ಕಳೆದ ಮೂರು ವಿಧಾನಸಭೆ ಚುನಾವಣೆಯಲ್ಲಿ ಆದ ಶೇಕಡಾವಾರು ಮತದಾನವೆಷ್ಟು? ಅಂಕಿಅಂಶ ಹಂಚಿಕೊಂಡ ಚುನಾವಣಾ ಆಯೋಗ

ಕರ್ನಾಟಕ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಮುಗಿದು ಇನ್ನೇನು ಕನ್ನಡಿಗರೆಲ್ಲರೂ ಫಲಿತಾಂಶಕ್ಕೆ ಕಾಯುತ್ತಿದ್ದಾರೆ. ಮಾಧ್ಯಮಗಳಲ್ಲಿ ಫಲಿತಾಂಶ ಪೂರ್ವ ಸಮೀಕ್ಷೆಗಳು ಹೊರಬಿದ್ದಿವೆ. ಸಾರ್ವಜನಿಕರು ಕೂಡ ತಮ್ಮದೇ ರೀತಿಯಲ್ಲಿ ಚರ್ಚೆ, ವಿಮರ್ಶೆಗಳು ನಡೆಸುತ್ತಿದ್ದಾರೆ. ನಾಡಿದ್ದು ಶನಿವಾರ ಮಧ್ಯಾಹ್ನ ಹೊತ್ತಿಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಮುಗಿದು ಇನ್ನೇನು ಕನ್ನಡಿಗರೆಲ್ಲರೂ ಫಲಿತಾಂಶಕ್ಕೆ ಕಾಯುತ್ತಿದ್ದಾರೆ. ಮಾಧ್ಯಮಗಳಲ್ಲಿ ಫಲಿತಾಂಶ ಪೂರ್ವ ಸಮೀಕ್ಷೆಗಳು ಹೊರಬಿದ್ದಿವೆ. ಸಾರ್ವಜನಿಕರು ಕೂಡ ತಮ್ಮದೇ ರೀತಿಯಲ್ಲಿ ಚರ್ಚೆ, ವಿಮರ್ಶೆಗಳು ನಡೆಸುತ್ತಿದ್ದಾರೆ. ನಾಡಿದ್ದು ಶನಿವಾರ ಮಧ್ಯಾಹ್ನ ಹೊತ್ತಿಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ.

ಈ ಸಂದರ್ಭದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಕಳೆದ ಮೂರು ಬಾರಿಯ ಚುನಾವಣೆಯಲ್ಲಿ ಪ್ರತಿ ಜಿಲ್ಲೆಗಳಲ್ಲಿ ಎಷ್ಟು ಶೇಕಡಾವಾರು ಮತದಾನವಾಗಿದೆ ಎಂದು ಅಂಕಿಅಂಶ ಬಹಿರಂಗಪಡಿಸಿದ್ದಾರೆ. 2013ಕ್ಕೆ ಹೋಲಿಸಿದರೆ 2018ರಲ್ಲಿ ಶೇಕಡಾ 72.44ರಷ್ಟು ಮತದಾನವಾಗಿದ್ದರೆ ಈ ಬಾರಿ ರಾಜ್ಯದಲ್ಲಿ ಒಟ್ಟಾರೆ ಶೇಕಡಾ 72.76ರಷ್ಟು ಮತದಾನವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಬಾರಿ ಅತಿಹೆಚ್ಚು ಶೇಕಡಾ 85.83ರಷ್ಟು ಮತದಾನವಾಗಿದೆ.

ಈ ವರ್ಷ ಯುವಕರು, ತೃತೀಯ ಲಿಂಗಿಗಳು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ಅಶಕ್ತರು, ಹಿರಿಯ ನಾಗರಿಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ. ಮತಗಟ್ಟೆಗಳಲ್ಲಿ ಮತ ಚಲಾವಣೆ ಪ್ರಕ್ರಿಯೆಯಲ್ಲಿ ಸಹಾಯ ಮಾಡಿದ ಕಾರ್ಯಕರ್ತರಿಗೆ ಮುಖ್ಯ ಚುನಾವಣಾಧಿಕಾರಿಗಳು ಧನ್ಯವಾದ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com