2025ರ ಮೇಯಲ್ಲಿ ಕರ್ನಾಟಕಕ್ಕೆ ಮರಳುತ್ತೇನೆ, ಇಷ್ಟು ವರ್ಷ ನೀವು ಕೊಟ್ಟ ಬೆಂಬಲಕ್ಕೆ ಧನ್ಯವಾದಗಳು: ಸಿಬಿಐ ನೂತನ ನಿರ್ದೇಶಕ ಪ್ರವೀಣ್ ಸೂದ್

ಸದ್ಯದಲ್ಲಿಯೇ ಡಿಜಿ ಮತ್ತು ಐಜಿಪಿ ಹುದ್ದೆಯಿಂದ ನಿರ್ಗಮಿಸಿ ನನ್ನ ಉತ್ತರಾಧಿಕಾರಿಗೆ ಅಧಿಕಾರ ಬಿಟ್ಟುಕೊಟ್ಟು ಮುಂದಿನ ಹುದ್ದೆಗೆ ಹೋಗುತ್ತಿದ್ದೇನೆ ಎಂದು ಸಿಬಿಐ ಮುಂದಿನ ನಿರ್ದೇಶಕರಾಗಿ ನೇಮಕಗೊಂಡಿರುವ ಪ್ರವೀಣ್ ಸೂದ್ ತಿಳಿಸಿದ್ದಾರೆ.
ಪತ್ನಿ ಮತ್ತು ಮಗಳ ಜೊತೆ ಪ್ರವೀಣ್ ಸೂದ್(ಸಂಗ್ರಹ ಚಿತ್ರ)
ಪತ್ನಿ ಮತ್ತು ಮಗಳ ಜೊತೆ ಪ್ರವೀಣ್ ಸೂದ್(ಸಂಗ್ರಹ ಚಿತ್ರ)

ಬೆಂಗಳೂರು: ಸದ್ಯದಲ್ಲಿಯೇ ಡಿಜಿ ಮತ್ತು ಐಜಿಪಿ ಹುದ್ದೆಯಿಂದ ನಿರ್ಗಮಿಸಿ ನನ್ನ ಉತ್ತರಾಧಿಕಾರಿಗೆ ಅಧಿಕಾರ ಬಿಟ್ಟುಕೊಟ್ಟು ಮುಂದಿನ ಹುದ್ದೆಗೆ ಹೋಗುತ್ತಿದ್ದೇನೆ ಎಂದು ಸಿಬಿಐ ಮುಂದಿನ ನಿರ್ದೇಶಕರಾಗಿ ನೇಮಕಗೊಂಡಿರುವ ಪ್ರವೀಣ್ ಸೂದ್ ತಿಳಿಸಿದ್ದಾರೆ.

ಈ ಕುರಿತು ಇಂದು ಟ್ವೀಟ್ ಮಾಡಿರುವ ಅವರು, 2020ರಲ್ಲಿ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ನಂತರ ಈ ರಾಜ್ಯದ ಜನತೆ ಜೊತೆ ಸಂಪರ್ಕ ಹೊಂದಿದ್ದೆ. 2025ರ ಮೇ ತಿಂಗಳವರೆಗೆ ನನಗೆ ಸರ್ಕಾರ ಹೊಸ ಜವಾಬ್ದಾರಿಯನ್ನು ವಹಿಸಿದ್ದು ಅದರ ನಂತರ ಮತ್ತೆ ಕರ್ನಾಟಕಕ್ಕೆ ಮರಳುತ್ತೇನೆ.

ಕಳೆದ ಮೂರೂವರೆ ವರ್ಷಗಳಲ್ಲಿ ನೀವು ಕೊಟ್ಟ ಬೆಂಬಲ, ಸಹಕಾರಗಳಿಗೆ ಧನ್ಯವಾದಗಳು ಎಂದು ಪ್ರವೀಣ್ ಸೂದ್ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com