ಕಾರವಾರ: ಉತ್ತರ ಕನ್ನಡ ಜಿಲ್ಲಾಡಳಿತವು ಐಎನ್‌ಎಸ್ ಕದಂಬ ನೌಕಾನೆಲೆಯಲ್ಲಿ ಮೀನುಗಾರರು ಮತ್ತು ನೌಕಾಪಡೆಯ ಅಧಿಕಾರಿಗಳ ನಡುವೆ ಸದ್ಯಕ್ಕೆ ಕಿತ್ತಾಟವನ್ನು ಬಗೆಹರಿಸಿ ಶಾಂತಿ ತಂದಂತಿದೆ. ಉತ್ತರ ಕನ್ನಡ ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ ಕರೆದ ಸಭೆಯಲ್ಲಿ ಮೀನುಗಾರರು ರಕ್ಷಣಾ ಸಿಬ್ಬಂದಿ ವಿರುದ್ಧ ನಾವು ಅವರ ಬ್ರೇಕ್‌ವಾಟರ್‌ಗಳ ಬಳಿ ಹೋದಾಗಲೆಲ್ಲಾ ಅವರು ನಮ್ಮ ಬಲೆಗಳನ್ನು ಕಿತ್ತುಕೊಳ್ಳುತ್ತಾರೆ ಎಂದು ದೂರು ನೀಡಿದ್ದಾರೆ.
ನಾವು ಬಡ ಮೀನುಗಾರರು. ಇದೇ ರೀತಿ ಮುಂದುವರಿದರೆ ಅಪಾರ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಮಾಜಾಳಿಯ ಮೀನುಗಾರ ಮುಖಂಡ ದೇವರಾಜ್ ಅಂಬಿಗ ಹೇಳಿದರು.
ಮೀನುಗಾರ ಮುಖಂಡ ರಾಜು ತಾಂಡೇಲ್, ನೌಕಾಪಡೆ ಅಧಿಕಾರಿಗಳಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮೀನುಗಾರರು ನೌಕಾಪಡೆಯಿಂದ ಗುರುತಿಸಲ್ಪಟ್ಟ ಗಡಿಯೊಳಗೆ ತಮ್ಮನ್ನು ತಾವು ನಿರ್ಬಂಧಿಸಿಕೊಂಡರೂ ಇನ್ನೂ ಕಿರುಕುಳವನ್ನು ಎದುರಿಸುತ್ತಾರೆ. ಮೀನುಗಾರರಿಂದ ತಪ್ಪುಗಳಿದ್ದರೂ ಕರಾವಳಿ ಪೊಲೀಸರು ಸಮಸ್ಯೆ ಬಗೆಹರಿಸಬೇಕೇ ಹೊರತು ನೌಕಾಪಡೆಯ ಸಿಬ್ಬಂದಿಯಲ್ಲ. ಜಿಲ್ಲಾಡಳಿತ ಮನಸ್ಸು ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದರು.
ಸಭೆಯಲ್ಲಿ ಪಾಲ್ಗೊಂಡಿದ್ದ ನೌಕಾಪಡೆಯ ಅಧಿಕಾರಿಗಳು, ತಮ್ಮ ಗಡಿಯ ಸಮೀಪವಿರುವ ನೀರಿನಲ್ಲಿ ಮೀನುಗಾರರ ಬಲೆಗಳಿಗೆ ಹಾನಿ ಮಾಡುವುದಿಲ್ಲ ಎಂದು ಭರವಸೆ ನೀಡಿದರು.
ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ನೌಕಾನೆಲೆಯ ಸಮೀಪವಿರುವ ಜಲಪ್ರದೇಶಕ್ಕೆ ಮೀನುಗಾರರನ್ನು ಪ್ರವೇಶಿಸದಂತೆ ತಡೆಯುವ ಹಿಂದಿನ ಕಾರಣಗಳನ್ನು ನೌಕಾಪಡೆಯ ಸಿಬ್ಬಂದಿ ವಿವರಿಸಲು ಪ್ರಯತ್ನಿಸಿದರು. ಮೀನುಗಾರಿಕೆಗೆ ನಿಗದಿತ ಗಡಿ ದಾಟದಂತೆ ಮೀನುಗಾರರಿಗೆ ಸೂಚನೆ ನೀಡಿದ ಕವಲಿಕಟ್ಟಿ, ನೌಕಾಪಡೆಗೆ ಮೀನುಗಾರರ ಮೇಲೆ ಕಠೋರವಾಗಿ ವರ್ತಿಸದಂತೆ ಸೂಚಿಸಿದರು. ತಪ್ಪಾಗಿ ಮೀನುಗಾರರು ನೌಕಾಪಡೆಯ ಗಡಿ ಅಥವಾ ನೌಕಾಪಡೆ ನಿರ್ಮಿಸಿದ ಬ್ರೇಕ್‌ವಾಟರ್‌ಗಳನ್ನು ಪ್ರವೇಶಿಸಿದರೆ, ಈ ಪ್ರದೇಶಕ್ಕೆ ಪ್ರವೇಶಿಸದಂತೆ ಹೇಳಿ ಅವರನ್ನು ವಾಪಸ್ ಕಳುಹಿಸಬೇಕು ಎಂದು ಹೇಳಿದರು.
ಹಲವಾರು ಹಿರಿಯ ಸರ್ಕಾರಿ ಅಧಿಕಾರಿಗಳು, ಮೀನುಗಾರ ಮುಖಂಡರು ವಿನಾಯಕ ಹರಿಕಂತ್ರ ಮತ್ತು ಹಲವಾರು ನೌಕಾಪಡೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
Advertisement