ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

'ನಿಷೇಧಿಸುತ್ತೇವೆ ಎಂದು ವೀರಾವೇಶದಿಂದ ಧಮಕಿ ಹಾಕುವ ಮುನ್ನ ಈ ಎಲ್ಲಾ ವಿದ್ಯಮಾನವನ್ನು ಅಧ್ಯಯನ ಮಾಡಿದರೆ ಒಳಿತು'

50ರ ದಶಕದಲ್ಲಿ ದೇಶದ ಅಂದಿನ  ಸರ್ವೋಚ್ಚ ನಾಯಕರೊಬ್ಬರು "I will crush this RSS" ಎಂದಿದ್ದರು.  ಭಾರತೀಯ ಜನಸಂಘದ ಸಂಸ್ಥಾಪಕ ಅಧ್ಯಕ್ಷ ಶಾಮ ಪ್ರಸಾದ ಮುಖರ್ಜಿ ರವರು ಇದಕ್ಕೆ ಪ್ರತಿಕ್ರಿಯಿಸುತ್ತಾ 'We will crush this crushing mentality" ಎಂದಿದ್ದರು.
Published on

ಬೆಂಗಳೂರು: ರಾಜ್ಯದಲ್ಲಿ ಶಾಂತಿ ಕದಡಿದರೆ ಬಜರಂಗದಳ ಮತ್ತು ಆರ್‌ಎಸ್‌ಎಸ್‌ನಂತಹ ಸಂಘಟನೆಗಳನ್ನು ತಮ್ಮ ಸರ್ಕಾರ ನಿಷೇಧಿಸುತ್ತದೆ. ಒಂದು ವೇಳೆ ಬಿಜೆಪಿ ನಾಯಕರಿಗೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗದಿದ್ದರೆ ಪಾಕಿಸ್ತಾನಕ್ಕೆ ಹೋಗಬಹುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದರು.

ಈ ಸಂಬಂಧ ಪ್ರತಿಕ್ರಿಯಿಸಿರುವ ಹಿರಿಯ ಬಿಜೆಪಿ ಮುಖಂಡ ಎಸ್ .ಸುರೇಶ್ ಕುಮಾರ್, 50ರ ದಶಕದಲ್ಲಿ ದೇಶದ ಅಂದಿನ  ಸರ್ವೋಚ್ಚ ನಾಯಕರೊಬ್ಬರು "I will crush this RSS" ಎಂದಿದ್ದರು.  ಭಾರತೀಯ ಜನಸಂಘದ ಸಂಸ್ಥಾಪಕ ಅಧ್ಯಕ್ಷ ಶಾಮ ಪ್ರಸಾದ ಮುಖರ್ಜಿ ರವರು ಇದಕ್ಕೆ ಪ್ರತಿಕ್ರಿಯಿಸುತ್ತಾ 'We will crush this crushing mentality" ಎಂದಿದ್ದರು.

"Crush" ಮಾಡುತ್ತೇನೆ ಎಂದವರು ಈಗ ಇಲ್ಲ.  ಆದರೆ ಸಂಘ ಇದೆ, ಬೆಳೆದಿದೆ, ಬೆಳೆಯುತ್ತಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಇದುವರೆಗೂ ಎರಡು (+1) ಬಾರಿ ನಿಷೇಧಿಸಲಾಗಿದೆ. ಆದರೆ ಇಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಎಷ್ಟು ಎತ್ತರಕ್ಕೆ, ಎಷ್ಟು ವಿಸ್ತಾರವಾಗಿ (ವಿದೇಶಗಳಲ್ಲಿ ಸಹ) ಬೆಳೆದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಯಾವ ಯಾವ ಕ್ಷೇತ್ರಗಳಲ್ಲಿ ಪರಿವಾರದ ಸಂಸ್ಥೆಗಳು ಮಹತ್ತರ ಕಾರ್ಯ ಮಾಡುತ್ತಿವೆ ಎಂಬುದೂ ಬಹಳ ಮಹತ್ವದ ಸಂಗತಿ.  ನಿಷೇಧಿಸುತ್ತೇವೆ" ಎಂದು  ವೀರಾವೇಶದಿಂದ ಧಮಕಿ ಹಾಕುವ ಮುನ್ನ ಈ ಎಲ್ಲಾ ವಿದ್ಯಮಾನವನ್ನು ಒಮ್ಮೆ ಅಧ್ಯಯನ ಮಾಡಿದರೆ ಧಮಕಿ ಹಾಕುವವರಿಗೆ ಒಳಿತು ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

ನಾವು ಕರ್ನಾಟಕವನ್ನ ಸರ್ವ ಜನಾಂಗದ ಶಾಂತಿಯ ತೋಟ ಮಾಡುವ ಪ್ರಯತ್ನದಲ್ಲಿದ್ದು, ಇದಕ್ಕೆ ಭಂಗ ತರುವ ಪ್ರಯತ್ನ ನಡೆದರೆ ಹಾಗೂ ಶಾಂತಿ ಕದಡಿದರೆ ಅದು ಬಜರಂಗದಳ ಅಥವಾ ಆರ್​ಎಸ್​ಎಸ್​ ಎಂಬುದನ್ನು ಪರಿಗಣಿಸುವುದಿಲ್ಲ. ಕಾನೂನನ್ನು ಯಾರು ಕೈಗೆತ್ತಿಕೊಳ್ಳಬಾರದು ಎಂದು ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com