ಟು ಕೆಸರೆರಚಾಟದಲ್ಲಿ ತೊಡಗುತ್ತಾರೋ ನಮ್ಮ ಕಮಲವು ಅಷ್ಟೊಂದು ವಿಜೃಂಭಿಸುತ್ತದೆ ಎಂದು ಸಿಂಗ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com