
ತುಮಕೂರು: ಕೇರಳ ನೊಂದಾಯಿತ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತುಮಕೂರು ಬಳಿ ಸಂಭವಿಸಿದೆ.
ತುಮಕೂರಿನ ಕಳ್ಳಂಬೆಳ್ಳದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿಗೆ ಕಾರು ಡಿಕ್ಕಿ ಹೊಡೆದಿದ್ದು ಅಪಘಾತದ ರಭಸಕ್ಕೆ ಇಬ್ಬರೂ ಸ್ಥಳದಲ್ಲೇ ಅಸುನೀಗಿದ್ದಾರೆ.
ಮೃತರನ್ನು ತುಮಕೂರಿನ ಅಶೋಕನಗರದ ನಿವಾಸಿಗಳು 55 ವರ್ಷದ ಶ್ರೀಹರ್ಷ ಹಾಗೂ ಪತ್ನಿ 50 ಚಂದ್ರಕಲಾ ಎಂದು ಗುರುತಿಸಲಾಗಿದೆ.
ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.
Advertisement