ಫಾಕ್ಸ್‌ಕಾನ್‌ ಸ್ಥಳಾಂತರಕ್ಕೆ ಡಿಕೆಶಿ ಪತ್ರ ಆರೋಪ: ಬೆಂಗಳೂರಿನಲ್ಲಿ ಕೆಸಿಆರ್ ವಿರುದ್ಧ ಕೇಸ್ ದಾಖಲು

ಆಪಲ್ ಏರ್‌ಪಾಡ್ಸ್ ಉತ್ಪಾದನಾ ಘಟಕವನ್ನು ಹೈದರಾಬಾದ್ ನಿಂದ ಬೆಂಗಳೂರಿಗೆ ಸ್ಥಳಾಂತರಿಸುವಂತೆ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಫಾಕ್ಸ್‌ಕಾನ್‌ಗೆ ಪತ್ರ ಬರೆದಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು..
ಕೆ. ಚಂದ್ರಶೇಖರ್ ರಾವ್
ಕೆ. ಚಂದ್ರಶೇಖರ್ ರಾವ್

ಬೆಂಗಳೂರು: ಆಪಲ್ ಏರ್‌ಪಾಡ್ಸ್ ಉತ್ಪಾದನಾ ಘಟಕವನ್ನು ಹೈದರಾಬಾದ್ ನಿಂದ ಬೆಂಗಳೂರಿಗೆ ಸ್ಥಳಾಂತರಿಸುವಂತೆ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಫಾಕ್ಸ್‌ಕಾನ್‌ಗೆ ಪತ್ರ ಬರೆದಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಶನಿವಾರ ಆರೋಪಿಸಿದ್ದಾರೆ.

ಡಿಕೆ ಶಿವಕುಮಾರ್ ಹೈದರಾಬಾದ್‌ನಲ್ಲಿರುವ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಂಪನಿಗಳಿಗೆ ತಮ್ಮ ಕಾರ್ಖಾನೆಗಳನ್ನು ಕರ್ನಾಟಕಕ್ಕೆ ಸ್ಥಳಾಂತರಿಸುವಂತೆ ಪತ್ರ ಬರೆದಿದ್ದಾರೆ ಎಂದು ಕೆಸಿಆರ್ ದೂರಿದ್ದಾರೆ.

ಕೆಸಿಆರ್ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಡಿಕೆ ಶಿವಕುಮಾರ್ ಅವರು, ಕೆಸಿಆರ್ ಅವರು ಮಾಡುತ್ತಿರುವ ಆರೋಪ ನಕಲಿಯಾಗಿದ್ದು, ನಕಲಿ ಪತ್ರ ಸೃಷ್ಟಿಸಿದ ತೆಲಂಗಾಣ ಸಿಎಂ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕ ಸರ್ಕಾರ, ನಿರ್ದಿಷ್ಟವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೈದರಾಬಾದ್ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಭಾರತ್ ರಾಷ್ಟ್ರ ಸಮಿತಿ(ಬಿಆರ್‌ಎಸ್) ಆರೋಪಿಸಿದೆ.

"ಹೈದರಾಬಾದ್ ವಿರುದ್ಧ ಕರ್ನಾಟಕ ಕಾಂಗ್ರೆಸ್ ಸರ್ಕಾರ ಭಾರೀ ಷಡ್ಯಂತ್ರ ರೂಪಿಸಿದೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕಂಪನಿಗಳನ್ನು ಹೈದರಾಬಾದ್ ಕರ್ನಾಟಕಕ್ಕೆ ಸ್ಥಳಾಂತರಿಸಲು ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೊಡ್ಡ ಸಂಚು ರೂಪಿಸಿದ್ದಾರೆ" ಎಂದು ಬಿಆರ್‌ಎಸ್ "ಎಕ್ಸ್" ನಲ್ಲಿ ಪೋಸ್ಟ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com