ಬೆಂಗಳೂರು: ಚೀನಾದ ಪಿಜೆನ್ ಎಜುಕೇಶನ್ ಟೆಕ್ನಾಲಜಿಯ 8 ಕೋಟಿ ರೂ. ಜಪ್ತಿ ಮಾಡಿದ ಇ.ಡಿ ಅಧಿಕಾರಿಗಳು!

ಪಿಜನ್ ಎಜುಕೇಶನ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್‌ನ ಹಣವನ್ನು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (ಫೆಮಾ) ಸೆಕ್ಷನ್ 37 ಎ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ.
ಜಾರಿ ನಿರ್ದೇಶನಾಲಯ
ಜಾರಿ ನಿರ್ದೇಶನಾಲಯ

ಬೆಂಗಳೂರು: ವಿದೇಶಿ ವಿನಿಮಯ ಕಾನೂನನ್ನು ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದ ತನಿಖೆಯ ಭಾಗವಾಗಿ, ಚೀನಾ ಪ್ರಜೆಗಳ ನಿಯಂತ್ರಣದಲ್ಲಿರುವ ಬೆಂಗಳೂರು ಮೂಲದ ಆನ್‌ಲೈನ್ ಶಿಕ್ಷಣ ಕಂಪನಿಯ 8.26 ಕೋಟಿ ರೂಪಾಯಿ ಮೌಲ್ಯದ ಹಣವನ್ನು ವಶಪಡಿಸಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ ಶುಕ್ರವಾರ ತಿಳಿಸಿದೆ.

ಪಿಜನ್ ಎಜುಕೇಶನ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್‌ನ ಹಣವನ್ನು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (ಫೆಮಾ) ಸೆಕ್ಷನ್ 37 ಎ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ.

ಈ ಸಂಸ್ಥೆಯನ್ನು ಕ್ಯಾಮನ್ ದ್ವೀಪಗಳಿಂದಲೇ ಶೇಕಡಾ ನೂರರಷ್ಟು ಚೀನಾ ಮೂಲದ ವ್ಯಕ್ತಿಗಳು ನಿರ್ವಹಿಸುತ್ತಿದ್ದಾರೆ. ಜಾಹೀರಾತು ವೆಚ್ಚದ ಹೆಸರಿನಲ್ಲಿ ಕಂಪನಿಯ ಖಾತೆಯಿಂದ 82.72 ಕೋಟಿ ರೂಪಾಯಿ ಹಣ ಚೀನಾ ಮತ್ತು ಹಾಂಕಾಂಗ್ ಮೂಲದ ಖಾತೆಗಳಿಗೆ ವರ್ಗಾವಣೆಯಾಗಿರುವುದು ತನಿಖೆ ವೇಳೆ ಪತ್ತೆಯಾಗಿದೆ ಎಂದು ಇಡಿ ಹೇಳಿದೆ. ಈ ಬಗ್ಗೆ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದ್ದು, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (ಫೆಮಾ) ಸೆಕ್ಷನ್ 37ಎ ಅಡಿಯಲ್ಲಿ ಹಣ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದೆ.

 ಇಡಿ ಅಧಿಕಾರಿಗಳು ಕಳೆದ ಏಪ್ರಿಲ್​ನಲ್ಲಿ ಈ ಸಂಸ್ಥೆ ಮೇಲೆ ದಾಳಿ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಸಂಸ್ಥೆಯ ಎಲ್ಲ ವ್ಯವಹಾರಗಳು, ಹಣಕಾಸು ನಿರ್ಧಾರಗಳನ್ನು ಒಳಗೊಂಡಂತೆ ಪ್ರತಿಯೊಂದು ತೀರ್ಮಾನವನ್ನು ಚೀನಾದಲ್ಲಿ ಕುಳಿತಿರುವ ವ್ಯಕ್ತಿಗಳು ತೆಗೆದುಕೊಳ್ಳುತ್ತಿದ್ದಾರೆ. ಚೀನಾದ ನಿರ್ದೇಶಕ ಲಿಯು ಕ್ಯಾನ್ ಸೂಚನೆಯ ಮೇರೆಗೆ ಸಂಸ್ಥೆ ಜಾಹೀರಾತು ಮತ್ತು ಮಾರುಕಟ್ಟೆ ವೆಚ್ಚದ ಹೆಸರಿನಲ್ಲಿ 82.72 ಕೋಟಿ ರೂ.ಗಳನ್ನು ಎರಡು ರಾಷ್ಟ್ರಗಳಿಗೆ ವರ್ಗಾವಣೆಗೊಂಡಿರುವುದನ್ನು ಪತ್ತೆ ಹಚ್ಚಲಾಗಿತ್ತು.

ಈ ಜಾಹೀರಾತುಗಳನ್ನು ಗೂಗಲ್ ಮತ್ತು ಫೇಸ್‌ಬುಕ್ ಮೂಲಕ ಪ್ರಕಟಿಸಲಾಗಿದೆ ಎಂದು ಚೀನಾದ ನಿರ್ದೇಶಕರು ಹೇಳಿದ್ದಾರೆ ಎಂದು ಕಂಪನಿಯ ಭಾರತೀಯ ನಿರ್ದೇಶಕ ವೇದಾಂತ ಹಮಿರ್ವಾಸಿಯಾ ಹೇಳಿದ್ದಾರೆ, ಆದಾಗ್ಯೂ, ಈ ಪ್ಲಾಟ್‌ಫಾರ್ಮ್‌ಗಳಿಂದ ಯಾವುದೇ ದೃಢೀಕರಣ ಅಥವಾ ಸರಕುಪಟ್ಟಿ ಸಲ್ಲಿಸಲಾಗಿಲ್ಲ,ಎಂದು ಏಜೆನ್ಸಿ ಸೇರಿಸಲಾಗಿದೆ.

ಪಿಜೆನ್ ಎಜುಕೇಶನ್ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಒಡಾಕ್ಲಾಸ್ ಆ್ಯಪ್ ಮೂಲಕ ಆನ್‌ಲೈನ್ ಶಿಕ್ಷಣ ಒದಗಿಸುತ್ತಿದೆ. ಇದು ಚೀನಾ ಮೂಲದ ಲಿಯು ಕ್ಯಾನ್ ಹಾಗೂ ಭಾರತದ ವೇದಾಂತ್ ಹಮಿರ್ವಾಸಿಯಾ ಅವರನ್ನು ತನ್ನ ನಿರ್ದೇಶಕರನ್ನಾಗಿ ಹೊಂದಿದ್ದು, ಬೆಂಗಳೂರಿನಿಂದ ಕಾರ್ಯ ನಿರ್ವಹಿಸುತ್ತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com