ಒಎಂಆರ್ ಶೀಟ್ ದುರ್ಬಳಕೆ ಆಗಿಲ್ಲ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ವಿವಿಧ ಮಂಡಳಿಗಳು ಮತ್ತು ನಿಗಮಗಳಲ್ಲಿನ ಪ್ರಥಮ ದರ್ಜೆ ಸಹಾಯಕ(ಎಫ್‌ಡಿಎ) ಹುದ್ದೆಗಳಿಗೆ ಇತ್ತೀಚೆಗೆ ನಡೆದ ಪರೀಕ್ಷೆಗಳಲ್ಲಿ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್(ಒಎಂಆರ್) ಶೀಟ್‌ಗಳ ದುರ್ಬಳಕೆಯಾಗಿಲ್ಲ ಎಂದು ಕರ್ನಾಟಕ ಪರೀಕ್ಷಾ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವಿವಿಧ ಮಂಡಳಿಗಳು ಮತ್ತು ನಿಗಮಗಳಲ್ಲಿನ ಪ್ರಥಮ ದರ್ಜೆ ಸಹಾಯಕ(ಎಫ್‌ಡಿಎ) ಹುದ್ದೆಗಳಿಗೆ ಇತ್ತೀಚೆಗೆ ನಡೆದ ಪರೀಕ್ಷೆಗಳಲ್ಲಿ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್(ಒಎಂಆರ್) ಶೀಟ್‌ಗಳ ದುರ್ಬಳಕೆಯಾಗಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಸ್ಪಷ್ಟಪಡಿಸಿದೆ.

ಪ್ರಶ್ನೆ ಪತ್ರಿಕೆ ಮತ್ತು ಹಾಲ್ ಟಿಕೆಟ್ ಸೇರಿದಂತೆ ಒಎಂಆರ್ ಶೀಟ್‌ನ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿದ ನಂತರ ಕೆಇಎ ಈ ಸ್ಪಷ್ಟನೆ ನೀಡಿದೆ.

ಯಾರು ಫೋಟೋ ತೆಗೆದಿದ್ದಾರೆ ಮತ್ತು ಅದು ವಿದ್ಯಾರ್ಥಿಯಾಗಿದ್ದರೆ, ಪರೀಕ್ಷೆಗಳು ನಡೆಯುತ್ತಿರುವಾಗ ಅವರು ಫೋನ್‌ ಹೇಗೆ ತೆಗೆದುಕೊಂಡು ಹೋದರು ಎಂಬಂತಹ ಪ್ರಶ್ನೆಗಳನ್ನು ಅದು ಎತ್ತಿದೆ. ಇನ್ವಿಜಿಲೇಟರ್ ಸಹಿ ಮಾಡಬೇಕಾದ ಹಾಲ್ ಟಿಕೆಟ್‌ನಲ್ಲಿ ಅಭ್ಯರ್ಥಿಯ ಫೋಟೋ ಇಲ್ಲದೆ ಸಹಿ ಮಾಡಿರುವುದು ನಿಯಮಗಳಿಗೆ ವಿರುದ್ಧವಾದ ಮತ್ತೊಂದು ದೋಷವಾಗಿದೆ. ಈ ಪೋಸ್ಟ್ ವಿವಿಧ ಜಿಲ್ಲೆಗಳಲ್ಲಿ ನಡೆಸಿದ ಪರೀಕ್ಷೆಗಳ ನ್ಯಾಯಸಮ್ಮತತೆಯನ್ನು ಪ್ರಶ್ನಿಸುತ್ತಿದೆ.

ಒಎಂಆರ್ ಶೀಟ್‌ಗಳಿಗೆ ಸಂಬಂಧಿಸಿದಂತೆ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಎಸ್ ಅವರು ಗುರುವಾರ ಹೇಳಿದ್ದಾರೆ. 

ಪರೀಕ್ಷೆ ಬರೆಯುವಾಗ ಬ್ಲೂಟೂತ್ ಬಳಸಲು ಯತ್ನಿಸಿದವರನ್ನು ಪರೀಕ್ಷೆಯ ದಿನ ಬೆಳಗ್ಗೆಯೇ ಗುರುತಿಸಿ ಪೊಲೀಸರಿಗೆ ಒಪ್ಪಿಸಲಾಯಿತು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ, ಒಎಂಆರ್ ಶೀಟ್‌ಗಳ ದುರ್ಬಳಕೆಯಾಗಿದೆ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com