ನನಗೆ ರಾಜಕೀಯದಲ್ಲಿ ಆಸಕ್ತಿಯೂ ಇಲ್ಲ, ಭವಿಷ್ಯದಲ್ಲಿಯೂ ರಾಜಕೀಯಕ್ಕೆ ಬರಲ್ಲ: ಯದುವೀರ್ ಒಡೆಯರ್

ನನಗೆ ರಾಜಕೀಯದಲ್ಲಿ ಆಸಕ್ತಿಯೂ ಇಲ್ಲ, ಭವಿಷ್ಯದಲ್ಲಿಯೂ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುವುದಿಲ್ಲ ಎಂದು ಮೈಸೂರು ರಾಜ ವಂಶಸ್ಥ ಯದುವೀರ್‌ ಸ್ಪಷ್ಟಪಡಿಸಿದರು.
ಯದುವೀರ್ ಒಡೆಯರ್
ಯದುವೀರ್ ಒಡೆಯರ್

ಮೈಸೂರು: ನನಗೆ ರಾಜಕೀಯದಲ್ಲಿ ಆಸಕ್ತಿಯೂ ಇಲ್ಲ, ಭವಿಷ್ಯದಲ್ಲಿಯೂ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುವುದಿಲ್ಲ ಎಂದು ಮೈಸೂರು ರಾಜ ವಂಶಸ್ಥ ಯದುವೀರ್‌ ಸ್ಪಷ್ಟಪಡಿಸಿದರು.

ಚುನಾವಣೆಗಳು ಬಂದ ಸಮಯದಲ್ಲೆಲ್ಲಾ ಸ್ಪರ್ಧೆಯ ವಿಚಾರ ಬರುತ್ತಿದ್ದರೂ ನಾನು ಅದರ ಬಗ್ಗೆ ಗಮನಕೊಡುವುದಿಲ್ಲ. ಆಸಕ್ತಿಯನ್ನು ತೊರುವುದಿಲ್ಲ, ಅರಮನೆ ಸಂಪ್ರದಾಯ ಪಾಲನೆ ಆಚಾರ-ವಿಚಾರಗಳಿಗೆ ಬದ್ಧನಾಗಿ ನಡೆಯುವುದಕ್ಕಷ್ಟೇ ಪ್ರಾಮುಖ್ಯತೆ ನೀಡುತ್ತೇನೆ. ಜನರು ಪ್ರೀತಿಯಿಂದ ಕರೆದಲ್ಲಿಗೆ ಹೋಗಿ ಬರುವುದು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ಮುಂದೆಯೂ ಮುಂದುವರೆಸುತ್ತೇನೆ ಎಂದು ರಾಜಕೀಯ ಪ್ರವೇಶ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ರಾಜ್ಯದಲ್ಲಿ ನೂತನ ಸರ್ಕಾರ ಈಗಷ್ಟೇ ಅಧಿಕಾರಕ್ಕೆ ಬಂದಿದೆ. ಮೊನ್ನೆಯಷ್ಟೇ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈಗಲೇ ಆಡಳಿತವನ್ನು ತುಲನೆ ಮಾಡುವುದಕ್ಕೆ ಸಾಧ್ಯವಿಲ್ಲ. ಅವರಿಗೆ ಸಮಯಾವಕಾಶ ಕೊಟ್ಟು ನೋಡೋಣ. ಜನಪರವಾದ ಆಡಳಿತ ನೀಡಬೇಕೆಂಬುದು ನಮ್ಮ ಆಶಯವಾಗಿದೆ. ಅದಕ್ಕೆ ಪೂರಕವಾಗಿ ಅವರು ಏನೇನು ನೀತಿ-ನಿಯಮಗಳನ್ನು ರೂಪಿಸಿಕೊಂಡಿದ್ದಾರೆ ಎನ್ನುವುದನ್ನು ಸ್ವಲ್ಪ ಕಾಲದವರೆಗೆ ಕಾದುನೋಡಬೇಕಿದೆ ಎಂದು ಹೇಳಿದರು.

ಪ್ಲಾಸ್ಟಿಕ್‌ ಎನ್ನುವುದೊಂದು ಮಹಾಮಾರಿ. ಅದು ಭೂಮಿಯೊಳಗೆ ಸೇರಿ ವಿಷವಾಗದಂತೆ ತಡೆಯಬೇಕಿದೆ. ಅದನ್ನು ನಿಷೇಧಿಸುವ ದೇವಸ್ಥಾನಗಳಿರುವ ಜಾಗದಿಂದಲೇ ಆರಂಭವಾಗಬೇಕು. ಆಗ ಅದಕ್ಕೊಂದು ಅರ್ಥ ಬರುತ್ತದೆ. ಪ್ರತಿಯೊಬ್ಬರೂ ಪ್ಲಾಸ್ಟಿಕ್‌ ಬಳಕೆಯನ್ನು ನಿಲ್ಲಿಸಿದಾಗ ಪ್ರಕೃತಿ ಸೌಂದರ್ಯ ಹಾಗೂ ಭೂಮಿಯ ಆರೋಗ್ಯವನ್ನು ಕಾಪಾಡಬಹುದು. ಪ್ಲಾಸ್ಟಿಕ್‌ ಹೆಚ್ಚು ಬಳಸದೆ ಪರಿಸರವನ್ನು ಪ್ಲಾಸ್ಟಿಕ್‌ ಮುಕ್ತ ವಲಯಮಾಡಿ ಹಸಿರಿಕರಣಗೊಳಿಸಬೇಕು ಎಂದು ಸಲಹೆ ನೀಡಿದರು. ನಮ್ಮ ಮುಂದಿನ ಪೀಳಿಗೆಗೆ ದೇವಸ್ಥಾನಗಳ ಮಹತ್ವ ತಿಳಿಸುವ ಅಗತ್ಯವಿದೆ ಎಂದು ಮೈಸೂರು ಮಹಾರಾಜ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com