ಜಮೀನು ವಿವಾದ: ಸುಡುಗಾಡು ಸಿದ್ದರ 45 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಶಿಕ್ಷೆ; ನಿತ್ಯವೂ ನರಕಯಾತನೆ!

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಗ್ರಾಮದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸುಡಗಾಡು ಸಿದ್ದರು ಸಮುದಾಯದ  45 ಕುಟುಂಬಗಳಿಗೆ ಸದಸ್ಯರೇ ಬಹಿಷ್ಕಾರ ಹಾಕಿದ್ದಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಪ್ಪಳ: ಉತ್ತರ ಕರ್ನಾಟಕದ ಈ ಬುಡಕಟ್ಟು ಸಮುದಾಯದ ಸದಸ್ಯರು ತಮ್ಮ ಸಂಬಂಧಿಕರನ್ನು ಭೇಟಿ ಮಾಡಿ, ಮದುವೆಗಾಗಿ ಮೈತ್ರಿಗಳನ್ನು ಕಂಡುಕೊಂಡರು ಅಥವಾ ಹಳ್ಳಿಯ ಜಾತ್ರೆಗೆ ಹಾಜರಾಗಿ ಆರು ತಿಂಗಳಿಗಿಂತ ಹೆಚ್ಚು ಕಾಲ ಕಳೆದಿದೆ.

ಏಕೆಂದರೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಗ್ರಾಮದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸುಡಗಾಡು ಸಿದ್ದರು ಸಮುದಾಯದ  45 ಕುಟುಂಬಗಳಿಗೆ ಸದಸ್ಯರೇ ಬಹಿಷ್ಕಾರ ಹಾಕಿದ್ದಾರೆ.

ಇದೀಗ ತಮಗೆ ನೀಡುತ್ತಿರುವ ಕಿರುಕುಳ ತಡೆಯುವಂತೆ ಕೋರಿ ಕುಟುಂಬಸ್ಥರು ಕೊಪ್ಪಳ ಪೊಲೀಸರ ಮೊರೆ ಹೋಗಿದ್ದಾರೆ. ಡೊಕ್ಕಣ್ಣವರ್ ವಂಶಸ್ಥರಾಗಿದ್ದು, 27.8 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಹಲವು ದಶಕಗಳಿಂದ ದೊಡ್ಡಕಣ್ಣನವರ ಒಡೆತನದಲ್ಲಿದ್ದ ಜಮೀನಿಗೆ ಗ್ರಾಮದ ಮೂರು ಕುಟುಂಬಗಳಿಗೆ ಒಂದು ವರ್ಷದ ಹಿಂದೆ ಹಕ್ಕುಪತ್ರ ನೀಡಿದ್ದರಿಂದ ಸಮಸ್ಯೆ ಆರಂಭವಾಗಿದೆ. ಕುಲ ಪಂಚಾಯಿತಿಗೆ ಬಾರದೇ ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ ಎನ್ನುವ ಕಾರಣಕ್ಕಾಗಿ ಕಾಡಸಿದ್ದ ಜನಾಂಗದ 45 ಕುಟುಂಬಗಳಿಗೆ ಬಹಿಷ್ಕಾರ ಹಾಕಲಾಗಿದೆ.

ಗಡ್ಡಿ, ಒಂಟೆತ್ತಿನ, ಕುಮ್ಮಾವರಿ ಕುಟುಂಬದವರು ಕುಲಪಂಚಾಯಿತಿಯಲ್ಲಿ ಪ್ರಶ್ನೆ ಮಾಡಿದ್ದಾರೆ. 6 ಲಕ್ಷ ರು. ಪಾವತಿ ಮಾಡಿ ಕುಲಪಂಚಾಯಿತಿ ಹಿರಿಯರಲ್ಲಿ ನ್ಯಾಯ ಕೇಳಿದ್ದಾರೆ. ಅದರಂತೆ ಡೊಕ್ಕಣ್ಣವರ ಕುಟುಂಬದವರಿಗೆ ₹6 ಲಕ್ಷ ಪಾವತಿ ಮಾಡುವಂತೆ ಹೇಳಿದ್ದಾರೆ. ಇವರು ಕೊಡದೇ ನ್ಯಾಯಾಲಯದ ಮೆಟ್ಟಿಲು ಏರಿದ್ದರಿಂದ 2022ರ ಆಗಸ್ಟ್ 16ರಂದು ಕುಲಪಂಚಾಯಿತಿಯಲ್ಲಿ ಡೊಕ್ಕಣ್ಣವರ ಕುಟುಂಬದವರಿಗೆ ಬಹಿಷ್ಕಾರ ಹಾಕಿದ್ದಾರೆ. ಈ 45 ಕುಟುಂಬದವರನ್ನು ಸಮಾಜದಿಂದ ಕಳೆದ ಒಂದೂವರೆ ವರ್ಷದಿಂದ ದೂರ ಇಟ್ಟಿದ್ದಾರೆ.

