ಕೊಡಗು: ಪಕ್ಷದ ಅಭ್ಯರ್ಥಿಗೆ ವಿರೋಧ, ಕಾಂಗ್ರೆಸ್ ತೊರೆದ ಜೀವಿಜಯ

ಮಡಿಕೇರಿ ಕಾಂಗ್ರೆಸ್ ಅಭ್ಯರ್ಥಿಗೆ ವಿರೋಧ ವ್ಯಕ್ತಪಡಿಸಿ ಹಿರಿಯ ಕಾಂಗ್ರೆಸ್ ನಾಯಕ ಬಿಎ ಜೀವಿಜಯ ಪಕ್ಷ ತೊರೆದ್ದಾರೆ.
ಕಾಂಗ್ರೆಸ್ ತೊರೆದ ಜೀವಿಜಯ (ಸಂಗ್ರಹ ಚಿತ್ರ)
ಕಾಂಗ್ರೆಸ್ ತೊರೆದ ಜೀವಿಜಯ (ಸಂಗ್ರಹ ಚಿತ್ರ)

ಕೊಡಗು: ಮಡಿಕೇರಿ ಕಾಂಗ್ರೆಸ್ ಅಭ್ಯರ್ಥಿಗೆ ವಿರೋಧ ವ್ಯಕ್ತಪಡಿಸಿ ಹಿರಿಯ ಕಾಂಗ್ರೆಸ್ ನಾಯಕ ಬಿಎ ಜೀವಿಜಯ ಪಕ್ಷ ತೊರೆದ್ದಾರೆ. ಜೀವಿಜಯ ಮತ್ತೊಂದು ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವ ಬಗ್ಗೆ ಸುಳಿವು ನೀಡಿದ್ದಾರೆ. 

ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಜೀವಿಜಯ, ಕಾಂಗ್ರೆಸ್ ಪಕ್ಷ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಹೊರಗಿನಿಂದ ಬಂದ ವ್ಯಕ್ತಿಗೆ ಟಿಕೆಟ್ ನೀಡಿದೆ. ಹಲವು ಚುನಾವಣೆಗಳಲ್ಲಿ ನಾನು ಸೋಲು, ಗೆಲುವು ಎಲ್ಲವನ್ನೂ ಕಂಡಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ. ಆದರೆ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿಲ್ಲ. ಎಲ್ಲಾ ಸಮುದಾಯವನ್ನು ಒಗ್ಗೂಡಿಸಲು ಹಾಗೂ ಕೋಮು ಅಸಹನೆಯ ವಿರುದ್ಧ ಹೋರಾಡಲು ನಾನು ಕಾಂಗ್ರೆಸ್ ಸೇರಿದ್ದೆ. ಆದರೆ ನನ್ನ ಅಭಿಪ್ರಾಯಗಳಿಗೆ ಪಕ್ಷದಲ್ಲಿ ಮಾನ್ಯತೆ ಇಲ್ಲ ಎಂದು ಜೀವಿಜಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಕೊಡಗಿನಿಂದ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಡಾ. ಮಂತರ್ ಗೌಡ ಅವರಿಗೆ ಟಿಕೆಟ್ ನೀಡಿರುವ ನಿರ್ಧಾರವನ್ನು ವಿರೋಧಿಸಿ ಹೈಕಮಾಂಡ್ ಗೆ ಪತ್ರ ಬರೆದಿದ್ದೆ. ಆದರೆ ನನ್ನ ಪತ್ರವನ್ನು ನಿರ್ಲಕ್ಷ್ಯಿಸಲಾಯಿತು ಎಂದು ಜೀವಿಜಯ ಹೇಳಿದ್ದಾರೆ. ನನ್ನನ್ನು ನಿರ್ಲಕ್ಷ್ಯಿಸಿದ ಕಾರಣ ಜಿಲ್ಲೆಯ ಸ್ಥಳೀಯ ನಾಯಕನೊಬ್ಬನನ್ನು ಬೆಂಬಲಿಸುವುದಾಗಿ ಜೀವಿಜಯ ಘೋಷಿಸಿದ್ದಾರೆ.

‘ಜಮ್ಮಾ ಬಾಣೆ’ ಮತ್ತು ‘ಕಸ್ತೂರಿ ರಂಗನ್’ ವರದಿಗಳ ಜ್ವಲಂತ ಸಮಸ್ಯೆಗಳಿಗೆ ಹೊರಜಿಲ್ಲೆಯ ಅಭ್ಯರ್ಥಿಯಿಂದ ಪರಿಹಾರ ಸಾಧ್ಯವಿಲ್ಲ ಎಂದು ಜೀವಿಜಯ ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಅವರನ್ನು ಬೆಂಬಲಿಸುತ್ತೀರಾ ಎಂದು ಮಾಧ್ಯಮದವರು ಪ್ರಶ್ನಿಸಿದಾಗ, "ನಾನೇಕೆ ಅವರನ್ನು ಬೆಂಬಲಿಸಬಾರದು?" ಎಂದು ಕೇಳಿದ್ದಾರೆ. ಆದರೆ ಬಹಿರಂಗವಾಗಿ ಬಿಜೆಪಿಗೆ ಬೆಂಬಲ ಘೋಷಿಸಲು ನಿರಾಕರಿಸಿದರು. ಅವರು ಇತ್ತೀಚೆಗೆ ಅಪ್ಪಚ್ಚು ರಂಜನ್ ಅವರನ್ನು ಭೇಟಿಯಾಗಿದ್ದರು, ಅಪ್ಪಚ್ಚು ರಂಜನ್ ಅವರನ್ನು ಭೇಟಿಯಾದಾಗ “ಕೋಮು ರಾಜಕೀಯದಲ್ಲಿ  ತೊಡಗಿಸಿಕೊಳ್ಳಬೇಡಿ ಎಂದು ನಾನು ಅವರನ್ನು ಕೇಳಿದೆ ಮತ್ತು ಅವರಿಂದ ನನಗೆ ಸಕಾರಾತ್ಮಕ ಉತ್ತರ ಸಿಕ್ಕಿದೆ. ಹಾಗಾಗಿ, ನಾನು ಅವನನ್ನು ಏಕೆ ಬೆಂಬಲಿಸಬಾರದು? ಎಂದು ಪ್ರಶ್ನಿಸಿದ್ದು ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಕೂಡ ಉತ್ತಮ ಅಭ್ಯರ್ಥಿ,'' ಎಂದು ಜೀವಿಜಯ ಮಾರ್ಮಿಕವಾಗಿ ನುಡಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com