ಸತೀಶ್ ಜಾರಕಿಹೊಳಿ
ರಾಜ್ಯ
ಬೆಳಗಾವಿ ಜಿಲ್ಲೆ ವಿಭಜನೆ ಆಗಲೇಬೇಕು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ ಜಿಲ್ಲೆ ಭೌಗೋಳಿಕವಾಗಿ ಅತಿ ದೊಡ್ಡ ಜಿಲ್ಲೆಯಾಗಿದ್ದು ವಿಭಜನೆ ಆಗಲೇಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ: ಬೆಳಗಾವಿ ಜಿಲ್ಲೆ ಭೌಗೋಳಿಕವಾಗಿ ಅತಿ ದೊಡ್ಡ ಜಿಲ್ಲೆಯಾಗಿದ್ದು ವಿಭಜನೆ ಆಗಲೇಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲಾ ವಿಭಜನೆಗೆ ನಾವು ಬದ್ದ, ಜಿಲ್ಲಾ ವಿಭಜನೆ ಆಗಲೇಬೇಕು ಅದರಲ್ಲಿ ಪ್ರಶ್ನೆ ಇಲ್ಲಾ ಎಂದರು. ನಾವು ಮುಖ್ಯಮಂತ್ರಿಗೆ ಮನವಿ ಮಾಡುತ್ತೇವೆ, ಒತ್ತಡ ಮಾಡುತ್ತೇವೆ ಎಂದಿದ್ದಾರೆ.
ಬೆಳಗಾವಿ ಬಹಳ ದೊಡ್ಡ ಜಿಲ್ಲೆ ಆಡಳಿತ ನಡೆಸುವುದು ಅಷ್ಟು ಸುಲಭ ಅಲ್ಲ. ಜಿಲ್ಲೆ ವಿಭಜನೆಯಾದರೂ ಮೂರು ಜಿಲ್ಲೆ ಒಳಗೆ ಎಂಟ್ರಿ ಇದೆ. ಗೋಕಾಕ್ ಆದ್ರೂ, ಚಿಕ್ಕೋಡಿ ಆದ್ರೂ ಮೂರು ಜಿಲ್ಲೆಯಾದ್ರೂ ನಂಗೆ ಎಂಟ್ರಿ ಇದೆ.
ಜಿಲ್ಲಾ ವಿಭಜನೆ ಮನವಿ ಮಾಡಲು ಎಲ್ಲರಿಗೂ ಹಕ್ಕಿದೆ ಎಂದರು. ಸಭೆಗೆ ಬಿಜೆಪಿ ಶಾಸಕರ ಗೈರು ವಿಚಾರವಾಗಿ ಮಾತನಾಡಿದ ಅವರು, ಎನಾದ್ರೂ ಕೆಲಸ ಇದ್ದಿರಬೇಕು ಅದಕ್ಕೆ ಬಂದಿಲ್ಲ. ಅವರ ಪರವಾಗಿ ನಾನು ಚರ್ಚೆ ಮಾಡುತ್ತೇನೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