ದೊಡ್ಡಕಣ್ಣವರ ಕುಟುಂಬಗಳ ಪೈಕಿ 12 ಮಂದಿ ತಾವರಗೇರಾದಲ್ಲಿ ವಾಸವಾಗಿದ್ದರೆ, ಇತರರು ಗದಗ, ಧಾರವಾಡ, ಕೊಪ್ಪಳದ ಇತರ ಭಾಗಗಳಲ್ಲಿ ವಾಸಿಸುತ್ತಿದ್ದಾರೆ. ಕುಷ್ಟಗಿ ತಾಲೂಕಿನ ತಾವರಗೇರಾ ಗ್ರಾಮದ ಬಸವಣ್ಣಿ ಕ್ಯಾಂಪ್ ನಿವಾಸಿಗಳಾದ ಡೊಕ್ಕಣ್ಣವರ ಎನ್ನುವ 45 ಕುಟುಂಬಗಳು ಕಳೆದ ಒಂದೂವರೆ ವರ್ಷದಿಂದ ತಮ್ಮದೇ ಸಮಾಜದಿಂದ ಬಹಿಷ್ಕಾರಕ್ಕೆ ತುತ್ತಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ.  ಸಂಗನಾಳದಲ್ಲಿರುವ 27 ಎಕರೆ ಜಮೀನು ವಿವಾದದಿಂದ ಕುಲಪಂಚಾಯಿತಿಯಲ್ಲಿ ಅವರಿಗೆ ಬಹಿಷ್ಕಾರ ಹಾಕಿರುವುದರಿಂದ ರಾಜ್ಯಾದ್ಯಂತ ಡೊಕ್ಕಣ್ಣವರ ಕುಟುಂಬದವರನ್ನು ಉಳಿದ ಕಾಡಸಿದ್ದರು ಬಹಿಷ್ಕಾರ ಹಾಕಿ ದೂರ ಇಟ್ಟಿದ್ದಾರೆ.

ಆರು ತಿಂಗಳ ಹಿಂದೆ ಗ್ರಾಮಸ್ಥರು ನಮ್ಮ ಕುಟುಂಬಗಳಿಗೆ ಬಹಿಷ್ಕಾರ ಹಾಕಿದ ನಂತರ, ಮದುವೆಗೆ ಸಿದ್ಧರಾಗಿರುವ ನಮ್ಮ ಯುವಕರಿಗೆ ವಧುಗಳು ಸಿಗುತ್ತಿಲ್ಲ. ಗ್ರಾಮದ ಮೂರು ಕುಟುಂಬಗಳು ನಮ್ಮ ಜಮೀನಿನ ಮಾಲೀಕತ್ವದ ಹಕ್ಕು ಪಡೆದ ತಕ್ಷಣ ನಾವು ಪೊಲೀಸರಿಗೆ ದೂರು ನೀಡಿದ್ದೇವೆ. ಅವರ ಹಕ್ಕುಗಳನ್ನು ಸಾಬೀತುಪಡಿಸಲು ಕಾನೂನು ದಾಖಲೆಗಳನ್ನು ಒದಗಿಸಲು  ನಾವು ಅವರನ್ನು ವಿನಂತಿಸಿದ್ದೇವೆ, ಆದರೆ ಅವರು ಮಾಡಲಿಲ್ಲ. ನ್ಯಾಯಾಲಯದ ಮೊರೆ ಹೋಗದಂತೆ ಸ್ಥಳೀಯ ಪಂಚಾಯಿತಿ ತಡೆದಿದೆ ಎಂದು ಬುಡಕಟ್ಟು ಕುಟುಂಬದ ಸದಸ್ಯರಲ್ಲೊಬ್ಬರಾದ ರಾಜಶೇಖರ್ ಕೆ. ತಿಳಿಸಿದ್ದಾರೆ.

ನಾವು ನಮ್ಮ ಸಂಬಂಧಿಕರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ತಾವರಗೇರಾದಲ್ಲಿರುವವರು ದಿನಸಿ ಖರೀದಿಸಲು ಬೇರೆ ಗ್ರಾಮಗಳಿಗೆ ಹೋಗಬೇಕಾಗಿದೆ. ಗ್ರಾಮದ ಜಾತ್ರೆಗೆ ಬರಲು ಅವಕಾಶವಿಲ್ಲ.  ಬಹಿಷ್ಕರಿಸಿದ ಕಾರಣ ಈ ವರ್ಷ ನಮ್ಮ ಅನೇಕ ಸಂಬಂಧಿಕರು ನಮ್ಮನ್ನು ಭೇಟಿ ಮಾಡಲಿಲ್ಲ ಎಂದು ಅವರು ಹೇಳಿದರು.

ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಕೊಪ್ಪಳ ಪೊಲೀಸರು ತಿಳಿಸಿದ್ದಾರೆ. ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪಂಚಾಯಿತಿ ಸದಸ್ಯರೊಂದಿಗೆ ಸಭೆ ನಡೆಸುವ ನಿರೀಕ್ಷೆ ಇದೆ ಎಂದು ಕುಷ್ಟಗಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com