ನಂದಿನಿ ಸಿಹಿ ತಿನಿಸುಗಳಿಗೆ ಭರ್ಜರಿ ಬೇಡಿಕೆ: ದಸರಾ ವೇಳೆ 4 ಲಕ್ಷ ಕೆಜಿ ಸ್ವೀಟ್ಸ್ ಮಾರಾಟ!

ಈ ಬಾರಿಯ ದಸರಾದಲ್ಲಿ ರಾಜ್ಯ ಡೈರಿ ಸಹಕಾರಿ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) 400 ಮೆಟ್ರಿಕ್ ಟನ್‌ಗಳಷ್ಟು ಸಿಹಿತಿಂಡಿಗಳನ್ನು ಮಾರಾಟ ಮಾಡಿದ್ದು, ಇದು ಸಾರ್ವಕಾಲಿಕ ಗರಿಷ್ಠ ದಾಖಲೆಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಈ ಬಾರಿಯ ದಸರಾದಲ್ಲಿ ರಾಜ್ಯ ಡೈರಿ ಸಹಕಾರಿ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) 400 ಮೆಟ್ರಿಕ್ ಟನ್‌ಗಳಷ್ಟು ಸಿಹಿತಿಂಡಿಗಳನ್ನು ಮಾರಾಟ ಮಾಡಿದ್ದು, ಇದು ಸಾರ್ವಕಾಲಿಕ ಗರಿಷ್ಠ ದಾಖಲೆಯಾಗಿದೆ.

ಪ್ರತಿ ವರ್ಷ, ಕೆಎಂಎಪ್ 180  ಮೆಟ್ರಿಕ್ ಟನ್ ನಿಂದ  200 ಮೆಟ್ರಿಕ್ ಟನ್ ಮಾರಾಟ ಮಾಡುತ್ತದೆ, ಮೈಸೂರು ಪಾಕ್  ಅತಿ ಹೆಚ್ಚು ಮಾರಾಟವಾಗುವ ಪ್ರಮುಖ ಸಿಹಿಗಳಲ್ಲಿ  ಒಂದಾಗಿದೆ  ಮತ್ತು ಎಲ್ಲಾ ಹಬ್ಬಗಳಿಗೂ ಇದಕ್ಕೆ ಹೆಚ್ಚು ಬೇಡಿಕೆಯಿದೆ. ಇದೀಗ ದೀಪಾವಳಿ ಹೊಸ್ತಿಲಲ್ಲಿರುವಾಗಲೇ ಹೆಚ್ಚಿನ ಸಿಹಿತಿಂಡಿಗಳನ್ನು ಮಾರಾಟ ಮಾಡಲು ಒಕ್ಕೂಟ ಸಜ್ಜಾಗಿದೆ.

ಪ್ರಸಿದ್ಧ ಬ್ರ್ಯಾಂಡ್ ನಂದಿನಿ ಅಡಿಯಲ್ಲಿ, KMF ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ, ಅದರಲ್ಲಿ ಸಿಹಿತಿಂಡಿಗಳು ಜನಪ್ರಿಯವಾಗಿವೆ. ಕೆಲವು ಸಿಹಿ ವಿಧಗಳಲ್ಲಿ ಮೈಸೂರು ಪಾಕ್, ಚಾಕೊಲೇಟ್ ಬರ್ಫಿ, ಬೇಸನ್ ಲಾಡೂ, ಧಾರವಾಡ ಪೇಡಾ, ಜಾಮೂನ್, ಕುಂದಾ, ತೆಂಗಿನಕಾಯಿ ಬರ್ಫಿ, ಡ್ರೈ ಫ್ರೂಟ್ ಬರ್ಫಿ, ಮತ್ತು ಇನ್ನೂ ಅನೇಕ ಸ್ವೀಟ್ಸ್ ಸೇರಿವೆ.

ಈ ವರ್ಷದ ದಸರಾ  ಹಬ್ಬದ ವೇಳೆ ಸುಮಾರು 15 ದಿನಗಳಲ್ಲಿ 400 ಮೆಟ್ರಿಕ್ ಟನ್ (ಸುಮಾರು 4 ಲಕ್ಷ ಕೆಜಿ) ಸಿಹಿತಿಂಡಿಗಳನ್ನು ಮಾರಾಟ ಮಾಡಿದ್ದಾರೆ ಎಂದು ಕೆಎಂ ಎಪ್ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. "ಮೈಸೂರು ಪಾಕ್ ಮತ್ತು ನಂದಿನಿ ಪೇಡಾ ಹೆಚ್ಚು ಮಾರಾಟವಾಗಿದೆ" ಎಂದು ಅಧಿಕಾರಿ ಮಾಹಿತಿ ನೀಡಿದರು.

ಈಗ ದೀಪಾವಳಿ ಸಮಯದಲ್ಲಿಯೂ ಇದೇ ರೀತಿಯ ಮಾರಾಟಕ್ಕೆ ಕೆಎಂಎಫ್ ಸಜ್ಜಾಗಿದೆ. ಬೃಹತ್ ಆರ್ಡರ್ ತೆಗೆದುಕೊಳ್ಳಲು  ಅಧಿಕಾರಿಗಳನ್ನು ನೇಮಿಸಿದೆ, ಅದನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು. 20 ಕೆಜಿಗಿಂತ ಹೆಚ್ಚಿನ ಬೃಹತ್ ಆರ್ಡರ್‌ಗಳಿಗೆ ರಿಯಾಯಿತಿ ಇದೆ ಎಂದು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com