ಡಿಕೆ ಶಿವಕುಮಾರ್‌ ಬದಲು ಕೆ.ಡಿ ಶಿವಕುಮಾರ್ ಅಂತ ಹೆಸರು ಇಟ್ಟುಕೊಳ್ಳಿ: ಈಶ್ವರಪ್ಪ

ಕರ್ನಾಟಕದಲ್ಲಿ ಜಾತಿ ರಾಜಕಾರಣಕ್ಕೆ ಬೆಂಕಿ ಹಚ್ಚಿದವರೇ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್‌. ಇಂಥವರು ಬಿಜೆಪಿ ಜಾತಿ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸುತ್ತಿರುವುದು ನಾಚಿಕೆಗೇಡು ಎಂದಿದ್ದಾರೆ
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್
Updated on

ಹುಬ್ಬಳ್ಳಿ: ಕರ್ನಾಟಕದಲ್ಲಿ ಜಾತಿ ರಾಜಕಾರಣಕ್ಕೆ ಬೆಂಕಿ ಹಚ್ಚಿದವರೇ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್‌. ಇಂಥವರು ಬಿಜೆಪಿ ಜಾತಿ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸುತ್ತಿರುವುದು ನಾಚಿಕೆಗೇಡು ಎಂದಿದ್ದಾರೆ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್‌ ಸೇರಿದಂತೆ ಕೈ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ಕರ್ನಾಟಕ ರಾಜ್ಯದ ಜನರ ಆಕ್ರೋಶ ತೋರಿಸಲು ಕಾಂಗ್ರೆಸ್ ಪ್ರಣಾಳಿಕೆ ಸುಟ್ಟಿದ್ದೇನೆ. ರಾಷ್ಟ್ರಾಭಿಮಾನಿ, ದೇಶ ರಕ್ಷಕ ಸಂಘಟನೆ ಬಜರಂಗ ದಳವನ್ನು ಮುಸ್ಲಿಂ ಮತಕ್ಕಾಗಿ ನಿಷೇಧಿಸುವ ಮಾತನ್ನು ಆಡುತ್ತಿದೆ ಕಾಂಗ್ರೆಸ್‌ ಎಂದು ದೂರಿದರು.

ಡಿ.ಕೆ. ಶಿವಕುಮಾರ್‌ ಅವರು ಅವರು ಜಾತಿವಾದಿ. ನಿಮ್ಮ ಜಾತಿಯವನನ್ನು ಸಿಎಂ ಮಾಡಲು ನನ್ನನ್ನು ಬೆಂಬಲಿಸಿ ಎಂದು ಕೇಳುವ ಅವರ ಜಾತಿವಾದಿಯಲ್ಲವೇ ಎಂದು ಕೇಳಿದರು ಈಶ್ವರಪ್ಪ. ಬಜರಂಗ ದಳಕ್ಕೂ ಆಂಜನೇಯನಿಗೂ ಏನು ಸಂಬಂಧ ಎನ್ನುವ ಅಸಂಬದ್ಧ ಪ್ರಶ್ನೆಯನ್ನು ಕೇಳಿದ್ದಾರೆ ಡಿ.ಕೆ. ಶಿವಕುಮಾರ್‌. ಬಜರಂಗ ಬಲಿಯಂತೆ ಕೆಚ್ಚು ತೋರಿಸುವುದು, ಅವನನ್ನು ಆರಾಧಿಸುತ್ತೇವೆ ಎನ್ನುವ ಕಾರಣಕ್ಕಾಗಿ ಸಂಘಟನೆಗೆ ಆ ಹೆಸರು ಇಟ್ಟಿದ್ದೇವೆ. ಡಿ.ಕೆ. ಶಿವಕುಮಾರ್‌ಗೆ ಶಿವಕುಮಾರ್‌ ಅನ್ನೋ ಹೆಸರು ಯಾಕಿಟ್ಟರು? ಶಿವಕುಮಾರ್‌ ಥರ ಇರಲಿ ಅಂತ ತಾನೇ? ಅವರಿಗೆ ಡಿ.ಕೆ. ಶಿವಕುಮಾರ್‌ ಅಂತ ಹೆಸರು ಯಾಕೆ ಬೇಕು? ಕೆಡಿ ಶಿವಕುಮಾರ್‌ ಅಂತ ಹೆಸರು ಇಟ್ಕೊಳ್ಳಿ ಎಂದು ಈಶ್ವರಪ್ಪ ಹೇಳಿದರು.

ಆರ್‌ಎಸ್‌ಎಸ್ ಮಹತ್ವ ಅರಿತುಕೊಂಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷದ ಬಜರಂಗದಳ ನಿಷೇಧಿಸುವ ಪ್ರಣಾಳಿಕೆಯನ್ನಿಟ್ಟುಕೊಂಡು ಹೇಗೆ ಜನರ ಮುಂದೆ ಹೋಗುತ್ತಾರೆ. ಅವರ ಸ್ವಾಭಿಮಾನ ಎಲ್ಲಿ ಹೋಯ್ತು? ಜಗದೀಶ್ ಶೆಟ್ಟರ್ ಅವರು ಮತಕ್ಕಾಗಿ ಸ್ವಾಭಿಮಾನವನ್ನು ಮಾರಿಕೊಳ್ಳುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com