ಚುನಾವಣೆಯಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಬಿಜೆಪಿಗೆ ಲಾಭ ತರುವ ಸಾಧ್ಯತೆ ಕಡಿಮೆ

ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಚುನಾವಣೆಯಲ್ಲಿ ಹೆಚ್ಚು ಸುದ್ದಿಯಲ್ಲಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಿಂದ ಆಡಳಿತರೂಢ ಬಿಜೆಪಿಗೆ ಲಾಭವಾಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ

ರಾಮನಗರ: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಚುನಾವಣೆಯಲ್ಲಿ ಹೆಚ್ಚು ಸುದ್ದಿಯಲ್ಲಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಿಂದ ಆಡಳಿತರೂಢ ಬಿಜೆಪಿಗೆ ಲಾಭವಾಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ರಾಮನಗರದ ಅಬ್ಬನಕುಪ್ಪೆ ಗ್ರಾಮದ 63 ವರ್ಷದ ಲಕ್ಷ್ಮಮ್ಮ ಅವರು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಿಂದ ಕೇವಲ 7 ಕಿ.ಮೀ ದೂರದಲ್ಲಿ ವಾಸಿಸುತಿದ್ದರೂ ಅವರು ಇದುವರೆಗೂ ಅದನ್ನು ನೋಡಿಲ್ಲ. ಬಿಡದಿ ಹತ್ತಿರದ ಕಾರ್ಖಾನೆಯೊಂದಕ್ಕೆ ಫ್ಯಾಬ್ರಿಕ್ ಟೇಪ್ ರೋಲ್ ಮಾಡಿ ದಿನಕ್ಕೆ 100 ರೂ. ಸಂಪಾದಿಸುತ್ತಾರೆ. "ನಮಗೆ ಬೇಕಾಗಿರುವುದು ನಮ್ಮ ಶಾಸಕರು ಒದಗಿಸಿದ ಕುಡಿಯುವ ನೀರು ಮತ್ತು ನಮಗೆ ಎಂದಿಗೂ ಎಕ್ಸ್‌ಪ್ರೆಸ್‌ವೇ ಬೇಕಾಗಿರಲಿಲ್ಲ" ಎಂದು ಹೇಳಿದ್ದಾರೆ.

ಜೆಡಿಎಸ್ ಶಾಸಕ ಎ ಮಂಜುನಾಥ್ ಪ್ರತಿನಿಧಿಸುವ ರಾಮನಗರ ಜಿಲ್ಲೆಯ ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ ಅಬ್ಬನಕುಪ್ಪೆ ಬರುತ್ತದೆ. ಲಕ್ಷ್ಮಮ್ಮ ಅವರ ನೆರೆಹೊರೆಯವರಾದ ಬೈರವ ಅವರು ಎಕ್ಸ್‌ಪ್ರೆಸ್‌ವೇ ಉತ್ತಮವಾಗಿದೆ, ಆದರೆ ಅದರಿಂದ ನಮಗೆ ಯಾವುದೇ ರೀತಿಯ ಸಹಾಯವಾಗುವುತ್ತಿಲ್ಲ. ಆ ರಸ್ತೆ ಮಾಡಿ ಅಂತ ಕೇಳಿಲ್ಲ. ಮೂಲ ಸೌಕರ್ಯಗಳನ್ನು ನಮ್ಮ ಶಾಸಕರೇ ನೋಡಿಕೊಳ್ಳುತ್ತಾರೆ. ನಾವು ಕರೆದರೆ(ಪ್ರಧಾನಿ ನರೇಂದ್ರ ಮೋದಿ) ಮೋದಿ ಅಥವಾ (ಮೈಸೂರು ಸಂಸದ) ಪ್ರತಾಪ್ ಸಿಂಹ ಬರುವುದಿಲ್ಲ ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಕ್ಸ್‌ಪ್ರೆಸ್‌ವೇ ವ್ಯಾಪಕವಾಗಿ ಮೆಚ್ಚುಗೆ ಪಡೆದಿದೆ, ಆದರೆ ಸ್ಥಳೀಯರಿಂದ ಅಲ್ಲ. ರಾಮನಗರ ಮತ್ತು ಮಂಡ್ಯ ಜಿಲ್ಲೆಗಳ ನೂರಾರು ಹಳ್ಳಿಗಳ ಜನರು ಎಕ್ಸ್‌ಪ್ರೆಸ್‌ವೇ ಪಕ್ಕದಲ್ಲಿ ನೆಲೆಸಿದ್ದರೂ ತಮಗೆ ಅದರಿಂದ ಅನಾನುಕೂಲವೇ ಹೆಚ್ಚಾಗಿದೆ ಎಂದು ಹೇಳುತ್ತಾರೆ. ಈ ಎಕ್ಸ್‌ಪ್ರೆಸ್‌ವೇ ಬಿಜೆಪಿಗೆ ಅಸೆಂಬ್ಲಿ ಚುನಾವಣೆಯಲ್ಲಿ ಸಹಾಯ ಮಾಡುವ ಸಾಧ್ಯತೆ ಕಡಿಮೆ.ಈ ಯೋಜನೆಯಿಂದ ಚುನಾವಣೆಯಲ್ಲಿ ಲಾಭ ಪಡೆಯಲು ಬಿಜೆಪಿ ತರಾತುರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟಿಸಿದೆ.

ರಾಮನಗರದಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿದ್ದು, ಮೂರು ಕ್ಷೇತ್ರಗಳನ್ನು ಜೆಡಿಎಸ್ ಮತ್ತು ಕನಕಪುರವನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿನಿಧಿಸುತ್ತಿದ್ದಾರೆ. ಈ ಚುನಾವಣೆಯಲ್ಲೂ ಅದೇ ಪ್ರವೃತ್ತಿ ಮುಂದುವರೆಯುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com