ಬೆಳಗಾವಿ: ಶ್ರೀಗಂಧದ ಕಳ್ಳಸಾಗಾಣಿಕೆದಾರರಿಂದ ರೈತರಿಗೆ ಜೀವ ಬೆದರಿಕೆಯ ಜತೆಗೆ ಅಪಾರ ನಷ್ಟ!

ಶ್ರೀಗಂಧ ಕಳ್ಳಸಾಗಣೆದಾರರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬೆಳಗಾವಿ ತಾಲೂಕಿನ ಗ್ರಾಮಗಳ ರೈತರ ಜೀವಕ್ಕೆ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಬೆಳಗಾವಿಯಲ್ಲಿ ಸಕ್ರಿಯವಾಗಿರುವ ಶ್ರೀಗಂಧದ ಕಳ್ಳಸಾಗಾಣಿಕೆದಾರರ ಗ್ಯಾಂಗ್, ನಿತ್ಯವೂ ಕೃಷಿ ಭೂಮಿಯಲ್ಲಿರುವ ಶ್ರೀಗಂಧದ ಮರಗಳನ್ನು ಕಡಿಯುತ್ತಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ.
ಶ್ರೀಗಂಧ ಮರಗಳನ್ನು ಕತ್ತರಿಸಿರುವ ಕಳ್ಳರು
ಶ್ರೀಗಂಧ ಮರಗಳನ್ನು ಕತ್ತರಿಸಿರುವ ಕಳ್ಳರು
Updated on

ಬೆಳಗಾವಿ: ಶ್ರೀಗಂಧ ಕಳ್ಳಸಾಗಣೆದಾರರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬೆಳಗಾವಿ ತಾಲೂಕಿನ ಗ್ರಾಮಗಳ ರೈತರ ಜೀವಕ್ಕೆ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಬೆಳಗಾವಿಯಲ್ಲಿ ಸಕ್ರಿಯವಾಗಿರುವ ಶ್ರೀಗಂಧದ ಕಳ್ಳಸಾಗಾಣಿಕೆದಾರರ ಗ್ಯಾಂಗ್, ನಿತ್ಯವೂ ಕೃಷಿ ಭೂಮಿಯಲ್ಲಿರುವ ಶ್ರೀಗಂಧದ ಮರಗಳನ್ನು ಕಡಿಯುತ್ತಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ.

ಬೆಳಗಾವಿ, ಖಾನಾಪುರ ತಾಲೂಕಿನ ಗ್ರಾಮಗಳನ್ನು ಸುತ್ತುವರಿದಿರುವ ಕೆಂಪು ಮಣ್ಣು ಬಿಳಿ ಶ್ರೀಗಂಧದ ಮರಗಳ ಉತ್ತಮ ಬೆಳವಣಿಗೆಗೆ ಹೆಚ್ಚು ಸೂಕ್ತವಾಗಿದೆ. ಇದಲ್ಲದೆ, ರೈತರು ತಮ್ಮ ಕೃಷಿ ಭೂಮಿಯಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಶ್ರೀಗಂಧದ ತೋಟ, ಶ್ರೀಗಂಧದ ಮರಗಳನ್ನು ಬೆಳೆಸುತ್ತಾರೆ. ನೈಸರ್ಗಿಕವಾಗಿ ಕೃಷಿ ಜಮೀನುಗಳ ಮೇಲೆ, ರಸ್ತೆ ಬದಿಯ ಪೊದೆಗಳು ಮತ್ತು ಬಂಜರು ಭೂಮಿಯಲ್ಲಿ ಬೆಳೆಯುತ್ತವೆ.

ರಾಜ್ಯ ಸರ್ಕಾರವು ಶ್ರೀಗಂಧವನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲು ರೈತರಿಗೆ ಉತ್ತೇಜನ ನೀಡುತ್ತಿರುವುದರಿಂದ ಈ ಭಾಗದ ಅನೇಕ ರೈತರು ಅರಣ್ಯ ಇಲಾಖೆಯ ಸಹಾಯದಿಂದ ತಮ್ಮ ಜಮೀನಿನಲ್ಲಿ ಅವುಗಳನ್ನು ನೆಡಲು ಪ್ರಾರಂಭಿಸಿದ್ದಾರೆ. ಆದರೆ, ಶ್ರೀಗಂಧದ ಮರಗಳ ಕಳ್ಳತನಕ್ಕೆ ಕಡಿವಾಣ ಹಾಕಲು ಅರಣ್ಯ ಹಾಗೂ ಪೊಲೀಸ್ ಇಲಾಖೆ ಯಾವುದೇ ಪ್ರಯತ್ನ ನಡೆಸಿಲ್ಲ.

