MSIL ಚಿಟ್ ಫಂಡ್ ನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ರಾಜ್ಯ ಸರ್ಕಾರದ ಚಿಂತನೆ

ಗ್ಯಾರಂಟಿ ಯೋಜನೆಗಳಡಿ ಮಹಿಳೆಯರು ಹಣಕಾಸಿನ ನೆರವು  ಪಡೆಯುತ್ತಿರುವುದರಿಂದ, ರಾಜ್ಯ ಸರ್ಕಾರ MSIL ಚಿಟ್ ಫಂಡ್ ವ್ಯವಹಾರವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಚಿಂತನೆ ನಡೆಸಿದ್ದು, ಶೀಘ್ರದಲ್ಲಿ ಆ್ಯಪ್ ಬಿಡುಗಡೆಯಾಗಲಿದೆ.
ಎಂಬಿ ಪಾಟೀಲ್
ಎಂಬಿ ಪಾಟೀಲ್

ಬೆಂಗಳೂರು: ಗ್ಯಾರಂಟಿ ಯೋಜನೆಗಳಡಿ ಮಹಿಳೆಯರು ಹಣಕಾಸಿನ ನೆರವು  ಪಡೆಯುತ್ತಿರುವುದರಿಂದ, ರಾಜ್ಯ ಸರ್ಕಾರ MSIL ಚಿಟ್ ಫಂಡ್ ವ್ಯವಹಾರವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಚಿಂತನೆ ನಡೆಸಿದ್ದು, ಶೀಘ್ರದಲ್ಲಿ ಆ್ಯಪ್ ಬಿಡುಗಡೆಯಾಗಲಿದೆ.  

ಪ್ರತಿ ಕುಟುಂಬ ಪ್ರತಿ ತಿಂಗಳು ಅಂದಾಜು ರೂ, 4,000 ರಿಂದ 5,000 ಹಣಕಾಸು ನೆರವು ಪಡೆಯುತ್ತಿದ್ದು, ಜನರಲ್ಲಿ ಉಳಿತಾಯ ಮನೋಭಾವ ಬೆಳೆಸಿ ಆರ್ಥಿಕ ಪ್ರಗತಿ ಸಾಧನೆ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ. ಗೃಹ ಲಕ್ಷ್ಮಿ ಯೋಜನೆಯಡಿ 93 ಲಕ್ಷ ಮಹಿಳೆಯರು ಪ್ರತಿ ತಿಂಗಳು 2,000 ರೂ.ಪಡೆಯುತ್ತಿದ್ದು,  ಉಚಿತ ಬಸ್ ಪ್ರಯಾಣದ  ಶಕ್ತಿ ಯೋಜನೆಯಿಂದಲೂ ಹಣವನ್ನು ಉಳಿಸುತ್ತಿದ್ದಾರೆ. ಈ ಮಹಿಳೆಯರು ಉಳಿತಾಯ ಆರಂಭಿಸುವಂತೆ ಯೋಜನೆ ರೂಪಿಸಲಾಗಿದೆ. 

ಇದಕ್ಕಾಗಿ, 305 ಕೋಟಿ ರೂಪಾಯಿ ವಹಿವಾಟು ಮತ್ತು 22,000 ಕಡಿಮೆ ಚಂದಾದಾರರನ್ನು ಹೊಂದಿರುವ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (MSIL) ನಡೆಸುತ್ತಿರುವ ಚಿಟ್ ಫಂಡ್ ವ್ಯವಹಾರವನ್ನು ವಿಸ್ತರಿಸಲು ಮುಂದಾಗಿದೆ. 

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಭಾರಿ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್, ಎಂಎಸ್ ಐಎಲ್  ಭಾರತದ ಪ್ರಮುಖ ಚಿಟ್ ಫಂಡ್ ಮಾಡುವ ಮೂಲಕ ಚಿಟ್ ಫಂಡ್ ವಲಯವನ್ನು ಉನ್ನತ ಸ್ಥಾನಕ್ಕೆ ಒಯ್ಯಲು ಕರ್ನಾಟಕವು ಮಹತ್ತರ ಪ್ರಯಾಣ ಆರಂಭಿಸುತ್ತಿದೆ.ಎಂಎಸ್ ಐಎಲ್  ವಿಶ್ವಾಸಾರ್ಹ ಬ್ರ್ಯಾಂಡ್, ಸುಭದ್ರ, ಸುರಕ್ಷಿತ ಮತ್ತು ಪ್ರಗತಿ ವರ್ಧಕ, AI ಪ್ಲಾಟ್ ಫಾರ್ಮ್ ನಲ್ಲಿ ಇರಲಿದೆ ಕೆಲವೇ ವರ್ಷಗಳಲ್ಲಿ ರೂ. 300 ಕೋಟಿಯಿಂದ 10,000 ಕೋಟಿ ವಹಿವಾಟು ತಲುಪುವ ಗುರಿ ಹೊಂದಿದೆ ಎಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com