ದೇಶದಲ್ಲಿ ಅಕ್ಕಿ ಉತ್ಪಾದನೆ ಕುಸಿತ: ರಾಜ್ಯದ ಅನ್ನ ಭಾಗ್ಯ ಯೋಜನೆಗೆ ಹಿನ್ನಡೆ ಸಾಧ್ಯತೆ!

ದೇಶದಲ್ಲಿ ಒಟ್ಟಾರೆ ಅಕ್ಕಿ ಉತ್ಪಾದನೆ ಶೇ.9ರಷ್ಟು ಕುಸಿದಿದೆ. ಇದು ಈಗಾಗಲೇ ಅನ್ನ ಭಾಗ್ಯ ಯೋಜನೆಗೆ ಅಕ್ಕಿ ಸಂಗ್ರಹಿಸಲು ಹೆಣಗಾಡುತ್ತಿರುವ ರಾಜ್ಯ ಸರ್ಕಾರಕ್ಕೆ ಕೆಟ್ಟ ಸುದ್ದಿಯಾಗಿದೆ. ಒಂದು ವೇಳೆ ಅಕ್ಕಿ ಸಂಗ್ರಹಣೆಯಲ್ಲಿ ಮಾರುಕಟ್ಟೆ ಶಕ್ತಿಗಳು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ದೇಶದಲ್ಲಿ ಒಟ್ಟಾರೆ ಅಕ್ಕಿ ಉತ್ಪಾದನೆ ಶೇ.9ರಷ್ಟು ಕುಸಿದಿದೆ. ಇದು ಈಗಾಗಲೇ ಅನ್ನ ಭಾಗ್ಯ ಯೋಜನೆಗೆ ಅಕ್ಕಿ ಸಂಗ್ರಹಿಸಲು ಹೆಣಗಾಡುತ್ತಿರುವ ರಾಜ್ಯ ಸರ್ಕಾರಕ್ಕೆ ಕೆಟ್ಟ ಸುದ್ದಿಯಾಗಿದೆ. ಒಂದು ವೇಳೆ ಅಕ್ಕಿ ಸಂಗ್ರಹಣೆಯಲ್ಲಿ ಮಾರುಕಟ್ಟೆ ಶಕ್ತಿಗಳು ಮೇಲುಗೈ ಸಾಧಿಸಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಗೆ ಭಾರೀ ಹೊಡೆದು ಬೀಳುವ ಸಾಧ್ಯತೆ ಇದೆ.

ಸಾಮಾನ್ಯವಾಗಿ ಕಟಾವು ಆದ ಕೂಡಲೇ ಮಾರಾಟ ಮಾಡುವ ಭತ್ತದ ಬೆಳೆಗಾರರು, ಈಗ ಕಾದು ನೋಡುವ ನೀತಿಯನ್ನು ಅಳವಡಿಸಿಕೊಂಡಂತಿದೆ. ಕಾರಣ ಕರ್ನಾಟಕದಲ್ಲಿ ಅಕ್ಕಿ ಉತ್ಪಾದನೆಯು ಸುಮಾರು ಶೇ. 14 ರಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ.

ತಜ್ಞರ ಪ್ರಕಾರ, ದೇಶದಲ್ಲಿ ಅಕ್ಕಿ ಉತ್ಪಾದನೆ ಕುಸಿದಿರುವುದರಿಂದ ಬೆಲೆಗಳು ತೀವ್ರವಾಗಿ ಹೆಚ್ಚಾಗುವ ನಿರೀಕ್ಷೆಯಿದೆ. ಈ ಅನಿಶ್ಚಿತ ಪರಿಸ್ಥಿತಿಯಲ್ಲಿ, ಯಾವುದೇ ಅಕ್ಕಿ ಗಿರಣಿದಾರರು ಖರೀದಿಸಲು ಮುಂದೆ ಬರುವುದಿಲ್ಲ. ಕೊರತೆಯು ಅಕ್ಕಿಯ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ್ ಲಾಹೋಟಿ ಅವರು ಹೇಳಿದ್ದಾರೆ.

ಭಾರತೀಯ ಆಹಾರ ನಿಗಮದ ಪ್ರಕಾರ, ಕಳೆದ ವರ್ಷ ಇದೇ ಅವಧಿಯಲ್ಲಿ 114 ಲಕ್ಷ ಟನ್‌ಗಳಷ್ಟು ಅಕ್ಕಿ ಸಂಗ್ರಹಿಸಲಾಗಿತ್ತು. ಆದರೆ ಈ ಬಾರಿ ಅಕ್ಟೋಬರ್ 31 ರವರೆಗೆ 103 ಲಕ್ಷ ಟನ್‌ಗಳಷ್ಟು ಅಕ್ಕಿ ಮಾತ್ರ ಸಂಗ್ರಹಿಸಲಾಗಿದೆ. 11 ಲಕ್ಷ ಟನ್‌ಗಳ ಕೊರತೆಯಿದೆ. 

ರಾಜ್ಯವಾರು ಅಂಕಿಅಂಶಗಳಲ್ಲಿ, ದೊಡ್ಡ ಅಕ್ಕಿ ಉತ್ಪಾದಿಸುವ ರಾಜ್ಯಗಳಲ್ಲಿ ಪಂಜಾಬ್ ತೀವ್ರ ಕುಸಿತವನ್ನು ದಾಖಲಿಸಿದೆ. ವಾರ್ಷಿಕ ಅಕ್ಕಿ ಸಂಗ್ರಹಣೆಯು 62.47 ಲಕ್ಷ ಟನ್‌ಗಳಿಗೆ ಇಳಿದಿದೆ, ಸುಮಾರು ಶೇ. 13 ರಷ್ಟು ಕುಸಿತವಾಗಿದೆ. ತಮಿಳುನಾಡಿನಲ್ಲಿ ಅಕ್ಕಿ ಸಂಗ್ರಹಣೆಯು 3.06 ಲಕ್ಷ ಟನ್‌ಗಳಿಗೆ ಅಂದರೆ ಶೇ. 41 ರಷ್ಟು ಕುಸಿದಿದೆ. 

ಪ್ರಕೃತಿಯ ವೈಪರೀತ್ಯಗಳಿಂದಾಗಿ ಅಕ್ಕಿ ಉತ್ಪಾದನೆಯಲ್ಲಿ ಗಣನೀಯ ಕುಸಿತವಾಗಿದೆ ಎಂದು ಎಫ್‌ಸಿಐ ಮಾಜಿ ಅಧ್ಯಕ್ಷ ಡಿವಿ ಪ್ರಸಾದ್ ಅವರು ತಿಳಿಸಿದ್ದಾರೆ.

‘ಅಕ್ಕಿ ಉತ್ಪಾದನೆ ಇಳಿಕೆ ದೊಡ್ಡ ಸವಾಲು’
ಅಕ್ಕಿ ಉತ್ಪಾದನೆಯಲ್ಲಿನ ಕುಸಿತವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ದೊಡ್ಡ ಸವಾಲಾಗಿದೆ ಎಂದು ಆಹಾರ ಭದ್ರತಾ ತಜ್ಞರು ಹೇಳಿದ್ದಾರೆ. 

ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೀಡುವ ಪ್ರತಿ ವ್ಯಕ್ತಿಗೆ 5 ಕೆಜಿಯ ಮೇಲೆ ಪರಿಣಾಮ ಬೀರಬಹುದು ಎಂದು ಕೆಲವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com