ಅಗಸಗಿ ಮತ್ತು ಕಡೋಲಿ ಗ್ರಾಮಗಳ ಜನರ ಪ್ರಕಾರ, ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳರ ಗ್ಯಾಂಗ್ ಸಕ್ರಿಯವಾಗಿದೆ, ಇದು ನಿಯಮಿತವಾಗಿ ಹಳ್ಳಿಗಳಲ್ಲಿ ಉತ್ತಮವಾಗಿ ಬೆಳೆದ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡುವಲ್ಲಿ ನಿರತವಾಗಿದೆ. ಈ ಗ್ಯಾಂಗ್ ರಾತ್ರಿಯಲ್ಲಿ ಕಾರ್ಯಾಚರಣೆಯನ್ನು ನಡೆಸುತ್ತದೆ. ಒಮ್ಮೆಗೆ 50 ಕ್ಕೂ ಹೆಚ್ಚು ಶ್ರೀಗಂಧದ ಮರಗಳನ್ನು ಕತ್ತರಿಸುತ್ತದೆ.

ಚಾಪರ್ ಯಂತ್ರದ ಮೂಲಕ ಮರವನ್ನು ಕತ್ತರಿಸುವ  ಇವರು ಬೆಲೆಬಾಳುವ ಶ್ರೀಗಂಧದ ಮರವನ್ನು  ಕತ್ತರಿಸುತ್ತಾರೆ,  ಮರದ ಹೃದಯ ಭಾಗವೆಂದೇ ಪರಿಗಣಿತವಾಗಿರುವ ಮರದ ಮಧ್ಯಭಾಗವನ್ನು ಕತ್ತರಿಸುತ್ತಾರೆ, ಇದು ಅತಿ ಹೆಚ್ಚು ಬೆಲೆಬಾಳುತ್ತದೆ. ಮರದ ಉಳಿದ ಭಾಗವನ್ನು ಅರ್ದಕ್ಕೆ ಕತ್ತರಿಸಿ ಅಲ್ಲಿಯೇ ಬಿಟ್ಟು ಹೋಗುತ್ತಾರೆ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.

ಇತ್ತೀಚೆಗಷ್ಟೇ ಅಗಸಗಿ, ಕಡೋಲಿ, ಕೆದ್ನೂರು, ಹಂದಿಗ್ನೂರು, ಚುಲುವೇನಹಟ್ಟಿ, ಕುರಿಹಾಳ್, ಬಂಬರಗೆ, ಕಟ್ಟನಭಾವಿ, ಮನ್ನಿಕೇರಿ, ದೇವಗಿರಿ ಭಾಗದಲ್ಲಿ ವಾರದ ಹಿಂದೆ ಸುಮಾರು 50ಕ್ಕೂ ಹೆಚ್ಚು ಮರಗಳನ್ನು ಕತ್ತರಿಸಲಾಗಿತ್ತು.

ರೈತರು ಈ ಮರಗಳನ್ನು ಬೆಳೆದು ಮಾರಾಟ ಮಾಡಬಹುದೆಂದು ಸರ್ಕಾರ ಘೋಷಿಸಿರುವುದರಿಂದ ತಮ್ಮ ಜಮೀನಿನಲ್ಲಿ ಈ ಮರಗಳನ್ನು ಪೋಷಿಸುವ ರೈತರು, ವೃತ್ತಿಪರ ಕಳ್ಳರಿಂದ ಅಪಾರ ಆರ್ಥಿಕ ನಷ್ಟದ ಜೊತೆಗೆ ಬೆದರಿಕೆಯನ್ನು ಅನುಭವಿಸುತ್ತಿದ್ದಾರೆ. ಈ ಕಾಟದಿಂದಾಗಿ ಅನೇಕ ರೈತರು ತಮ್ಮ ಜಮೀನಿನಲ್ಲಿ ಶ್ರೀಗಂಧದ ಮರಗಳನ್ನು ಬೆಳೆಸಲು ಉತ್ಸುಕತೆಯನ್ನು ತೋರಿಸುತ್ತಿಲ್ಲ, ಆದರೆ ಶ್ರೀಗಂಧದ ವಾಣಿಜ್ಯ ಬೆಳೆಯನ್ನು ಸರ್ಕಾರವು ಉತ್ತೇಜಿಸುತ್ತಿದೆ.

ಬೆಳಗಾವಿಯಲ್ಲಿ ಶ್ರೀಗಂಧದ ಮರ ಕಳ್ಳಸಾಗಾಣಿಕೆದಾರರ ದಂಧೆ ಸಕ್ರಿಯವಾಗಿದ್ದರೂ, ಈ ತಂಡ ಪತ್ತೆಗೆ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಗ್ರಾಮಸ್ಥರ ಪ್ರಕಾರ, ಈ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳಲ್ಲಿ 1,000 ಕ್ಕೂ ಹೆಚ್ಚು ಮರಗಳನ್ನು ಈ ಗ್ಯಾಂಗ್ ಕತ್ತರಿಸಿದೆ.  ಶ್ರೀಗಂಧದ ಮರಗಳ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವಲ್ಲಿ ಅರಣ್ಯ ಇಲಾಖೆಯೂ ವಿಫಲವಾಗಿದೆ. ಅಸಹಾಯಕರಾದ ರೈತರು ಈ ಶ್ರೀಗಂಧದ ಮರ ಕಳ್ಳಸಾಗಣೆದಾರರ ಚಟುವಟಿಕೆಗಳನ್ನು ಸಹಿಸಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎನ್ನುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com