ದರಿದ್ರ ವ್ಯಕ್ತಿಗಳಿಗೆ ನನ್ನ ಚಾರಿತ್ರ್ಯ ಹರಣವೆ ಮುಖ್ಯವಷ್ಟೇ: ತಮ್ಮ ವಿರುದ್ಧದ ಅಪಪ್ರಚಾರಕ್ಕೆ ಸುರೇಶ್ ಕುಮಾರ್ ಬೇಸರ

ರಾಜ್ಯ ವಿಧಾನಸಭೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ಅಂತಿಮ ತೆರೆ ಬಿದ್ದಿದೆ, ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಮನೆ ಮನೆಗೆ ಹೋಗಿ ಪ್ರಚಾರ ನಡೆಸುತ್ತಿದ್ದಾರೆ. ಪಕ್ಷಗಳನ್ನು ಅಳೆದು-ತೂಗಿ ಮತ ಹಾಕಲು ಮತದಾರರು ಸಿದ್ಧರಾಗುತ್ತಿದ್ದಾರೆ.
ಸುರೇಶ್ ಕುಮಾರ್
ಸುರೇಶ್ ಕುಮಾರ್
Updated on

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ಅಂತಿಮ ತೆರೆ ಬಿದ್ದಿದೆ, ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಮನೆ ಮನೆಗೆ ಹೋಗಿ ಪ್ರಚಾರ ನಡೆಸುತ್ತಿದ್ದಾರೆ. ಪಕ್ಷಗಳನ್ನು ಅಳೆದು-ತೂಗಿ ಮತ ಹಾಕಲು ಮತದಾರರು ಸಿದ್ಧರಾಗುತ್ತಿದ್ದಾರೆ.

ಇದೇ ವೇಳೆ ಮಾಜಿ ಸಚಿವ ಹಾಗೂ ರಾಜಾಜಿನಗರ ಶಾಸಕ ಎಸ್ .ಸುರೇಶ್ ಕುಮಾರ್ ವಿರುದ್ಧ ಕರಪತ್ರ ಹಂಚಲಾಗುತ್ತಿದೆಯಂತೆ. ಈ ಸಂಬಂಧ ಸ್ವತಃ ಸುರೇಶ್ ಕುಮಾರ್ ಅವರೇ  ಫೇಸ್ ಬುಕ್ ನಲ್ಲಿ ಈ ವಿಷಯವನ್ನು ಹಂಚಿಕೊಂಡು ಬೇಸರ ವ್ಯಕ್ತ ಪಡಿಸಿದ್ದಾರೆ.

ಆತ್ಮೀಯರೇ
ನಾನು ಈ ವಿಷಯವನ್ನು ತುಸು ಬೇಸರದಿಂದ ಹಂಚಿಕೊಳ್ಳುತ್ತಿದ್ದೇನೆ.  ನಾಳೆ, ಮೇ ಹತ್ತು ಚುನಾವಣೆ ದಿನ.  ಈ ದಿನಗಳಲ್ಲಿ ಚುನಾವಣಾ ಅಪಪ್ರಚಾರವೇ ಪ್ರಚಾರದ ಸಾಧನವಾಗುತ್ತಿದೆ.  2013ರ ಚುನಾವಣೆಯ ದಿನ ನನ್ನ ವಿರುದ್ಧ ಬಹಳ ಕೆಟ್ಟ ಪದಗಳಿಂದ ಕೂಡಿದ್ದ ಕರಪತ್ರವನ್ನು ಕ್ಷೇತ್ರದ ಎಲ್ಲೆಡೆ ಹಂಚಲಾಗಿತ್ತು.  2018 ರಲ್ಲಿ ಸಹ ಇದೇ ಪ್ರಯತ್ನವನ್ನು ಮಾಡಲಾಗಿತ್ತು.

ಈ ಕರಪತ್ರಗಳ ಮಾಲಿಕರು ಯಾರು, ಹೆಸರು ಏನು.  ಎಂಬುದನ್ನು ತಿಳಿಸುವ ಧೈರ್ಯವನ್ನು ಈ ವಿಕೃತಿಯಿಂದ ಕೂಡಿದ ಜನ ತೋರುವುದಿಲ್ಲ.  ಚುನಾವಣಾ ಸಮಯದಲ್ಲಿ ಯಾವುದೇ ಕರಪತ್ರಕ್ಕೆ ಮುದ್ರ ಕರ ಹೆಸರು ವಿಳಾಸ ಇರಬೇಕು.ಈ ಅಪಪ್ರಚಾರದ ಕರಪತ್ರ ಗಳಿಗೆ ಇದ್ಯಾವುದೂ ಇಲ್ಲ. ಇದು, ಕೆಲ ಮುಖಹೇಡಿಗಳು ಮಾಡುತ್ತಿರುವ  "ಹಿಟ್ ಅಂಡ್ ರನ್" ಕ್ರಿಯೆ.  ಇಂದೂ ಸಹ ಇಂತಹದೇ ಒಂದು ಕೆಟ್ಟ ಪ್ರಯತ್ನ ನಡೆದಿದೆ.

ಇದು ಒಂದು ರೀತಿ ನನ್ನ ಚಾರಿತ್ರ್ಯ ಹರಣ ಮಾಡಲು ಹುನ್ನಾರ. ಚುನಾವಣೆ ಸಮಯದಲ್ಲಿ ಮಾತ್ರ ಇದು ನಡೆಯುವುದು.  ನಮ್ಮ ಕ್ಷೇತ್ರದ ಎಲ್ಲಾ ವಾರ್ಡ್ ಗಳ ಅನೇಕ ಮನೆಗಳಿಗೆ ಈ ಅಪಪ್ರಚಾರ ಕರಪತ್ರಗಳು ತಲುಪಿವೆ. ಒಟ್ಟಾರೆ ಮತದಾರರಲ್ಲಿ ನನ್ನ ಬಗ್ಗೆ ಕೆಟ್ಟ ಚಿತ್ರ ಮೂಡಿಸುವ ಪ್ರಯತ್ನ ಇದು.

ಏಕೆ ಈ ದುರುಳರು ಈ ಕಾರ್ಯ ಇಂದೇ ಮಾಡುತ್ತಿರುವುದು ಎಂಬುದು ಎಲ್ಲರಿಗೂ ಗೊತ್ತಿದೆ.  ತಾವು ಈ ಅಸಹ್ಯ ಪ್ರಯತ್ನವನ್ನು ತಿರಸ್ಕರಿಸಬೇಕೆಂದು ಕೋರುತ್ತೇನೆ.  ಧೈರ್ಯವಿದ್ದರೆ ಈ ವಿಕೃತ ಮನಸ್ಸುಗಳು ಬಹಿರಂಗವಾಗಿ ನನ್ನೊಡನೆ ಚರ್ಚೆಗೆ ಬರಬೇಕೇ ವಿನಹ ಈ ರೀತಿ ಕದ್ದು ಮುಚ್ಚಿ ಕಳ್ಳ ಅಪಪ್ರಚಾರ ಮಾಡಬಾರದು. 

ಇದು ಚುನಾವಣಾ ನೀತಿ ಸಂಹಿತೆಗೂ ವಿರುದ್ಧ. ಆದರೆ ಈ ದರಿದ್ರ ವ್ಯಕ್ತಿಗಳಿಗೆ ಕೇವಲ ನನ್ನ ಚಾರಿತ್ರ್ಯ ಹರಣವೆ ಮುಖ್ಯವಷ್ಟೇ! ಎಂದು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com