ಕೊನೆಗೂ 24 ನೂತನ ಸಚಿವರ ಪಟ್ಟಿ ಪ್ರಕಟ, ನಾಳೆ ಬೆಳಗ್ಗೆ ಪದಗ್ರಹಣ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟ ಶನಿವಾರ ಬೆಳಗ್ಗೆ ವಿಸ್ತರಣೆಯಾಗಲಿದ್ದು, ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ನಾಳೆ ಪ್ರಮಾಣವಚನ ಸ್ವೀಕರಿಸಲಿರುವ 24 ನೂತನ ಸಚಿವ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟ ಶನಿವಾರ ಬೆಳಗ್ಗೆ ವಿಸ್ತರಣೆಯಾಗಲಿದ್ದು, ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ನಾಳೆ ಪ್ರಮಾಣವಚನ ಸ್ವೀಕರಿಸಲಿರುವ 24 ನೂತನ ಸಚಿವ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ.

ಸಂಪುಟ ವಿಸ್ತರಣೆ ಸಂಬಂಧ ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ತೀವ್ರ ಕಸರತ್ತು ನಡೆಸಿದ್ದ ಸಿದ್ದರಾಮಯ್ಯ ಅವರು ಹೈಕಮಾಂಡ್​ ನಾಯಕರೊಂದಿಗೆ ಅಂತಿಮ ಸುತ್ತಿನ ಚರ್ಚೆಯ ಬಳಿಕ ಇಂದು ರಾತ್ರಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

ನಾಳೆ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ 24 ಶಾಸಕರಿಗೂ ಸಿಎಂ ಸಿದ್ದರಾಮಯ್ಯ ಅವರು ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಚಾಮರಾಜನಗರ ಕ್ಷೇತ್ರದ ಶಾಸಕ ಸಿ ಪುಟ್ಟರಂಗಶೆಟ್ಟಿ ಅವರಿಗೆ ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಕೈತಪ್ಪಿದ್ದು, ಅವರನ್ನು ವಿಧಾನಸಭೆಯ ಡೆಪ್ಯೂಟಿ ಸ್ಪೀಕರ್ ಮಾಡಲಾಗಿದೆ.

ನೂತನ ಸಚಿವರ ಪಟ್ಟಿ

  1. ಎಚ್.ಕೆ.ಪಾಟೀಲ್
  2. ಕೃಷ್ಣ ಭೈರೇಗೌಡ
  3. ಚಲುವರಾಯಸ್ವಾಮಿ
  4. ಕೆ ವೆಂಕಟೇಶ್
  5. ಎಚ್.ಸಿ.ಮಹದೇವಪ್ಪ
  6. ಈಶ್ವರ ಖಂಡ್ರೆ
  7. ಕೆ.ಎನ್.ರಾಜಣ್ಣ
  8. ದಿನೇಶ್ ಗುಂಡೂರಾವ್
  9. ಶರಣಬಸಪ್ಪ ದರ್ಶನಾಪುರ
  10. ಶಿವಾನಂದ ಪಾಟೀಲ್
  11. ಆರ್.ಬಿ.ತಿಮ್ಮಾಪುರ
  12. ಎಸ್.ಎಸ್.ಮಲ್ಲಿಕಾರ್ಜುನ,
  13. ಶಿವರಾಜ ತಂಗಡಗಿ
  14. ಡಾ.ಶರಣ ಪ್ರಕಾಶ್ ಪಾಟೀಲ್
  15. ಮಂಕಾಳು ವೈದ್ಯ,
  16. ಲಕ್ಷ್ಮೀ ಹೆಬ್ಬಾಳ್ಕರ್​
  17. ರಹೀಂ ಖಾನ್
  18. ಡಿ.ಸುಧಾಕರ್
  19. ಸಂತೋಷ್ ಲಾಡ್​
  20. ಬೋಸರಾಜು
  21. ಬಿ.ಎಸ್.ಸುರೇಶ್
  22. ಮಧು ಬಂಗಾರಪ್ಪ
  23. ಎಂ.ಸಿ.ಸುಧಾಕರ್
  24. ಬಿ.ನಾಗೇಂದ್ರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com